Teeth Indications: ಮಕ್ಕಳ ನಡೆದಾಡುವಿಕೆ, ಕುಲಿತುಕೊಲ್ಲುವಿಕೆ, ತಿನ್ನುವಿಕೆ, ಹಲ್ಲು ಬರುವಿಕೆ ಇತ್ಯಾದಿಗಳ ಆರಂಭಕ್ಕೆ ನಿಗದಿತ ಸಮಯ ಇರುತ್ತದೆ. ಆದರೆ ಈ ಸಂಗತಿಗಳ ಆರಂಭ ಅಥವಾ ತಡವಾಗುವಿಕೆ ಭವಿಷ್ಯದ ಬಗ್ಗೆ ಕೆಲ ಶುಭ ಅಥವಾ ಅಶುಭ ಸಂಕೇತಗಳನ್ನು ನೀಡುತ್ತವೆ. ಸಾಮಾನ್ಯವಾಗಿ, ಮಕ್ಕಳಲ್ಲಿ ಮೊದಲ ಹಲ್ಲುಗಳು 6 ತಿಂಗಳ ವಯಸ್ಸಿನಲ್ಲಿ ಬರಲು ಪ್ರಾರಂಭಿಸುತ್ತವೆ. ಜ್ಯೋತಿಷ್ಯದಲ್ಲಿ ಮಕ್ಕಳಲ್ಲಿ ಹಲ್ಲು ಕಾಣಿಸುವ ಪ್ರಕ್ರಿಯೆಯನ್ನು ತುಂಬಾ ಮುಖ್ಯವೆಂದು ಪರಿಗಣಿಸಲಾಗಿದೆ. ಮಕ್ಕಳಿಗೆ ಯಾವ ತಿಂಗಳಲ್ಲಿ ಹಲ್ಲು ಹುಟ್ಟುವುದು ಶುಭ ಮತ್ತು ಯಾವಾಗ ಅಶುಭ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಹುಟ್ಟಿನಿಂದಲೇ ಹಲ್ಲುಗಳನ್ನು ಹೊಂದಿರುವುದು
ಕೆಲವು ಶಿಶುಗಳು ಹುಟ್ಟುವಾಗಲೇ ಹಲ್ಲುಗಳಿಂದ ಹುಟ್ಟುತ್ತವೆ. ಇದು ಮಗುವಿನಲ್ಲಿ ಸಂಭವಿಸಿದರೆ, ಅದು ಪೋಷಕರಿಗೆ ತುಂಬಾ ನೋವಿನ ಸಂಗತಿಯಾಗಿದೆ. ಅಷ್ಟೇ ಅಲ್ಲ, ಇದು ಪೋಷಕರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


ಯಾವ ಹಲ್ಲು ಮೊದಲು ಬರುವುದು ಶುಭವಲ್ಲ?
ಸಾಮಾನ್ಯವಾಗಿ ಮಕ್ಕಳ ಕೆಳಗಿನ ಹಲ್ಲುಗಳು ಮೊದಲು ಬರುತ್ತವೆ. ಆದರೆ ಕೆಲವೊಮ್ಮೆ ಮೇಲಿನ ಹಲ್ಲುಗಳು ಮೊದಲು ಬಂದರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಮಗುವಿನ ತಾಯಿಯ ಪಾಲಿಗೆ ಶುಭವಲ್ಲ ಎಂದು ಹೇಳಲಾಗುತ್ತದೆ.


ಯಾವ ಮಾಸದಲ್ಲಿ ಹಲ್ಲು ಕಾಣಿಸಿಕೊಳ್ಳುವುದು ಶುಭ
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹುಟ್ಟಿದ ಮೊದಲ ತಿಂಗಳಲ್ಲಿ ಹಲ್ಲು ಹುಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದಾಗಿ ಮಕ್ಕಳು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.


>> ಎರಡನೇ ತಿಂಗಳಲ್ಲಿ, ಮಗುವಿನಲ್ಲಿ ಹಲ್ಲಿನ ಬರುವಿಕೆ ಮಗುವಿನ ಸಹೋದರರಿಗೆ ನೋವಿನಿಂದ ಕೂಡಿದೆ.


>> ಮೂರನೇ ತಿಂಗಳಲ್ಲೂ ಹಲ್ಲು ಬರುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಲ್ಕನೇ ತಿಂಗಳಲ್ಲಿ ಹಲ್ಲು ಹುಟ್ಟುವುದು ಮಗುವಿನ ಪೋಷಕರಿಗೆ ಶುಭವಲ್ಲ. ಅಣ್ಣನಿಗೆ ಐದನೇ ತಿಂಗಳು ಶುಭವಲ್ಲ.


>> ಇದೇ ವೇಳೆ ಮಗುನಲ್ಲಿ ಆರನೇ ತಿಂಗಳಲ್ಲಿ ಹಲ್ಲು ಕಾಣಿಸಿಕೊಂಡರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಏಳನೇ ತಿಂಗಳಲ್ಲಿ ಹಲ್ಲು ಹುಟ್ಟುವುದು ತಂದೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.


>> ಎಂಟನೇ ತಿಂಗಳಲ್ಲಿ ಮಗುವಿನ ಹಲ್ಲು ಹುಟ್ಟುವುದು ಮಗುವಿನ ತಾಯಿಯ ಚಿಕ್ಕಪ್ಪನಿಗೆ ನೋವು ತರುತ್ತದೆ. ಒಂಬತ್ತನೇ ತಿಂಗಳು ಮಂಗಳಕರವೆಂದು ಪರಿಗಣಿಸಲಾಗಿದೆ. ಇದೇ ವೇಳೆ ಹತ್ತನೇ ತಿಂಗಳಲ್ಲಿ ಹಲ್ಲುಗಳ ಹೊರಹೊಮ್ಮುವಿಕೆ, ಮಗುವಿಗೆ ಜೀವನದಲ್ಲಿ ಸಂತೋಷ ತರುತ್ತದೆ.


ಇದನ್ನೂ ಓದಿ-Success Mantra: ನಿತ್ಯ ಬೆಳಗ್ಗೆ ಈ 4 ಕೆಲಸಗಳನ್ನು ತಪ್ಪದೆ ಮಾಡಿ, ಯಶಸ್ಸು ನಿಮ್ಮ ಪಾದಕ್ಕೆ ಮುತ್ತಿಕ್ಕುತ್ತದೆ!


>> ಹನ್ನೊಂದನೇ ತಿಂಗಳು ಮತ್ತು ಅದಕ್ಕಿಂತ ತಡವಾಗಿ ಹಲ್ಲುಗಳ ಹೊರಹೊಮ್ಮುವಿಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹನ್ನೊಂದನೇ ತಿಂಗಳಲ್ಲಿ ಹಲ್ಲುಗಳ ಕಾಣಿಸಿಕೊಳ್ಳುವಿಕೆ ಸಂತೋಷವನ್ನು ತರುತ್ತದೆ. ನಂತರದ ತಿಂಗಳುಗಳಲ್ಲಿ ಹಲ್ಲು ಮಗುವಿನ ಜೀವನದಲ್ಲಿ ಸಂಪದ್ಭರಿತ ಮತ್ತು ಆಹಾರದ ಕೊರತೆ ಇಲ್ಲದಿರುವಿಕೆಯನ್ನು ಸೂಚಿಸುತ್ತದೆ.


ಇದನ್ನೂ ಓದಿ-Health Tips: ಈ ಸಾಂಬಾರ ಪದಾರ್ಥಗಳಲ್ಲಡಗಿದೆ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವ ಸಾಮರ್ಥ್ಯ!

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.