ಬೆಂಗಳೂರು : ವಯಸ್ಸಾದಂತೆ ಕೂದಲು ಬಿಳಿಯಾಗಲು ಪ್ರಾರಂಭವಾಗುತ್ತದೆ. ಆದರೆ ಅದಕ್ಕೂ ಮುನ್ನವೇ ಸಾಕಷ್ಟು ಮಂದಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾರೇ ಆಗಲಿ ಕಿರಿಯ ವಯಸ್ಸಿನಲ್ಲಿ ಬಿಳಿ ಕೂದಲು ಮೂಡುವುದನ್ನು ಸಹಿಸುವುದಿಲ್ಲ. ಈ ಸಮಸ್ಯೆಗೆ ಒಂದಲ್ಲ ಒಂದು ರೀತಿಯ ಪರಿಹಾರ ಹುಡುಕುತ್ತಾರೆ.  ಇದಕ್ಕಾಗಿ ನಾನಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಾರೆ. ಈ ಪ್ರಯತ್ನದಲ್ಲಿ ರಾಸಾಯನಿಕ ಉತ್ಪನ್ನಗಳತ್ತ ವಾಲುವ ಬದಲು ನೈಸರ್ಗಿಕ ಉತ್ಪನ್ನಗಳನ್ನು ಬಳಸಲು ಪ್ರಯತ್ನಿಸುವುದು ಒಳ್ಳೆಯದು. ಹೇರ್ ಕಲರ್ ಬಳಸುವುದಾದರೆ ಪ್ರತಿ 20 ರಿಂದ 25 ದಿನಗಳಿಗೊಮ್ಮೆ ಇದನ್ನೂ ಮತ್ತೆ ಮತ್ತೆ ಬಳಸಬೇಕಾಗುತ್ತದೆ. ರಾಸಾಯನಿಕ ಬಣ್ಣಗಳ ನಿರಂತರ ಬಳಕೆಯು ಕೂದಲು ಉದುರುವಿಕೆ, ಶುಷ್ಕತೆ ಮತ್ತು ಹಾನಿಗೆ ಕಾರಣವಾಗುತ್ತದೆ. 


COMMERCIAL BREAK
SCROLL TO CONTINUE READING

ಇದರ ಬದಲು ನೈಸರ್ಗಿಕ ಉತ್ಪನ್ನಗಳನ್ನು ಬಳಸಿದರೆ ಕೂದಲಿಗೆ ಕಪ್ಪು ಬಣ್ಣವೂ ಬರುವುದಲ್ಲದೆ, ಯಾವ ರೀತಿಯ ಅಡ್ಡ ಪರಿಣಾಮವೂ ಆಗುವುದಿಲ್ಲ. ಬಿಳಿ ಕೂದಲಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈ ಕೆಳಗಿನ ನೈಸರ್ಗಿಕ ವಸ್ತುಗಳನ್ನು ಬಳಸಿ ನೋಡಿ. 


ಇದನ್ನೂ ಓದಿ : ಬೆಳಗ್ಗೆ ಎದ್ದಾಕ್ಷಣ ಖಾಲಿಹೊಟ್ಟೆ ಈ 5 ಪದಾರ್ಥಗಳನ್ನು ಸೇವಿಸಿ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಂಗಮಾಯವಾಗುತ್ತೆ! 


ಬಿಳಿ ಕೂದಲಿಗೆ ಮೆಹೆಂದಿ : 
ಮೆಹೆಂದಿ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು ಅದು ಕೂದಲಿಗೆ  ನ್ಯಾಚುರಲ್ ಬಣ್ಣವನ್ನು ನೀಡುತ್ತದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಹೆನ್ನಾವನ್ನು ಈ ರೀತಿ ಬಳಸಬಹುದು.


ಇದನ್ನೂ ಓದಿ : ಮನೆಯಲ್ಲಿರುವ ಈ 4 ವಸ್ತುಗಳು ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತವೆ, ಟ್ರೈ ಮಾಡಿ ನೋಡಿ!


ಹೆನ್ನಾ ಮತ್ತು ಮೆಂತ್ಯೆ ಬೀಜಗಳು : 
3 ಸ್ಪೂನ್ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಬೀಜಗಳನ್ನು ಪುಡಿಮಾಡಿ ಪೇಸ್ಟ್ ಮಾಡಿ. ಇದರ ನಂತರ, 4 ಕರ್ಪೂರವನ್ನು ತೆಗೆದುಕೊಂಡು ಅದನ್ನು ಪುಡಿಮಾಡಿ. ಸುಮಾರು 3 ಚಮಚ ಗೋರಂಟಿ ಪುಡಿಯೊಂದಿಗೆ ಮೆಂತ್ಯೆ ಮತ್ತು ಕರ್ಪೂರವನ್ನು ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಕೂದಲಿಗೆ ಹಚ್ಚಿ. ಈ ಮಿಶ್ರಣ ನಿಮ್ಮ ಕೂದಲಿನ ಮೇಲೆ ಒಂದು ಗಂಟೆವರೆಗೆ ಹಾಗೆಯೇ ಇರಲಿ.   ನಂತರ ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಿಳಿ ಕೂದಲು ಕಪ್ಪಾಗಿರುತ್ತದೆ.  


ಗೋರಂಟಿ ಮತ್ತು ಇಂಡಿಗೋ : 
ಇಂಡಿಗೋ ಪುಡಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಈ ಪುಡಿಯನ್ನು ಬಳಸುವುದರಿಂದ, ನಿಮ್ಮ ಕೂದಲು ಗಾಢವಾದ  ಕಪ್ಪು ಬಣ್ಣವನ್ನು ಪಡೆಯುತ್ತದೆ. ಗೋರಂಟಿ ಮತ್ತು ಇಂಡಿಗೋ ಪುಡಿಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಅದರಲ್ಲಿ 2 ರಿಂದ 3 ಚಮಚ ಕಾಫಿ ಪುಡಿಯನ್ನು ಮಿಶ್ರಣ ಮಾಡಿ. ನೀರನ್ನು ಸೇರಿಸುವ ಮೂಲಕ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 2 ರಿಂದ 3 ಗಂಟೆಗಳ ಕಾಲ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.  


ಇದನ್ನೂ ಓದಿ : Onion Curry: ಮನೆಯಲ್ಲಿ ತರಕಾರಿ ಇಲ್ವಾ? ಈರುಳ್ಳಿಯಿದ್ದರೆ ಸಾಕು, ಹತ್ತೇ ನಿಮಿಷದಲ್ಲಿ ಮಾಡಿ ಈ ರುಚಿಯಾದ ಪಲ್ಯ


ಗೋರಂಟಿ ಮತ್ತು ನೆಲ್ಲಿಕಾಯಿ : 
ಬಿಳಿ ಕೂದಲನ್ನು ಕಪ್ಪಾಗಿಸಲು ನೆಲ್ಲಿಕಾಯಿ ಪುಡಿಯನ್ನು ಕೂಡಾ ಬಳಸಬಹುದು. ಬ್ಲಾಕ್ ಟೀಯನ್ನು ಚೆನ್ನಾಗಿ ಕುದಿಸಿ. ಅದಕ್ಕೆ ಗೋರಂಟಿ ಪುಡಿ, ನಿಂಬೆರಸ ಹಿಂಡಿ, ನೆಲ್ಲಿಕಾಯಿ ಪುಡಿ ಹಾಕಿ ಸ್ವಲ್ಪ ಕಾಫಿ ಪುಡಿ ಹಾಕಿ. ಈ ಮಿಶ್ರಣಕ್ಕೆ ಮೊಟ್ಟೆಯ ಹಳದಿ ಲೋಳೆಯನ್ನು ಕೂಡ ಸೇರಿಸಬಹುದು. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ 3-4 ಗಂಟೆಗಳ ಕಾಲ ಬಿಡಿ. ನಂತರ  ಕೂದಲನ್ನು ತೊಳೆಯಿರಿ. ಬಿಳಿ ಕೂದಲು ಕಪ್ಪಾಗಿ ಕಾಣಲು ಪ್ರಾರಂಭಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.