ಮತ್ಸ್ಯ ಲೋಕ ಅಥವಾ ಅಕ್ವೇರಿಯಂ. ಇದು ಮನೆಯೊಳಗೊಂದು ಆಹ್ಲಾದಕರ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸುತ್ತದೆ ಎಂದರೆ ತಪ್ಪಾಗಲಾರದು. ಅಕ್ವೇರಿಯಂನ ಗಾತ್ರ ಎಷ್ಟೇ ಇರಲಿ. ಅದು ಮನೆಯ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಮರಳು, ಹೊಳಪು ಕಲ್ಲುಗಳು, ಜಲ ಸಸ್ಯಗಳು (ಕೆಲವೆಡೆ ಕೃತಕ ಸಸ್ಯಗಳೂ ಇರುತ್ತವೆ) ಅಕ್ವೇರಿಯಂನ ಪ್ರಮುಖ ಆಕರ್ಷಣೀಯ ವಿಷಯಗಳು. 


COMMERCIAL BREAK
SCROLL TO CONTINUE READING

ಇದನ್ನು ಓದಿVastu Shastra: ಈ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ಕಾಡುತ್ತೆ ಹಣದ ಕೊರತೆ


ಇನ್ನು ಯಂತ್ರದ ಮೂಲಕ ಆಮ್ಲಜನಕ ಹಾಯಿಸಿದಾಗ ಸೃಷ್ಟಿಯಾಗುವ ಗುಳ್ಳೆಗಳು, ಚೆಂದದ ತಿಳಿಬೆಳಕು ಇವೆಲ್ಲವೂ ಸಣ್ಣ ಸಮುದ್ರ ಲೋಕ ಕಂಡಂತೆ ಭಾಸವಾಗುತ್ತದೆ. ಇನ್ನು ಅವರವರ ಅಭಿರುಚಿ, ಸಾಮರ್ಥ್ಯಕ್ಕೆ ತಕ್ಕಂತೆ ಮೀನು ತೊಟ್ಟಿ ರೂಪಿಸುವವರು ಇದ್ದಾರೆ. 


ಗಾತ್ರದ ದೃಷ್ಟಿಯಲ್ಲಿ ಗೋಲ್ಡ್‌ಫಿಷ್‌, ಗಪ್ಪಿ, ಕೊಯ್‌, ಆಸ್ಕರ್‌, ಕಿಚ್ಲಿಡ್‌, ಗ್ರಾಸ್‌ ಕಾರ್ಪ್‌ಫಿಷ್‌, ವೈಟ್‌ ಆ್ಯಂಡ್‌ ರೆಡ್‌ ಕ್ಯಾಪ್‌ ಫಿಷ್‌ ಹೀಗೆ ಅನೇಕ ಬಗೆಯ ಮೀನುಗಳಿವೆ. ದೊಡ್ಡ ಮತ್ತು ಸಣ್ಣ ಗಾತ್ರದ ಮೀನುಗಳನ್ನು ಒಂದೇ ತೊಟ್ಟಿಯಲ್ಲಿ ಸಾಕುವಾಗ ಅವುಗಳ ಗುಣ ಸ್ವಭಾವಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಅವು ಸಹಬಾಳ್ವೆ ನಡೆಸುವಂತಿದ್ದರೆ ಮಾತ್ರ ಆಯ್ಕೆ ಮಾಡಬಹುದು. ಇಲ್ಲವಾದರೆ ಸಣ್ಣ ಗಾತ್ರದ ಮೀನುಗಳೇ ಉತ್ತಮ.  ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಿಗುವ ಕೆರೆ, ಹಳ್ಳದ ಮೀನುಗಳನ್ನು ಹಿಡಿದು ಪುಟ್ಟ ಅಕ್ವೇರಿಯಂಗಳಲ್ಲಿ, ಗಾಜಿನ ಪಾತ್ರೆಯಲ್ಲಿ ಸಾಕಿದವರೂ ಇದ್ದಾರೆ. 


ಇದನ್ನು ಓದಿ: Kitchen Tips: ಗೃಹಶೋಭೆಯಲ್ಲಿ ಅಡುಗೆ ಮನೆಯ ವ್ಯವಸ್ಥೆ ಹೀಗಿರಲಿ: ಇಲ್ಲಿದೆ ಕೆಲ ಟಿಪ್ಸ್‌


ಇನ್ನು ಪ್ರತಿ ಮೀನಿನ ಬೆಲೆ  ರೂ. 20ರಿಂದ ಆರಂಭವಾಗಿ ಸಾವಿರ ರೂಪಾಯಿಯವರೆಗೂ ಇದೆ. ಅವುಗಳಿಗೆ ಆಹಾರವಾಗಿ ಸಣ್ಣಗೆ ಕುಟ್ಟಿ ಕಾಳುಗಟ್ಟಿಸಿದ ಬಟಾಣಿ, ಗೋಧಿ ರವೆ ಹಾಕಬಹುದು. ಪೌಷ್ಟಿಕಾಂಶ ಮಿಶ್ರಿತ ಅಕ್ವೇರಿಯಂ ಮೀನುಗಳ ಆಹಾರ ಸಾಸಿವೆ ಗಾತ್ರದ ಕಾಳುಗಳ ರೂಪದಲ್ಲಿ ಸಿಗುತ್ತದೆ. ಅಗತ್ಯಕ್ಕೆ ತಕ್ಕಂತೆ ಬಳಸಬಹುದು. 


ಇನ್ನು ಅಕ್ವೇರಿಯಂ ಎಂಬ ಪದ ಬಂದಿದ್ದು ಹೀಗೆ. ಯೂರೋಪಿನ ಪರಿಸರವಾದಿ ಫಿಲಿಪ್‌ ಹೆನ್ರಿ ಗೋಸ್‌ ಅವರು ಈ ಶಬ್ದವನ್ನು ಬಳಕೆಗೆ ತಂದರು. ಲ್ಯಾಟಿನ್‌ ಭಾಷೆಯ ಅಕ್ವಾ(ನೀರು), ಏರಿಯಂ ಎಂದರೆ ನೀರಿಗೆ ಸಂಬಂಧಿಸಿದ ಸ್ಥಳ ಎಂದು ಅರ್ಥ. ಇನ್ನು 1850ರಲ್ಲಿ ರಸಾಯನ ವಿಜ್ಞಾನಿ ರಾಬರ್ಟ್‌ ವಾರಿಂಗ್ಟನ್‌ ಅಕ್ವೇರಿಯಂ ಪರಿಕಲ್ಪನೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದರು. 1853ರಲ್ಲಿ ಲಂಡನ್‌ ಪ್ರಾಣಿ ಸಂಗ್ರಹಾಲಯದಲ್ಲಿ ಮೊದಲ ಸಾರ್ವಜನಿಕ ಅಕ್ವೇರಿಯಂನ್ನು ಸ್ಥಾಪಿಸಲಾಯಿತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.