Grah Effect On Money: ಗ್ರಹಗಳ ಕೆಟ್ಟ ದೆಸೆ ವ್ಯಕ್ತಿಯ ಜಾತಕದ ಮೇಲೆ ಭಾರಿ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆತನ ಹಣಕಾಸಿನ ಸ್ಥಿತಿ ಬಿಗಡಾಯಿಸಲು ಪ್ರಾರಂಭಿಸುತ್ತದೆ, ವ್ಯಕ್ತಿಯು ಸಾಲದಲ್ಲಿ ಮುಳುಗಲು ಪ್ರಾರಂಭಿಸುತ್ತಾನೆ ಮತ್ತು ಬಡವನಾಗುತ್ತಾನೆ. ಕ್ರೂರ ಮತ್ತು ಪಾಪ ಗ್ರಹಗಳ ಕೆಟ್ಟ ಸ್ಥಿತಿಯಿಂದ ಇದೆಲ್ಲವೂ ಸಂಭವಿಸುತ್ತದೆ. ಒಟ್ಟು ಮೂರು ಗ್ರಹಗಳನ್ನು ವ್ಯಕ್ತಿಯ ಆರ್ಥಿಕ ಸ್ಥಿತಿಗೆ ಕಾರಕಗಳೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಅವುಗಳ ನೀಚ ಸ್ಥಾನವು ವ್ಯಕ್ತಿಯನ್ನು ಬಿಡಿಕಾಸಿಗೆ ಪರದಾಡುವಂತೆ ಮಾಡುತ್ತವೆ. ಆ ಗ್ರಹಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ರಾಹು ಗ್ರಹ - ವೈದಿಕ ಜ್ಯೋತಿಷ್ಯದಲ್ಲಿ ರಾಹು ಗ್ರಹವನ್ನು ಛಾಯಾ ಗ್ರಹ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹುವು ಶುಭ ಗ್ರಹಗಳೊಂದಿಗೆ ಇದ್ದರೆ, ಆಗ ಶುಭ ಫಲಿತಾಂಶಗಳು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅದು ಅಶುಭ ಗ್ರಹಗಳೊಂದಿಗೆ ಇದ್ದಾಗ, ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ರಾಹು ಅಶುಭವಾಗಿದ್ದರೆ, ವ್ಯಕ್ತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲು ಪ್ರಾರಂಭಿಸುತ್ತದೆ. ಇದರ ಜೊತೆಗೆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ರಾಹುವಿನ ಅಶುಭ ಸ್ಥಿತಿಯನ್ನು ತಪ್ಪಿಸಲು ಮತ್ತು ಶುಭ ಪರಿಣಾಮಗಳನ್ನು ಪಡೆದುಕೊಳ್ಳಲು, ನಿಯಮಿತವಾಗಿ ರಾಹುವಿನ ಓಂ ರಾ ರಾಹವೇ ನಮಃ ಎಂಬ ಮಂತ್ರವನ್ನು ಜಪಮಾಲೆ ಮೂಲಕ ಜಪಿಸಬೇಕು.


ಶನಿ ಗ್ರಹ - ಜ್ಯೋತಿಷ್ಯದ ಪ್ರಕಾರ, ಶನಿ ಗ್ರಹವು ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಇದು ಯಾವುದೇ ವ್ಯಕ್ತಿಯ ಜಾತಕದಲ್ಲಿ ದೀರ್ಘಕಾಲ ಇರುತ್ತದೆ. ಯಾರ ಜಾತಕದಲ್ಲಿ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಮತ್ತು ಶನಿಯ ಮಹಾದೆಸೆ ಸಾಗುತ್ತಿರುತ್ತವೆಯೋ, ಆ ವ್ಯಕ್ತಿ ಹಲವು ದಿನಗಳ ಕಾಲ ತೊಂದರೆಯನ್ನು ಅನುಭವಿಸುತ್ತಾನೆ. ಶನಿಯ ಕ್ರೂರ ದೃಷ್ಟಿಯಿಂದಾಗಿ, ವ್ಯಕ್ತಿಯು ಉದ್ಯೋಗ, ವ್ಯವಹಾರದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸ್ಥಿತಿಯ ದೌರ್ಬಲ್ಯ, ದಾಂಪತ್ಯದಲ್ಲಿ ಅಡೆತಡೆಗಳು ಇತ್ಯಾದಿಗಳನ್ನು ಆತ ಎದುರಿಸಬೇಕಾಗುತ್ತದೆ. ನೀವು ಶನಿಯ ಕ್ರೂರ ದೃಷ್ಟಿಯನ್ನು ಪಾರಾಗಲು ಬಯಸುತ್ತಿದ್ದರೆ, ಶನಿವಾರದಂದು ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಸಾಸಿವೆ ಎಣ್ಣೆಯ ದೀಪವನ್ನೂ ಬೆಳಗಿ. ಶನಿ ದೋಷವನ್ನು ತಪ್ಪಿಸಲು, ಕುದುರೆ ನಾಲದ ಉಂಗುರವನ್ನು ತಯಾರಿಸಿ ಮತ್ತು ಅದನ್ನು ಮಧ್ಯದ ಬೆರಳಿಗೆ ಧರಿಸಿ.


ಇದನ್ನೂ ಓದಿ-Beauty Astrology: ಯಾವ ರಾಶಿಯ ಮಹಿಳೆಯರು ಯಾವ ಬಣ್ಣದ ಲಿಪ್ಸ್ಟಿಕ್ ಬಳಸಬೇಕು?


ಮಂಗಳ ಗ್ರಹ - ಇದು ಎಲ್ಲಾ ಗ್ರಹಗಳಲ್ಲಿ ಉಗ್ರ ಗ್ರಹ ಎಂದು ಪರಿಗಣಿಸಲಾಗಿದೆ. ಮಂಗಳವನ್ನು ಗ್ರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳನ ನೀಚ ಸ್ಥಾನವು ವ್ಯಕ್ತಿಯ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳವು ಆರು, ಎಂಟು ಮತ್ತು ಹತ್ತನೇ ಮನೆಯಲ್ಲಿದ್ದಾಗ, ಧನಹಾನಿ ಹೆಚ್ಚಾಗುತ್ತದೆ. ಆರನೇ ಮನೆಯಲ್ಲಿದ್ದರೆ ವ್ಯಕ್ತಿಯ ಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ. ಮಂಗಳ ಗ್ರಹದ ಶುಭ ಪ್ರಾಪ್ತಿಗಾಗಿ ಮಂಗಳವಾರ ಶ್ರೀಆಂಜನೇಯನನ್ನು ಆರಾಧಿಸಿ. ಅಲ್ಲದೆ, ಜ್ಯೋತಿಷ್ಯದ ಸಲಹೆಯ ಪ್ರಕಾರ ಹವಳದ ರತ್ನವನ್ನು ಧರಿಸಿ.


ಇದನ್ನೂ ಓದಿ-Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.