Muscle cramps : ಮಸಲ್ ಕ್ಯಾಚ್‌ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಸ್ನಾಯು ಸೆಳೆತ ದೂರವಾಗುತ್ತದೆ. ಈ ಮಸಲ್ ಕ್ಯಾಚ್‌ ಎನ್ನುವುದು ರಾತ್ರಿ ಹೊತ್ತಿನಲ್ಲಿ ಹೆಚ್ಚಾಗಿ ಬರುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ, ನರಗಳು ಬಳಲಿದಾಗ, ತುಂಬಾ ಹೊತ್ತು ನಿಂತು ಮಾಡುವ ಕೆಲಸ ಹೀಗೆ ಹಲವಾರು ಕಾರಣಗಳಿಂದ ಮಸಲ್‌ ಕ್ಯಾಚ್‌ ಉಂಟಾಗುತ್ತದೆ.


COMMERCIAL BREAK
SCROLL TO CONTINUE READING

ಇನ್ನು ಎಳನೀರಿನಲ್ಲಿ ಎಲೆಕ್ಟ್ರೋಲೈಟ್ಸ್ , ಸೋಡಿಯಂ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ ಅಂಶಗಳಿರುತ್ತದೆ. ಎಲೆಕ್ಟ್ರೋಲೈಟ್ಸ್‌ ಅಂಶವಿರುವ ಪಾನೀಯ ಮಸಲ್‌ ಕ್ಯಾಚ್‌ ಕಡಿಮೆ ಮಾಡುವಲ್ಲಿ ಸಹಕಾರಿ. ಆದ್ದರಿಂದ ಸ್ಪೋರ್ಟ್ಸ್ ಆಟಗಾರರಿಗೆ ಎಲೆಕ್ಟ್ರೋಲೈಟ್ಸ್ ಇರುವ ಪಾನೀಯ ನೀಡಲಾಗುವುದು. ದಿನದಲ್ಲಿ 1ರಿಂದ2 ಎಳನೀರು ಕುಡಿದರೆ ರಾತ್ರಿ ಹೊತ್ತು ಮಸಲ್‌ ಕ್ಯಾಚ್‌ ಕಡಿಮೆಯಾಗುವುದು. 


ಇದನ್ನೂ ಓದಿ-ಮನೆಯಲ್ಲಿ ನಾಯಿ ಸಾಕುವದರಿಂದ ಒಳ್ಳೆಯದಾಗತ್ತಾ..? ಜ್ಯೋತಿಷ್ಯದಲ್ಲಿದೆ ಇದಕ್ಕೆ ಉತ್ತರ


ಕೆಲವು ಹಸಿರು ಸೊಪ್ಪು ಮತ್ತು ತರಕಾರಿಗಳು ಸ್ಬಾಯು ಸೆಳೆತವನ್ನು ತಡೆಗಟ್ಟಬಲ್ಲವು.  ಪಾಲಾಕ್, ಬ್ರೊಕೋಲಿ, ಲೆಟ್ಯೂಸೆ, ಸಾಸಿವೆ ಸೊಪ್ಪು ಇವುಗಳಲ್ಲಿ ಮೆಗ್ನಿಷ್ಯಿಯಂ ಅಂಶವಿರುವುದರಿಂದ ಮಸಲ್‌ ಕ್ಯಾಚ್‌ ತಡೆಗಟ್ಟುವಲ್ಲಿ ಸಹಕಾರಿ. ನೀವು ತಿನ್ನುವ ಆಹಾರದಲ್ಲಿ ಈ ಸೊಪ್ಪಿನಂಶ ಸ್ವಲ್ಪವಾದರೂ ಇರುವಂತೆ ನೋಡಿಕೊಳ್ಳಿ.


ಡ್ರೈ ಫ್ರೂಟ್ಸ್‌ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಾ ಸ್ವಲ್ಪ ನಟ್ಸ್‌ ತಿನ್ನುವುದರಿಂದ ಮೆಗ್ನಿಷ್ಯಿಯಂ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು. ಇದನ್ನು ಸ್ನ್ಯಾಕ್ಸ್‌ ಆಗಿ ಬಳಸಿದರೆ ಇತರ ಅನಾರೋಗ್ಯಕರ ಸ್ನ್ಯಾಕ್ಸ್ ತಿನ್ನುವುದು ಕಡಿಮೆಯಾಗುವುದು, ಆಕರ್ಷಕ ಮೈ ತೂಕ, ಆರೋಗ್ಯ, ಹೊಳೆಯುವ ತ್ವಚೆ ಎಲ್ಲವನ್ನೂ ಹೊಂದಬಹುದು. 


ಇದನ್ನೂ ಓದಿ-ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿವೆ ಆಯುರ್ವೇದ ಪರಿಹಾರಗಳು!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ