ನವದೆಹಲಿ: ಜ್ಯೋತಿಷ್ಯ ಶಾಸ್ತ್ರ(Astrology)ದ ಪ್ರಕಾರ ಯಾವುದೇ ವ್ಯಕ್ತಿಯ ಭವಿಷ್ಯವು ಜಾತಕದಲ್ಲಿರುವ ಗ್ರಹಗಳ ಸ್ಥಾನದಿಂದ ಬಹಿರಂಗಗೊಳ್ಳುತ್ತದೆ. ಜಾತಕದಲ್ಲಿ ಗ್ರಹಗಳ ಸಂಯೋಜನೆಯಿಂದ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಗ್ರಹಗಳ ಶುಭ ಅಥವಾ ಅಶುಭ ಸ್ಥಾನವನ್ನು ನೋಡಿಯೇ ವ್ಯಕ್ತಿಯ ತೊಂದರೆಗಳು, ಸಂಪತ್ತು, ಕೀರ್ತಿ ಇತ್ಯಾದಿಗಳನ್ನು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಯೋಗ(Shubh Yoga In Kundli)ದ ಬಗ್ಗೆ ತಿಳಿದುಕೊಳ್ಳಿರಿ.   


COMMERCIAL BREAK
SCROLL TO CONTINUE READING

ದೈವಿಕ ಯೋಗ


ಯಾರ ಜಾತಕದಲ್ಲಿ ಗುರುವು ರಾಶಿಯಲ್ಲಿ ಅಂದರೆ ಧನು ಅಥವಾ ಮೀನದಲ್ಲಿ ಇದ್ದಾನೋ ಅಥವಾ ಅವನ ಉತ್ಕೃಷ್ಟ ರಾಶಿಯ ಕೇಂದ್ರದಲ್ಲಿ ಇರುವ ವ್ಯಕ್ತಿಯಲ್ಲಿ ದಿವ್ಯ ಯೋಗ(Divya Yoga)ವು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಈ ಯೋಗವು ಮೇಷ, ತುಲಾ, ಮಕರ ಮತ್ತು ಕರ್ಕ ರಾಶಿಯವರ ಜಾತಕದಲ್ಲಿ ರೂಪುಗೊಳ್ಳುತ್ತದೆ. ಈ ಯೋಗವು ಯಾರ ಜಾತಕದಲ್ಲಿ ರೂಪುಗೊಂಡಿದೆಯೋ ಅವರು ಒಳ್ಳೆಯ ಮತ್ತು ಉದಾತ್ತ ಚಿಂತನೆಯ ಸ್ವಭಾವದವರಾಗಿರುತ್ತಾರೆ. ಇಂತಹ ಜನರು ಸಂತೋಷದ ಜೀವನವನ್ನು ಹೊಂದಿರುತ್ತಾರೆ.


ಇದನ್ನೂ ಓದಿ: ಹಸ್ತದಲ್ಲಿ ವಿವಾಹ ರೇಖೆಯು ಈ ರೀತಿ ಇದ್ದರೆ ಜೀವನ ಪೂರ್ತಿ ಅನ್ಯೋನ್ಯವಾಗಿರುತ್ತಾರೆ ಪತಿ ಪತ್ನಿ


ಶಶ ಯೋಗ


ಶನಿಯು ಜಾತಕದಲ್ಲಿ ಮೊದಲ, ಚತುರ್ಥ, 7ನೇ ಅಥವಾ 10ನೇ ಮನೆಯಲ್ಲಿದ್ದರೆ ಅಥವಾ ಮಕರ ಅಥವಾ ಕುಂಭ ರಾಶಿಯಲ್ಲಿದ್ದರೆ, ಶಶ ಯೋಗ(Shasha Yoga)ವು ರೂಪುಗೊಳ್ಳುತ್ತದೆ. ಇದೊಂದು ರೀತಿಯ ರಾಜಯೋಗ. ಹಾಗೆಯೇ ಶನಿಯು ತುಲಾ ರಾಶಿಯಲ್ಲಿ ಕುಳಿತಿದ್ದರೂ ಕೂಡ ಈ ಯೋಗವು ಶುಭ ಫಲವನ್ನು ನೀಡುತ್ತದೆ. ಯಾರ ಜಾತಕದಲ್ಲಿ ಈ ಯೋಗವು ರೂಪುಗೊಳ್ಳುತ್ತದೆಯೋ, ಅವರು ತಮ್ಮ ಜೀವನದಲ್ಲಿ ಶ್ರೀಮಂತನಾಗುತ್ತಾರೆ. ಮೇಷ, ವೃಷಭ, ಕರ್ಕಾಟಕ, ಸಿಂಹ, ತುಲಾ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಗಳಲ್ಲಿ ಜನಿಸಿದವರು ತಮ್ಮ ಜಾತಕದಲ್ಲಿ ಈ ಯೋಗ(Auspicious Yoga In Kundli)ವನ್ನು ರೂಪುಗೊಳ್ಳುವ ಬಲವಾದ ಅವಕಾಶವನ್ನು ಹೊಂದಿದ್ದಾರೆ.


ರುಚಕ ಯೋಗ


ಜಾತಕದಲ್ಲಿ ಮಂಗಳನು ​​ಕೇಂದ್ರ ಸ್ಥಾನದಲ್ಲಿ ಅಂದರೆ 1, 4, 7 ಅಥವಾ 10ನೇ ಮನೆಯಲ್ಲಿದ್ದರೆ ಅಥವಾ ಅದರ ಉಚ್ಛ ರಾಶಿಯಾದ ಮಕರ, ಮೇಷ ರಾಶಿಯಲ್ಲಿದ್ದರೆ ರುಚಕ ಯೋಗ(Rouchak Yoga)ವು ರೂಪುಗೊಳ್ಳುತ್ತದೆ. ಈ ಯೋಗವು ಯಾರ ಜಾತಕದಲ್ಲಿ ರೂಪುಗೊಳ್ಳುತ್ತದೆಯೋ ಅವರು ಧೈರ್ಯಶಾಲಿಗಳು ಮತ್ತು ಬಲಶಾಲಿಗಳಾಗಿರುತ್ತಾರೆ. ಅದೇ ರೀತಿ ಇಂತಹ ಜನರು ಸಮರ್ಥ ವಾಗ್ಮಿಗಳೂ ಆಗಿರುತ್ತಾರೆ. ಇದಲ್ಲದೆ ಇಂತಹ ಜನರು ಜೀವನದ ಎಲ್ಲಾ ಸಂತೋಷಗಳನ್ನು ಪಡೆಯುತ್ತಾರೆ. ರುಚಕ ಯೋಗವನ್ನು ರಾಜಯೋಗದ ವರ್ಗದಲ್ಲಿ ಇರಿಸಲಾಗಿದೆ.


ಇದನ್ನೂ ಓದಿ: ಈ 3 ರಾಶಿಗಳ ಮೇಲೆ ಸದಾ ಇರುತ್ತದೆ ಲಕ್ಷ್ಮೀ ಕೃಪೆ, ಜೀವನದಲ್ಲಿ ಸಂಪತ್ತು ಮತ್ತು ವೈಭವದ ಕೊರತೆಯಿರುವುದಿಲ್ಲ


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.