ಸೂರ್ಯ ಪುತ್ರ ಶನಿ ಅವರನ್ನು ಕರ್ಮ ಫಲದಾತ ಎಂದೂ ಕರೆಯುತ್ತಾರೆ. ಶನಿಯ ಕೃಪಾದೃಷ್ಟಿ ನಿಮ್ಮ ಮೇಲಾದರೆ ಅಸಾಧ್ಯ ಎನಿಸುವ ಕಾರ್ಯಗಳು ಕೂಡ ಸಾಧ್ಯವಾಗುತ್ತವೆ ಹಾಗೂ ನಿಮಗೆ ಎಲ್ಲ ಕಾರ್ಯಗಳಲ್ಲಿ ಸಫಲತೆ ಸಿಗುತ್ತದೆ. ಇನ್ನೊಂದೆಡೆ ಶನಿಯ ವಕ್ರದೃಷ್ಟಿ ಬಿದ್ದರೆ, ಸಾಧ್ಯ ಎನಿಸುವ ಕಾರ್ಯಗಳಲ್ಲಿಯೂ ಕೂಡ ಅಸಫಲತೆ ಸಿಗುತ್ತದೆ. ಶನಿಯ ಸಡೆಸಾತಿ ಹಾಗೂ ಶನಿಯ ಮಹಾದೆಸೆಯಿಂದ ದೊಡ್ಡ ದೊಡ್ಡ ಪರಿವರ್ತನೆಗಳಾಗುತ್ತವೆ.


COMMERCIAL BREAK
SCROLL TO CONTINUE READING

ವರ್ಷ 2021ರ ವಿಶೇಷತೆ ಎಂದರೆ ಈ ವರ್ಷದಲ್ಲಿ ಶನಿದೇವ ತನ್ನ ಸ್ಥಾನವನ್ನು ಪರಿವರ್ತಿಸುತ್ತಿಲ್ಲ. ಅಂದರೆ, ಶನಿ (Shanidev) ಅವನ ಸ್ವರಾಶಿ ಮಕರ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಈ ಬಾರಿ ರಾಶಿಯ ಬದಲು ಶನಿಯ ನಕ್ಷತ್ರ ಪರಿವರ್ತನೆಯಾಗಲಿದೆ. ವರ್ಷದ ಆರಂಭದಲ್ಲಿ ಶನಿ ಉತ್ತರಾಷಾಢ ನಕ್ಷತ್ರದಲ್ಲಿರಲಿದ್ದಾನೆ. ಸೂರ್ಯ ದೇವ ಈ ರಾಶಿಯ ಸ್ವಾಮಿ ಹಾಗೂ 22ನೆ ಜನವರಿಗೆ ಶನಿದೇವ ಶ್ರಾವಣ ನಕ್ಷತ್ರದಲ್ಲಿ ಪ್ರವೇಶಿಸಲಿದ್ದಾನೆ. ಬಳಿಕ ಉತ್ತರಾಷಾಢ ಹಾಗೂ ಶ್ರಾವಣ ನಕ್ಷತ್ರ ಎರಡರಲ್ಲಿಯೂ ಕೂಡ ಗೋಚರಿಸಲಿದ್ದಾನೆ. 2021ರಲ್ಲಿ ಶನಿಯ ನಕ್ಷತ್ರ ಪರಿವರ್ತನೆಯ ಆಧಾರದ ಮೇಲೆ ಫಲಗಳನ್ನು ನೀಡಲಿದ್ದಾನೆ. ಹೀಗಾಗಿ ಮಿಥುನ, ಸಿಂಹ ಹಾಗೂ ಕುಂಭ ರಾಶಿ ಜಾತಕದವರು ಎಚ್ಚರಿಕೆಯಿಂದ ಇರುವ ಆವಶ್ಯಕತೆ ಇದೆ. ಹಾಗಾದರೆ ಬನ್ನಿ 2021ರಲ್ಲಿ ಯಾವ ಶನಿ ಶುಭಫಲ ನೀಡಲಿದ್ದಾನೆ ಹಾಗೂ ಯಾವ ರಾಶಿಗಳ ಮೇಲೆ ವಕ್ರದೃಷ್ಟಿ ಬೀರಲಿದ್ದಾನೆ ಎಂಬುದನ್ನೊಮ್ಮೆ ತಿಳಿಯೋಣ.


ಇದನ್ನು ಓದಿ- ನಿಧಾನ ಗತಿಯಲ್ಲಿ ಸಾಗುವ ಸೂರ್ಯಪುತ್ರಗೆ ಹೆದರಬೇಡಿ, ಅತ್ಯಂತ ದಾರ್ಶನಿಕ ಪ್ರವೃತ್ತಿಯ ದೇವ ಶನಿದೇವ


ಮೇಷ: 2021ರಲ್ಲಿ ನಿಮಗೆ ಶನಿಗೊಚರದ ಮಿಶ್ರಫಲಗಳು ಸಿಗಲಿವೆ. ಕಾರ್ಯಕ್ಷೇತ್ರದಲ್ಲಿ ಪರಿಶ್ರಮಪುಡುವ ಆವಶ್ಯಕತೆ ಇದೆ. ಆದರೆ, ನಿಮ್ಮ ಪರಿಶ್ರಮಕ್ಕೆ ನಿಮಗೆ ಫಲ ಸಿಗಲಿದೆ. 


ವೃಷಭ: ವರ್ಷದ ಆರಂಭದಲ್ಲಿ ಶನಿ ಉತ್ತರಾಷಾಢ ನಕ್ಷತ್ರದಲ್ಲಿ ಇರಲಿದ್ದಾನೆ. ಇದರಿಂದ ನಿಮಗೆ ಕೌಟುಂಬಿಕ ಸೌಖ್ಯ ಲಭಿಸಲಿದೆ. ಮನೆ, ವಾಹನ ಖರೀದಿಯಲ್ಲಿ ಸಫಲತೆ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. 


ಮಿಥುನ: 2021ರಲ್ಲಿ ಶನಿಯ ಗೋಚರ ನಿಮ್ಮ ಪಾಲಿಗೆ ಹಲವು ಏರಿಳಿತಗಳನ್ನು ತರಲಿದೆ. ಹಲವು ಕಾರ್ಯಗಳಲ್ಲಿ ನಿಮಗೆ ಸಫಲತೆ ಸಿಗುವ ಸಾಧ್ಯತೆ ಇದೆ. ಆದರೆ, ಈ ಕಾರಣದಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆರೋಗ್ಯದ ಕಾಳಜಿವಹಿಸಿ. ಆರ್ಥಿಕ ವಿಷಯದಲ್ಲಿ ಎಚ್ಚರಿಕೆವಹಿಸಿ.


ಇದನ್ನು ಓದಿ- ಶನಿದೇವನನ್ನು ಒಲಿಸಲು ಇಲ್ಲಿವೆ 7 ಮಹಾ ಉಪಾಯಗಳು


ಕರ್ಕ: ಈ ರಾಶಿಯ ಜಾತಕದವರಿಗೆ ಮಿಶ್ರ ಫಲ ಲಭಿಸಲಿದೆ. ಶನಿಯು ಉತ್ತರಾಷಾಢ ನಕ್ಷತ್ರ ಪ್ರವೇಶಿಸುತ್ತಿರುವುದರಿಂದ ಸಂಗಾತಿಯ ಆರೋಗ್ಯದ ಕಾಳಜಿ ವಹಿಸಿ. ದಾಂಪತ್ಯ ಜೀವನದಲ್ಲಿಯೂ ಕೂಡ ವಿರಸ ಉಂಟಾಗುವ ಸಾಧ್ಯತೆ ಇದೆ. ಆದರೆ ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಗೆ ಯಶಸ್ಸು ಸಿಗುವ ನಿರೀಕ್ಷೆ ಇದೆ. 


ಸಿಂಹ: ಶನಿಯ ಈ ಗೊಚರದ ಅತಿ ಹೆಚ್ಚು ಪ್ರಭಾವ ನಿಮ್ಮ ಆರೋಗ್ಯದ ಮೇಲೆ ಬೀಳಲಿದೆ. ಹೀಗಾಗಿ ಅತಿ ಜಾಗ್ರತೆ ವಹಿಸುವ ಆವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ಆದರೆ, ಸಂಗಾತಿಯೊಂದಿಗಿನ ಸಂಬಂಧದಲ್ಲಿ ಎಚ್ಚರಿಕೆ ವಹಿಸಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. 


ಕನ್ಯಾ: ಶನಿ ಗೋಚರ ನಿಮ್ಮ ಪಾಲಿಗೆ ಮಿಶ್ರ ಪ್ರತಿಫಲ ನೀಡಲಿದೆ. ಮಕ್ಕಳ ವಿದೇಶ ಯಾತ್ರೆಯ ಯೋಗವಿದೆ. ತುಂಬಾ ಯೋಚಿಸಿ ಬುದ್ಧಿಯ ಪ್ರಯೋಗ ಮಾಡಿ. ಉತ್ತಮ ಫಲ ಲಭಿಸಲಿದೆ. ಅವಿವಾಹಿತರಿಗೆ ಪ್ರೇಮ ವಿವಾಹದ ಯೋಗವಿದೆ. ಶ್ರವಣ ನಕ್ಷತ್ರದಲ್ಲಿ ಶನಿಯ ಪ್ರವೇಶ ನಿಮ್ಮ ಆದಾಯ ಹೆಚ್ಚಿಸಲಿದೆ ಆದರೆ, ಇದೇವೇಳೆ ಪರಿಶ್ರಮ ಕೂಡ ಹೆಚ್ಚಾಗಲಿದೆ.


ಇದನ್ನು ಓದಿ- Solar Eclipse 2020: ಈ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ, ಕಷ್ಟಗಳು ಹೆಚ್ಚಾಗುವ ಸಾಧ್ಯತೆ, ಈ ಕೆಲಸ ಮಾಡಬೇಡಿ


ತುಲಾ: ಶನಿದೇವನ ಈ ಗೋಚರದಿಂದ ಆಸ್ತಿ ವ್ಯವಹಾರಗಳಲ್ಲಿ ನಿಮಗೆ ಲಾಭ ಸಿಗಲಿದೆ. ಸ್ವಂತ ಮನೆ ಕನಸು ಕಾಣುತ್ತಿದ್ದರೆ, ನಿಮ್ಮ ಕನಸು ನನಸಾಗಲಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಸಫಲತೆ ಸಿಗಲಿದೆ ಹಾಗೂ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಪೋಷಕರ ಆರೋಗ್ಯದ ಕಾಳಜಿ ವಹಿಸಿ.


ವೃಶ್ಚಿಕ: ಈ ಶನಿಗೋಚರ ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಪ್ರತಿಯೊಂದು ಕೆಲಸದಲ್ಲಿ ಸಫಲತೆ ನಿಮ್ಮದಾಗಲಿದೆ. ಇದರಿಂದ ನಿಮ್ಮ ಜೀವನ ಸುಖಮಯವಾಗಲಿದೆ. ಮನೆ ಸದಸ್ಯರು ಇನ್ನಷ್ಟು ನಿಮಗೆ ಹತ್ತಿರವಾಗಲಿದ್ದಾರೆ. ಆಕಸ್ಮಿಕ ಧನಲಾಭದ ಸಂಕೇತಗಳಿವೆ. ಪೋಷಕರ ಆರೋಗ್ಯದ ವಿಶೇಷ ಕಾಳಜಿ ವಹಿಸಿ.


ಧನು: 2021ರ ಶನಿ ಗೋಚರ ಧನು ರಾಶಿಯವರ ಪಾಲಿಗೂ ಕೂಡ ಸಕಾರಾತ್ಮಕವಾಗಿದೆ. ನಿಮಗೆ ನಿಮ್ಮ ಭಾಗ್ಯದ ಬಲ ಸಿಗಲಿದೆ. ದೀರ್ಘಕಾಲದ ಸಮಸ್ಯೆಗಳು ಅಂತ್ಯವಾಗಲಿವೆ. ಶ್ರವಣ ನಕ್ಷತ್ರದಲ್ಲಿ ಶನಿಯ ಪ್ರವೇಶದಿಂದ ಆಕಸ್ಮಿಕ ಧನಲಾಭವಾಗುವ ಯೋಗವಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ. ತಂದೆಯ ಆರೋಗ್ಯದ ಕಾಳಜಿ ವಹಿಸಿ.


ಇದನ್ನು ಓದಿ- ಚಳಿಗಾಲದಲ್ಲಿ ಸೂರ್ಯ ಸ್ನಾನದಿಂದಾಗುವ ಪ್ರಯೋಜನಗಳಿವು


ಮಕರ: ಈ ಶನಿಗೋಚರ ನಿಮ್ಮ ಜೀವನದಲ್ಲಿ ಹಲವು ಏರಿಳಿತಗಳನ್ನು ತರಲಿದೆ. ಶನಿಯ ಉತ್ತರಾಷಾಢ ನಕ್ಷತ್ರ ಭ್ರಮಣದ ಸಂದರ್ಭದಲ್ಲಿ ನಿಮಗೆ ತಂದೆಯ ಸಹಯೋಗ ಸಿಗಲಿದೆ. ಆಕಸ್ಮಿಕ ಧನಪ್ರಾಪ್ತಿಯ ಸಂಕೇತಗಳು ಗೋಚರಿಸುತ್ತಿವೆ. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ದಾಂಪತ್ಯ ಜೀವನ ಒತ್ತಡದಿಂದ ಕೂಡಿರಲಿದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಪ್ರವಾಸದಿಂದ ಲಾಭವಾಗಲಿದೆ.


ಕುಂಭ: 2021ರ ಶನಿ ಗೋಚರ ಕುಂಭ ರಾಶಿಯ ಜಾತಕದವರ ಮೇಲೆ ತುಂಬಾ ನಕಾರಾತ್ಮಕ ಪ್ರಭಾವ ಬೀರಲಿದೆ. ದಾಂಪತ್ಯ ಜೀವನದಲ್ಲಿ ದೊಡ್ಡ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ. ತುಂಬಾ ಯೋಜಿಸಿ ಹಣ ಖರ್ಚು ಮಾಡಿ. ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಈ ಸಮಯ ತುಂಬಾ ಉತ್ತಮವಾಗಿದೆ.


ಮೀನ: ಶನಿದೆವನ ಈ ಗೋಚರ ಮೀನ ರಾಶಿಯ ಜಾತಕ ಹೊಂದಿದವರ ಮೇಲೆ ತುಂಬಾ ಸಕಾರಾತ್ಮಕ ಪ್ರಭಾವ ಬೀರಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಇದರಿಂದ ಉತ್ತಮ ಫಲ ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಫಲತೆ ಸಿಗಲಿದೆ. ಧನಲಾಭದ ಯೋಗವಿದೆ. ಹೂಡಿಕೆಯಿಂದ ಲಾಭವಾಗಲಿದೆ. ಇವೆಲ್ಲವುಗಳ ಪರಿಣಾಮದಿಂದ ನಿಮ್ಮ ಆದಾಯದಲ್ಲಿ ವೃದ್ಧಿಯಾಗಲಿದೆ.  ಕಾರ್ಯಕ್ಷೇತ್ರದಲ್ಲಿ ನಿಮ್ಮ ಬುದ್ಧಿ ಹಾಗೂ ವಿವೇಕದಿಂದ ಸಫಲತೆ ಸಾಧಿಸುವಿರಿ. ಆರೋಗ್ಯದ ದೃಷ್ಟಿಯಿಂದಲೂ ಕೂಡ ಈ ಸಮಯ ತುಂಬಾ ಅನುಕೂಲಕರವಾಗಿದೆ.