ನವದೆಹಲಿ: ಹಿಂದೂ ಧರ್ಮದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ದೇವರು ಮತ್ತು ದೇವತೆಗಳು ಮರ ಮತ್ತು ಗಿಡಗಳಲ್ಲಿ ನೆಲೆಸಿದ್ದಾರೆಂಬ ನಂಬಿಕೆ ಇದೆ. ವಿಶೇಷ ದಿನದಂದು ಅವುಗಳನ್ನು ಭಕ್ತಿಯಿಂದ ಪೂಜಿಸಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಗುರುವಾರ ಭಗವಾನ್ ವಿಷ್ಣು ಮತ್ತು ದೇವಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಈ ದಿನ ಆಲದ ಮರವನ್ನು ಪೂಜಿಸಿ ಪರಿಹಾರ ಇತ್ಯಾದಿಗಳನ್ನು ಮಾಡುವುದರಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರದಂದು ಬಾಳೆಗಿಡಕ್ಕೆ ಸಂಬಂಧಿಸಿದ ಕೆಲವು ಪರಿಹಾರ ಕ್ರಮ ಕೈಗೊಂಡರೆ ಯಾವುದೇ ವ್ಯಕ್ತಿಯಾಗಿರಲಿ, ವಿಷ್ಣುವಿನ ಆಶೀರ್ವಾದವನ್ನು ಖಂಡಿತ ಪಡೆಯುತ್ತಾನಂತೆ. ಅಲ್ಲದೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಇದರೊಂದಿಗೆ ವ್ಯಕ್ತಿಯು ಆರ್ಥಿಕ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ. ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ. ಲಕ್ಷ್ಮಿ ಮಾತೆ ವಿಷ್ಣುವಿನ ಪತ್ನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಗುರುವಾರದಂದು ಶ್ರೀ ಹರಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿದೇವಿಯೂ ಪ್ರಸನ್ನಳಾಗುತ್ತಾಳೆ. ಗುರುವಾರ ಬಾಳೆಗಿಡಕ್ಕೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ: Lucky Names : ಮದುವೆಯ ನಂತರ ಹೊಳೆಯುತ್ತದೆ ಈ ಹೆಸರಿನವರ ಅದೃಷ್ಟ : ನಿಮ್ಮ ಹೆಸರಿದೆಯಾ? ನೋಡಿ


ಬಾಳೆಮರಕ್ಕೆ ಸಂಬಂಧಿಸಿದ ಪರಿಹಾರ ಕ್ರಮಗಳು


- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಾಳೆಗಿಡವನ್ನು ನೆಟ್ಟರೆ ಆ ಮನೆಯಲ್ಲಿ ಎಂದಿಗೂ ದುಃಖ ಮತ್ತು ಬಡತನ ಇರುವುದಿಲ್ಲವಂತೆ.


- ಗುರುವಾರದಂದು ಬಾಳೆಗಿಡವನ್ನು ಪೂಜಿಸುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಂತೋಷಗಳು ಬಂದು ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ.


- ನೀವು ಮನೆಯಲ್ಲಿ ಸಂತೋಷ-ಸಮೃದ್ಧಿ ಮತ್ತು ಸಂಪತ್ತು ಬಯಸಿದರೆ, ಬಾಳೆ ಮರದ ಬೇರನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಮೊದಲು ಗಂಗಾಜಲದಿಂದ ಬೇರನ್ನು ತೊಳೆದು ಬೇರಿಗೆ ಹಳದಿ ಬಣ್ಣದ ದಾರವನ್ನು ಕಟ್ಟಬೇಕು. ಇದರ ನಂತರ ಅದನ್ನು ಹಣ ಇರಿಸುವ ಸ್ಥಳದಲ್ಲಿ ಇರಿಸಿ. ಈ ಪರಿಹಾರವನ್ನು ಗುರುವಾರ ಮಾಡಬೇಕಾಗುತ್ತದೆ.


- ಗುರುವಾರ ಸ್ನಾನ ಇತ್ಯಾದಿಗಳ ನಂತರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಮತ್ತು ಹಳದಿ ಬಣ್ಣದ ಬಟ್ಟೆಯಿಂದ ನಿಮ್ಮ ತಲೆಯನ್ನು ಮುಚ್ಚಿಕೊಳ್ಳಿ. ಬಳಿಕ ಬಾಳೆ ಮರದ ಬಳಿಗೆ ಹೋಗಿ ಕೈಮುಗಿದು ನಿಮ್ಮ ಆಸೆಯನ್ನು ಹೇಳಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಬಹುಬೇಗನೇ ಈಡೇರುತ್ತದೆ.


ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.