Astrology: ತಾಯಿ ಅನ್ನಪೂರ್ಣೆ ಹಾಗೂ ತಾಯಿ ಲಕ್ಷ್ಮಿ ಅಡುಗೆಮನೆಯಲ್ಲಿ ನೆಲೆಸಿರುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಅಡುಗೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವವರಿಗೆ ತಾಯಿ ಲಕ್ಷ್ಮಿಯ ಕೃಪಾಕಟಾಕ್ಷ ಲಭಿಸುತ್ತದೆ ಮತ್ತು ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಡುಗೆ ಮನೆಗೆ ಸಂಬಂಧಿಸಿದಂತೆ ಮಾಡುವ ಸಣ್ಣ ತಪ್ಪು ಕೂಡ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಅದರಲ್ಲೂ ಚಪಾತಿ ಲಟ್ಟಿಸುವಾಗ ಮಾಡುವ ಒಂದು ಸಣ್ಣ  ತಪ್ಪಿನಿಂದಾಗಿ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಅಡುಗೆಮನೆಯಲ್ಲಿ ಇರಿಸಲಾಗಿರುವ ಲಟ್ಟಣಿಗೆ ಚಪಾತಿ ಮಾಡುವ ಮಣೆ ತುಂಬಾ ಮುಖ್ಯವಾಗಿವೆ. ಹೀಗಾಗಿ ನೀವು ಚಪಾತಿ ಲಟ್ಟಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-New Year Resolution: ಈ ಸಂಕಲ್ಪಗಳಿಂದ ನಿಮ್ಮ ಹೊಸವರ್ಷವನ್ನು ಆರಂಭಿಸಿ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಿ

ಚಪಾತಿ ಲಟ್ಟಿಸುವಾಗ ಬರುವ ಲಟ್ಟಣಿಗೆ ಸದ್ದು
ಹಲವು ಬಾರಿ ಅವಸರದಲ್ಲಿ ಚಪಾತಿ ಮಾಡುವಾಗ ಲಟ್ಟಣಿಗೆ ಸದ್ದು ಮಾಡಲಾರಂಭಿಸುತ್ತದೆ ಅಥವಾ ಮಣೆ ಸರಿಯಾಗಿ ಇಡದೆ ಇರುವ ಕಾರಣ ಕೂಡ ಅದು ಸದ್ದು ಮಾಡಲಾರಂಭಿಸುತ್ತದೆ.  ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪಾತಿ ಮಾಡುವಾಗ ಲಟ್ಟಣಿಗೆ ಅಥವಾ ಅದರ ಮಣೆಯ ಸದ್ದು ಕೇಳುವುದು ಅಶುಭ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪಾತಿ ಮಾಡುವಾಗ ಲಟ್ಟಣಿಗೆ ಸದ್ದು ಕೇಳಿ ಬಂದರೆ ಅದು ಹಣದ ನಷ್ಟದ ಸಂಕೇತವಾಗಿದೆ ಮತ್ತು ಈ ಕಾರಣದಿಂದಾಗಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಹೀಗಾಗಿ ಚಪಾತಿ ಮಾಡುವಾಗ, ಲಟ್ಟಣಿಗೆ ಮತ್ತು ಅದರ ಮಣೆಯಿಂದ ಸದ್ದು ಬರಬಾರದು ಎಂಬುದನ್ನು ನೆನಪಿನಲ್ಲಿಡಿ. ಒಂದು ವೇಳೆ ಮಣೆಯಿಂದ ಸದ್ದು ಬರುತ್ತಿದ್ದರೆ, ಸದ್ದು ಬರದಂತೆ ತಡೆಯಲು ಅದರ ಕೆಳಗೆ ಬಟ್ಟೆ ಹಾಕಿ.


ಈ ಬಣ್ಣದ ಮಣೆ ಮತ್ತು ಲಟ್ಟಣಿಗೆ ಬಳಸಬೇಡಿ
ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಬಿಳಿ ಅಥವಾ ಕಂದು ಬಣ್ಣದ ಮಣೆ ಮತ್ತು ಲಟ್ಟಣಿಗೆಗಳು ಇರುತ್ತವೆ. ಆದರೆ ಕೆಲವೊಮ್ಮೆ ಜನರು ಫ್ಯಾಷನ್‌ನಿಂದಾಗಿ ಕಪ್ಪು ಬಣ್ಣದ ಮಣೆ ಮತ್ತು ಲಟ್ಟಣಿ ಬಳಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ ಲಟ್ಟಣಿ-ಮಣೆಯನ್ನು  ಅಪ್ಪಿತಪ್ಪಿಯೂ ಅಡುಗೆ ಮನೆಯಲ್ಲಿ ಬಳಸಬಾರದು. ಇದರಿಂದ ಶನಿ ದೋಷವು ಉಂಟಾಗುತ್ತದೆ ಮತ್ತು ದುರದೃಷ್ಟವು ಸಹ ಅದರೊಂದಿಗೆ ಬರಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ-Tulsi Astro Tips: ಮರೆತೂ ಕೂಡ ಈ ರೀತಿ ತುಳಸಿ ದಳಗಳನ್ನು ಕೇಳಬೇಡಿ, ಭಾರಿ ಹಾನಿಗೆ ಕಾರಣ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.