ಬೆಂಗಳೂರು : ವಯಸ್ಸು ಹೆಚ್ಚಾದಂತೆ ಕಪ್ಪು ಕೂದಲು ಬಿಳಿಯಾಗುವುದು ಸಾಮಾನ್ಯ. ಆದರೆ, ಈಗಿನ ಕಾಲದಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುವಂತಾಗಿದೆ.ಕಿರಿ ವಯಸ್ಸಿನಲ್ಲಿಯೇ ಬಿಳಿಯಾಗುವ ಕೂದಲು ಮುಜುಗರವನ್ನು ಉಂಟು ಮಾಡುತ್ತದೆ.ಇದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.  ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು ಅದು ಕೂಡಾ ಶಾಶ್ವತವಾಗಿ. 


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ಕಪ್ಪಾಗಿಸುವ ವಸ್ತುಗಳು : 
ಬ್ಲಾಕ್ ಟೀ :

ಬ್ಲಾಕ್ ಟೀ ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರವಾಗಿದೆ.ಇದು ಕೂದಲಿನ  ಟೋನರಿನಂತೆ ಕೆಲಸ ಮಾಡುತ್ತದೆ.ಚಹಾ ಪುಡಿಯನ್ನು ನೀರಿನಲ್ಲಿ ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡಿದಾಗ ನೀರು ಗಾಢವಾದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಕಪ್ಪಾದ ನೀರನ್ನು ಸ್ನಾನ ಮಾಡುವಾಗ,ಕೂದಲಿನ ತುದಿಯಿಂದ ಬುಡದವರೆಗೂ ಹಚ್ಚಬೇಕು.ಕೂದಲು ಸಂಪೂರ್ಣವಾಗಿ ಒಣಗಿದಾಗ,ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ : ಈ ಕೆಂಪು ಹೂವನ್ನು ತೆಂಗಿನೆಣ್ಣೆಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು 5 ನಿಮಿಷದಲ್ಲೇ ಗಾಢ ಕಪ್ಪಾಗಿ, ರೇಷ್ಮೆ ನೂಲಿನಂತಾಗುವುದು!


ಹರ್ಬಲ್ ಹೇರ್ ಮಾಸ್ಕ್:
ಅನೇಕ ಆಯುರ್ವೇದ ವಸ್ತುಗಳ ಸಹಾಯದಿಂದ ಮನೆಯಲ್ಲಿ ಹೇರ್ ಮಾಸ್ಕ್ ತಯಾರಿಸಬಹುದು.ಒಂದು ಚಮಚ ಇಂಡಿಗೊ, ಒಂದು ಚಮಚ ತ್ರಿಫಲ ಪುಡಿ, ಒಂದು ಚಮಚ ಬ್ರಾಹ್ಮಿ ಪುಡಿ, 2 ಚಮಚ ಬ್ಲಾಕ್ ಟೀ , ಒಂದು ಚಮಚ ಆಮ್ಲಾ ಪುಡಿ ಮತ್ತು ಒಂದು ಚಮಚ ಕಾಫಿಯನ್ನು ಒಂದು ಬೌಲ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ಅದಕ್ಕೆ ನೀರು ಹಾಕಿ ಕಡಿಮೆ ಉರಿಯಲ್ಲಿ  ಬಿಸಿ ಮಾಡಿ.ನಂತರ ಈ ಪೇಸ್ಟ್ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ ಮತ್ತು 30 ರಿಂದ 45 ನಿಮಿಷಗಳ ಬಿಡಿ. ನಂತರ ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಈ ಪೇಸ್ಟ್ ಅನ್ನು ಬಳಸುವದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.


ಮೆಂತ್ಯೆ ಬೀಜಗಳು:
ಮೆಂತ್ಯೆ ಬೀಜಗಳ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.ಮೆಂತ್ಯೆ  ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ನಂತರ ಈ ಕಾಳುಗಳನ್ನು ರುಬ್ಬಿ ಹೇರ್ ಮಾಸ್ಕ್ ನಂತೆ ಹಚ್ಚಿ. ಕೆಲವು ಗಂಟೆಗಳವರೆಗೆ ಒಣಗಲು ಬಿಡಿ.ಕೆಲವು ದಿನಗಳವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದರೆ,ಒಂದೂ ಬಿಳಿ ಕೂದಲು ಕಾಣಿಸುವುದಿಲ್ಲ. 


ಇದನ್ನೂ ಓದಿ : ನಿಂಬೆ ನೀರಿಗೆ ಇದನ್ನು ಬೆರೆಸಿ ಕುಡಿದರೆ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುವುದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.