ಕೆಸುವಿನ ಗೆಡ್ಡೆ ಅಥವಾ ಸುವರ್ಣ ಗೆಡ್ಡೆ ಸಿಪ್ಪೆ ಸುಲಿಯುವ ಸಲಹೆಗಳು: ಭಾರತದಲ್ಲಿ ಕೆಸುವಿನ ಗೆಡ್ಡೆ ಅಥವಾ ಸುವರ್ಣ ಗೆಡ್ಡೆಯಿಂದ ತಯಾರಿಸಿದ ಆಹಾರಗಳನ್ನು ಅನೇಕರು ಇಷ್ಟಪಡುತ್ತಾರೆ. ಈ ತರಕಾರಿಯ ಆಹಾರಗಳು ತಿನ್ನಲು ಹೆಚ್ಚು ರುಚಿಯಾಗಿರುತ್ತದೆ. ಒಂದೆಡೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ದೊಡ್ಡ ಸಮಸ್ಯೆ ಎಂದರೆ ಸಿಪ್ಪೆ ಸುಲಿಯುವುದು. ಈ ಗೆಡ್ಡೆಗಳ ಸಿಪ್ಪೆ ಸುಲಿಯುವಾಗ ಕೈಗಳು ತುರಿಸುತ್ತದೆ. ಬಳಿಕ ಊತ ಬರುತ್ತದೆ. 


COMMERCIAL BREAK
SCROLL TO CONTINUE READING

ಕೆಸುವಿನ ಗೆಡ್ಡೆ ಅಥವಾ ಸುವರ್ಣ ಗೆಡ್ಡೆಯ ಸಿಪ್ಪೆಗಳು ತುಂಬಾ ತೆಳ್ಳಗಿರುತ್ತದೆ. ಇದರಿಂದಾಗಿ ಕೈಗಳನ್ನು ಬಳಸದೆ ನುಣ್ಣಗೆ ಸಿಪ್ಪೆ ತೆಗೆಯುವುದು ತುಂಬಾ ಕಷ್ಟ. ಹೀಗಾಗಿ ಸುಲಭವಾಗಿ ಹೇಗೆ ಸಿಪ್ಪೆಗಳನ್ನು ತೆಗೆಯಬಹುದು ಎಂಬುದಕ್ಕೆ ಕೆಲವು ವಿಶೇಷ ಪರಿಹಾರಗಳನ್ನು ಹೇಳಲಿದ್ದೇವೆ. 


ಇದನ್ನು ಓದಿ: Somvati Amavasya 2022: ನಾಳೆ ಸೋಮವತಿ ಅಮಾವಾಸ್ಯೆ, 6 ಶುಭ ಕಾಕತಾಳೀಯಗಳ ಸೃಷ್ಟಿ, ಈ ರಾಶಿಗಳ ಜನರ ಭಾಗ್ಯೋದಯ


1. ಕಿಚನ್ ಗ್ಲೋವ್ಸ್ ಧರಿಸಿ:
ಕೆಸುವಿನ ಗೆಡ್ಡೆಯ ಸಿಪ್ಪೆ ತೆಗೆಯುವಾಗ ನಿಮ್ಮ ಕೈಗಳು ತುರಿಸಬಾರದು ಎಂದಾದರೆ, ಕಿಚನ್ ಗ್ಲೋವ್ಸ್ ಧರಿಸಬೇಕು.


2. ಡಿಶ್ ವಾಶ್ ಸ್ಕ್ರಬ್ ಬಳಸಿ: 
ಕೈಗವಸುಗಳನ್ನು ಧರಿಸಿದ ನಂತರ ಗೆಡ್ಡೆಗಳ ಸಿಪ್ಪೆ ತೆಗೆಯುವುದು ಸುಲಭವಲ್ಲ. ಆ ಸಂದರ್ಭದಲ್ಲಿ ಪಾತ್ರೆಗಳನ್ನು ತೊಳೆಯಲು ಬಳಸುವ ಸ್ಕ್ರಬ್‌ನ್ನು ಬಳಸಬಹುದು.ಅದರ ಸಹಾಯದಿಂದ ಕೆಲಸವು ಬಹಳ ಸುಲಭವಾಗಿ ಪೂರ್ಣಗೊಳ್ಳುತ್ತದೆ. ಆದರೆ ಸ್ಕ್ರಬ್‌ ಬಳಸುವಾಗ ಅದರ ಶುಚಿತ್ವವನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. 


3. ತೆಂಗಿನ ಸಿಪ್ಪೆಯನ್ನು ಬಳಸಿ
ಸಿಪ್ಪೆ ತೆಗೆಯಲು ಸ್ಕ್ರಬ್ ಅನ್ನು ಬಳಸಲು ಬಯಸದಿದ್ದರೆ, ತೆಂಗಿನ ಸಿಪ್ಪೆಯನ್ನು ಬಳಸಬಹುದು. ಇದಕ್ಕಾಗಿ ತೆಂಗಿನ ಸಿಪ್ಪೆಯನ್ನು ಚೆಂಡಿನ ಆಕಾರದಲ್ಲಿ ಮಾಡಿ ನಂತರ ಕೆಸುವಿನ ಗೆಡ್ಡೆ ಅಥವಾ ಸುವರ್ಣ ಗೆಡ್ಡೆಯ ಸಿಪ್ಪೆಯನ್ನು ತೆಗೆಯಬಹುದು. 


ಇದನ್ನು ಓದಿ: Name Astrology : ಈ ಅಕ್ಷರದ ಹುಡುಗರು ಹುಡುಗಿಯರ ವಿಷಯದಲ್ಲಿ ತುಂಬಾ ಅದೃಷ್ಟವಂತರು!


4. ಕೈಗಳಿಗೆ ಎಣ್ಣೆ ಹಚ್ಚಿಕೊಳ್ಳಿ
ಅಡುಗೆ ಕೈಗವಸುಗಳ ಬಳಕೆಯಿಂದ ನಿಮಗೆ ಅನ್‌ಕಂಫರ್ಟೇಬಲ್‌ ಅನಿಸಿದರೆ, ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಆದರೆ ಇದನ್ನು ಮಾಡುವ ಮೊದಲು ಕೈಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಅವಶ್ಯಕವಾಗಿದೆ. ಆ ನಂತರ ಕೆಸುವಿನ ಗೆಡ್ಡೆ ಅಥವಾ ಸುವರ್ಣ ಗೆಡ್ಡೆಯ ಮೇಲೆ ಉಪ್ಪು ಸಿಂಪಡಿಸಿ ಸಿಪ್ಪೆ ತೆಗೆಯಬಹುದು.  


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.