Astrology: ಈ 3 ರಾಶಿಗಳ `ಅಚ್ಚೆ ದಿನ್` ಆರಂಭ, ಶನಿ ಪ್ರಕೊಪದಿಂದ ಯಾರಿಗೆ ಮುಕ್ತಿ ತಿಳಿಯೋಣ ಬನ್ನಿ
Astrology - ಪ್ರಸ್ತುತ ವಕ್ರ ನಡೆಯಲ್ಲಿರುವ ಶನಿ (Shani Dev), ಮುಂದಿನ ತಿಂಗಳಿನಿಂದ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ಇದರಿಂದ ಶನಿಯ ಪ್ರಕೋಪ ಎದುರಿಸುತ್ತಿರುವ 3 ರಾಶಿಗಳಿಗೆ ಭಾರಿ ನೆಮ್ಮದಿ ಸಿಗಲಿದೆ ಜೊತೆಗೆ ಅವರಿಗೆ ಹಲವು ಲಾಭಗಳು ಕೂಡ ಆಗಲಿವೆ.
End Of Shani Vakri - ನವದೆಹಲಿ: ಶನಿಯ ಪ್ರಕೋಪ (End Of Shani Vakri) ಜೀವನದಲ್ಲಿ ಅನೇಕ ತೊಂದರೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ ಜನರು ಶನಿ ದೆಸೆ (Shani Prakop) ಬದಲಾಗುವುದನ್ನು ಕಾಯುತ್ತಾರೆ. ಮುಂದಿನ ಅಕ್ಟೋಬರ್ ತಿಂಗಳಲ್ಲಿ ಶನಿಯ ಸ್ಥಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಪ್ರಸ್ತುತ ಹಿನ್ನಡೆಯ ಸ್ಥಿತಿಯಲ್ಲಿರುವ ಶನಿಯು ಅಕ್ಟೋಬರ್ 11 ರಿಂದ ನೇರವಾಗಿ ನಡೆ ಆರಂಭಿಸಲಿದ್ದಾನೆ. ಇದು ಶನಿಯ ಪ್ರಕೋಪ ಎದುರಿಸುತ್ತಿರುವ ರಾಶಿಚಕ್ರದ (Zodiac Sign) ಜಾತಕದವರಿಗೆ ಸಾಕಷ್ಟು ನೆಮ್ಮದಿಯನ್ನು ನೀಡಲಿದೆ. ಶನಿಯ ನೇರ ಚಲನೆಯು ಯಾವ ರಾಶಿಚಕ್ರದ ಜನರ ದುರಾದೃಷ್ಟವನ್ನು ಜೀವನದಲ್ಲಿ ಸಂತೋಷವನ್ನು ತರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ಶನಿಯ ನೇರ ನಡೆಯಿಂದ ಈ ರಾಶಿಯ ಜನರಿಗೆ ಲಾಭ ಸಿಗಲಿದೆ
ತುಲಾ - ಪ್ರಸ್ತುತ ತುಲಾ ರಾಶಿಯ ಜಾತಕದವರ ಮೇಲೆ ಶನಿಯ 2.5 ವರ್ಷ ನಡೆಯುತ್ತಿದೆ. ಈ ಕಾರಣದಿಂದಾಗಿ ಈ ರಾಶಿಚಕ್ರದ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶನಿಯು ಅಕ್ಟೋಬರ್ 11 ರಿಂದ ನೇರವಾಗಿ ಚಲಿಸಲು ಆರಂಭಿಸಿದ ತಕ್ಷಣ ಅವರ ಸಮಸ್ಯೆಗಳು ಅನ್ತ್ಯವಾಗಳಿವೆ. ವೃತ್ತಿ ಜೀವನದಲ್ಲಿ ಒಳ್ಳೆಯ ದಿನಗಳು ಬರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಕೂಡ ಇರಲಿದೆ.
ಮಿಥುನ - ಮಿಥುನ ಜಾತಕದವರೂ ಕೂಡ ಪ್ರಸ್ತುತ ಶನಿಯ 2.5 ವರ್ಷ ಎದುರಿಸುತ್ತಿದ್ದಾರೆ. ಈ ಕಾರಣ ಒತ್ತಡ, ಮಾನಸಿಕ ಅಶಾಂತಿಯನ್ನು ಅವರು ಎದುರಿಸುತ್ತಿದ್ದಾರೆ. ಅಕ್ಟೋಬರ್ 11ರ ನಂತರ ಇವರಿಗೆ ಶಾಂತಿ ಸಿಗಲಿದೆ ಹಾಗೂ ಧನಲಾಭವಾಗಲಿದೆ.
ಇದನ್ನೂ ಓದಿ-Budh Rashi Parivartan: ಬುಧ-ಶುಕ್ರರ ಸಂಯೋಜನೆ; ಈ ರಾಶಿಯ ಜನರಿಗೆ ಅದೃಷ್ಟವೋ ಅದೃಷ್ಟ
ಧನು - ಧನು ರಾಶಿಯ ಜಾತಕದವರಿಗೂ ಕೂಡ ಶನಿಯ ನೇರ ನಡೆಯಿಂದ ಹಲವು ರೀತಿಯ ಲಾಭಗಳು ಸಿಗಲಿವೆ. ಶನಿಯ ಕಾರಣ ಜೀವನದಲ್ಲಿ ಬಂದ ಕಷ್ಟ ಕಾರ್ಪಣ್ಯಗಳು ನಿವಾರನೆಯಾಗಲಿವೆ . ನಿಂತು ಹೋದ ಕಾರ್ಯಗಳು ಪುನಃ ಆರಂಭಗೊಳ್ಳಲಿವೆ. ಆಸ್ತಿಗೆ ಸಂಬಂಧಿಸಿದಂತೆ ಲಾಭ ಸಿಗಲಿದೆ.
ಇದನ್ನೂ ಓದಿ-Pitru Paksha 2021: ಇಂದಿನಿಂದ ಪಿತೃ ಪಕ್ಷ ಆರಂಭ, 15 ದಿನಗಳವರೆಗೆ ಮರೆತು ಕೂಡ ಈ ಕೆಲಸಗಳನ್ನು ಮಾಡಬೇಡಿ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.