ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ತನ್ನ ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರಬೇಕೆಂದು ಬಯಸುತ್ತಾನೆ. ಪ್ರತಿಯೊಬ್ಬರೂ ತಮ್ಮ  ಕುಟುಂಬವು ಯಾವುದೇ ರೀತಿಯ ಕೊರತೆಯನ್ನು ಎದುರಿಸಬಾರದು ಎಂದು ಬಯಸುತ್ತಾರೆ. ಆದರೆ ಇದು ನಿಜ ಜೀವನದಲ್ಲಿ ಸಾಧ್ಯವಿಲ್ಲ. ಪ್ರತಿದಿನ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ.  ಕೆಲವೊಮ್ಮೆ ನಿಮ್ಮ ಅದೃಷ್ಟವೂ ನಿಮ್ಮನ್ನು ಬೆಂಬಲಿಸುವುದಿಲ್ಲ. ಜಗಳ, ವೈರ ಪರಿವಾರದಲ್ಲಿ ಸಾಮಾನ್ಯವಾಗಿರುತ್ತದೆ. ಇದಕ್ಕೆ 


COMMERCIAL BREAK
SCROLL TO CONTINUE READING

ನಿತ್ಯದ ಸಮಸ್ಯೆಗಳಿಗೆ ಪರಿಹಾರ ಹೇಗೆ..?
ದಿನನಿತ್ಯದ  ಈ ಜಂಜಡಗಳಿಗೆ ಹೆದರುವ ಅಗತ್ಯವಿಲ್ಲ. ಅದರಿಂದ ಓಡಿ ಹೋಗುವ ಪ್ರಯತ್ನವೂ ಬೇಡ. ಯಾಕೆಂದರೆ, ಜ್ಯೋತಿಷ್ಯ (Astrology) ದಲ್ಲಿ ಅದಕ್ಕೆ ಪರಿಹಾರವಿದೆ.  ಆ ಸುಲಭ ಪರಿಹಾರಗಳನ್ನು ನೋಡೋಣ. 


ಇದನ್ನೂ ಓದಿReligious Belief: ಈ ದಿನ ಹಾಗೂ ಈ ತಾರೀಖಿಗೆ ಸಾಲ ಪಡೆಯುವುದು ಬೇಡ... ಯಾಕೆ?


ಪರಿಹಾರ 1 : ತುಳಸಿ ಅನುಗ್ರಹಕ್ಕೆ ಪಾತ್ರರಾಗಿ.
ತುಳಸಿ (Tulsi) ಔಷಧೀಯ ಸಸ್ಯ. ಪೂಜನೀಯವೂ ಹೌದು. ಧರ್ಮ ಪರಂಪರೆಯಲ್ಲಿ ಅದಕ್ಕೊಂದು ಮಹತ್ವದ ಸ್ಥಾನವಿದೆ.  ಶ್ರೀಹರಿಗೆ  ಪ್ರಿಯ ಸಸ್ಯ ತುಳಸಿ. ಹಾಗಾಗಿ ಮನೆಯ ಅಂಗಳದಲ್ಲೊಂದು ತುಳಸಿ ಗಿಡ ನೆಡಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅದಕ್ಕೆ  ನೀರು (Water) ಹಾಕಿ. ಹೀಗೆ ಮಾಡಿದರೆ ಮನೆಯಲ್ಲಿರುವ ನೆಗೆಟಿವ್ ಎನರ್ಜಿ (Negativity)  ದೂರ ಹೋಗುತ್ತದೆ. ಜೊತೆಗೆ ಶ್ರೀಹರಿ ಅನುಗ್ರಹ ನಿಮ್ಮ ಮೇಲಿರುತ್ತದೆ. 


ಪರಿಹಾರ 2 : ಅಶ್ವತ್ಥ ಮರಕ್ಕೆ ಪೂಜೆ ಸಲ್ಲಿಸಿ..!
ಧರ್ಮ ಪರಂಪರೆಯಲ್ಲಿ ಅಶ್ವತ್ಥ ಮರ (Peeple Tree)ಕ್ಕೆ ದೇವ ಮರ ಎಂಬ ಉಪಾದಿ ನೀಡಲಾಗಿದೆ. ಅಶ್ವತ್ಥ ಮರದಲ್ಲಿ ಶ್ರೀ ಹರಿ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ.  ಅಶ್ವತ್ಥ ಮರಕ್ಕೆ ಜಲ ಅರ್ಪಿಸುವುದರಿಂದ ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರುಬಲವೂ ಪ್ರಬಲವಾಗುತ್ತದೆ ಎಂದು ಜ್ಯೋತಿಷ್ಯ (Astrology) ವಿಜ್ಞಾನ ಹೇಳುತ್ತದೆ. ಗುರುವಿಗೆ ಧನದ (Wealth) ಜೊತೆ ನೇರ ಸಂಪರ್ಕ ವಿದೆ. ಅಶ್ವತ್ಥ ಮರಕ್ಕೆ ಒಂದು ಚೊಂಬು ಜಲ ಸಮರ್ಪಣೆಯಿಂದ ನಿಮಗೆ ಶ್ರೀ ಹರಿಯ ಜೊತೆ ಜೊತೆಗೆ ಗುರುವಿನ ಅನುಗ್ರಹವೂ (Blessings)ಆಗಲಿದೆ. 


ಇದನ್ನೂ ಓದಿ : The Story of ShaniDev : ಸೂರ್ಯಪುತ್ರ ಶನಿಗೆ ಶನಿವಾರ ಎಳ್ಳೆಣ್ಣೆಅರ್ಪಿಸಿದರೆ ಏನು ಫಲ..?


ಪರಿಹಾರ 3 : ಸಮೃದ್ಧಿಗೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಿ.
ಮನೆಯಲ್ಲಿ ಸಮೃದ್ಧಿಯಿರಬೇಕಾದರೆ ಮಹಾಲಕ್ಷ್ಮಿಯ ಆಶೀರ್ವಾದ ಅಗತ್ಯ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯ ದ್ವಾರಕ್ಕೆ ನೀರು ಹಾಕಿ ಗುಡಿಸಬೇಕು. ಇದಲ್ಲದೆ, ಸೂರ್ಯದೇವನಿಗೆ (Sun) ಜಲ ಅರ್ಪಿಸಬೇಕು.  ಇದರಿಂದ ಮನೆಗೆ ಮತ್ತು ಮನೆ ಯಜಮಾನನಿಗೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ


ಪರಿಹಾರ 4 : ಪಕ್ಷಿಗಳಿಗೆ ನೀರಿಡಿ, ಆಹಾರ ಕೊಡಿ..!
ಮನೆಯಲ್ಲಿ ಯಾವಾಗಲೂ ದರಿದ್ರ ತುಂಬಿದ್ದರೆ ಅಂತವರು ಹೈರಾಣಾಗುವ ಅಗತ್ಯವಿಲ್ಲ. ಮನೆಯ ಸುತ್ತ ಮುತ್ತ ಬರುವ ಪಕ್ಷಿಗಳಿಗೆ (Birds) ನೀರು, ಧಾನ್ಯ ನೀಡಿ. ಮನೆಯ ಮೇಲ್ಛಾವಣಿ ಅಥವ ಬಾಲ್ಕನಿಯಲ್ಲಿ ಹಕ್ಕಿಗಳಿಗೆ ನೀರಿಡಿ. ಕಾಳು, ಧಾನ್ಯ ಚೆಲ್ಲಿ. ಹಕ್ಕಿಗಳು ತಿಂದು ಹೋಗಲು ಅನುಕೂಲ ಮಾಡಿಕೊಡಿ. ಇದರಿಂದ ನಿಮ್ಮ ದಾರಿದ್ರ್ಯ ತೊಲಗುತ್ತದೆ. ಹಣಕಾಸು ಸಮಸ್ಯೆ ದೂರವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.