Astrology Zodiac Sign: ಪ್ರೀತಿಯನ್ನು ನಿಭಾಯಿಸುವುದು ಪ್ರೀತಿಸುವ ಕೆಲಸಕ್ಕಿಂತ ಕಠಿಣವಾಗಿರುತ್ತದೆ. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ, ಕೆಲ ರಾಶಿಗಳ ಯುವಕರು ಪ್ರೀತಿಸುತ್ತಾರೆ ಮತ್ತು ಅಷ್ಟೇ ಶ್ರದ್ಧೆಯಿಂದ ಅದನ್ನು ನಿಭಾಯಿಸುತ್ತಾರೆ ಎನ್ನಲಾಗುತ್ತದೆ. ಹೌದು, ಈ ರಾಶಿಗಳ ಯುವಕರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಯಾವುದೇ ಯುವತಿಯ ಜೊತೆಗೆ ಇವರು ವಿವಾಹವಾದರೂ ಕೂಡ ವಿವಾಹದ ಬಳಿಕ ಸಂಗಾತಿಯ ಜೀವನವನ್ನು ರೋಮ್ಯಾನ್ಸ್ ನಿಂದ ತುಂಬುತ್ತಾರೆ. ಸಂಗಾತಿಗೆ ಯಾವುದೇ ರೀತಿಯ ಕೊರತೆಯಾಗಳು ಬಿಡುವುದಿಲ್ಲ. ಅವರ ಖುಷಿಗಾಗಿ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. 

COMMERCIAL BREAK
SCROLL TO CONTINUE READING

ಜೋತಿಷ್ಯ ಶಾಸ್ರದ ಪ್ರಕಾರ ಜನ್ಮ ಜಾತಕದ ಪಂಚಮ ಭಾವದಲ್ಲಿ  ಪ್ರೀತಿ ಇರುತ್ತದೆ. ಒಂದು ವೇಳೆ ಈ ಭಾವದಲ್ಲಿ ಶುಭ ಗ್ರಹ ಹಾಗೂ ರಾಶಿ ವಿರಾಜಮಾನವಾದರೆ, ಈ ಜಾತಕ ಹೊಂದಿದವರು ತಮ್ಮ ಪ್ರೀತಿಯ ಬಗ್ಗೆ ತುಂಬಾ ಕಾಳಜಿವಹಿಸುತ್ತಾರೆ. ತಮ್ಮ ಪ್ರೀತಿಯನ್ನು ಸಂಪಾದಿಸಿ ಅವರನ್ನು ಸಾಧ್ಯವಾದಷ್ಟು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ. ಇವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಪ್ರತಿಯೋರ್ವ ಯುವತಿ ಈ ರಾಶಿಗಳ ಯುವಕರನ್ನು ವರಿಸಲು ಮತ್ತು ಅವರೊಂದಿಗೆ ತಮ್ಮ ಜೀವನ ಸಾಗಿಸಲು ಬಯಸುತ್ತಾರೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮಿಥುನ ರಾಶಿ - ಪ್ರೀತಿಯ ವಿಷಯದಲ್ಲಿ, ಈ ರಾಶಿಯ ಜಾತಕ ಹೊಂದಿದವರು ಇತರರಿಗಿಂತ ತುಂಬಾ ಭಿನ್ನವಾಗಿರುತ್ತಾರೆ. ಪ್ರೀತಿಗೆ ಮೋಸ ಮಾಡುವುದು ಇವರ ಜಾಯಮಾನದಲ್ಲಿಯೇ ಇರುವುದಿಲ್ಲ. ಮಿಥುನ ರಾಶಿಯವರ ಪ್ರೀತಿ ಎಷ್ಟು ಗಾಢವಾಗಿರುತ್ತದೆ ಎಂದರೆ ಎದುರಿಗಿರುವವರಿಗೂ ಇದರಿಂದ ತೊಂದರೆಯಾಗತೊಡಗುತ್ತದೆ. ನಿಮ್ಮ ಪ್ರೀತಿಗಾಗಿ ಇವರು ಏನು ಬೇಕಾದರೂ ಕೂಡ ಮಾಡಲು ಸಿದ್ಧರಿರುತ್ತಾರೆ. ಈ ರಾಶಿಚಕ್ರದ ಯುವಕರ ಮೇಲೆ ಬುಧ ದೇವನ ಪ್ರಭಾವವಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಿಥುನ ರಾಶಿ ಮೂರನೆಯ ರಾಶಿಯಾಗಿದ್ದು, 'ಅವಳಿ' ಅದರ ಚಿಹ್ನೆಯಾಗಿದೆ.


ಈ ರಾಶಿಯ ಜನರು ತುಂಬಾ ಆಕರ್ಷಿಸುವವರು ಮತ್ತು ಸ್ನೇಹಪರರು ಆಗಿರುತ್ತಾರೆ ಎಂಬುದ ಈ ಚಿಹ್ನೆಯ ಅರ್ಥ. ಯಾರೊಂದಿಗಾದರೂ ಬೇಗನೆ ಬೆರೆಯುತ್ತಾರೆ. ಬುಧ ಈ ರಾಶಿಯ ರಾಷ್ಯಾಧಿಪ ಗ್ರಹ ಮತ್ತು ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. 'A', 'Ch' ಮತ್ತು 'D' ಯಿಂದ ಪ್ರಾರಂಭವಾಗುವ ಜನರ ರಾಶಿ ಮಿಥುನ ರಾಶಿಯಾಗಿರುತ್ತದೆ.


ಇದನ್ನೂ ಓದಿ-Shani Vakri 2022: ಶೀಘ್ರದಲ್ಲಿಯೇ ಶನಿಯ ವಕ್ರನಡೆ ಆರಂಭ, ಈ ರಾಶಿಗಳಿಗೆ ಸಮಯ ಕಷ್ಟದಿಂದ ಕೂಡಿರಲಿದೆ


ಈ ಜನರು ತುಂಬಾ ಸೃಜನಶೀಲರು
ಈ ರಾಶಿಯ ಜನರ ಮೇಲೆ ಬುಧ ಗ್ರಹದ ಗಾಢ ಗಾಢ ಪ್ರಭಾವ ಇರುತ್ತದೆ. ಇದೇ ಕಾರಣದಿಂದ ಈ ಜನರು ಉತ್ತಮ ಭಾಷಣಕಾರರು, ಕವಿಗಳು, ಸಾಹಿತಿಗಳು, ಬರಹಗಾರರು, ಸ್ಟ್ಯಾಂಡ್-ಅಪ್ ಹಾಸ್ಯಗಾರರು ಮತ್ತು ಗಾಯಕರು ಸಾಬೀತಾಗುತ್ತಾರೆ. ಈ ಜನರು ತುಂಬಾ ಚಂಚಲ ಸ್ವಭಾವದವರಾಗಿರುತ್ತಾರೆ. ಇವರ ಕಲ್ಪನಾ ಶಕ್ತಿ ತುಂಬಾ ಹೆಚ್ಚಾಗಿರುತ್ತದೆ. ಪ್ರಣಯದ ವಿಚಾರದಲ್ಲಿ ಇವರು ಎಲ್ಲರನ್ನು ಹಿಂದಕ್ಕೆ ಬಿಡುತ್ತಾರೆ. ಅಲ್ಲದೆ, ಪ್ರೀತಿಯ ವಿಷಯದಲ್ಲಿ ತುಂಬಾ ನಿಷ್ಠಾವಂತರು ಮತ್ತು ಗಂಭೀರರಾಗಿರುತ್ತಾರೆ.


ಇದನ್ನೂ ಓದಿ-Astro Remedies: ಪತಿ-ಪತ್ನಿಯರ ನಡುವಿನ ಜಗಳ ನಿವಾರಣೆಗೆ ಇಲ್ಲಿವೆ ಅದ್ಭುತ ಉಪಾಯಗಳು


(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.