ನವದೆಹಲಿ: ಜ್ಯೋತಿಷ್ಯದ (Astrology) ಪ್ರಕಾರ, ಜಾತಕದಲ್ಲಿ ಗ್ರಹಗಳ ಸ್ಥಾನವು ಜೀವನದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುತ್ತದೆ. ಗ್ರಹಗಳು ಬಲವಾದ ಮತ್ತು ಶುಭ ಸ್ಥಾನದಲ್ಲಿದ್ದಾಗ, ಜೀವನದಲ್ಲಿ ವಿಶೇಷ ಯಶಸ್ಸು ಪಾಪ್ತಿಯಾಗುತ್ತದೆ. ಪ್ರತಿ ಗ್ರಹದ ಪ್ರಭಾವ ಅವಲಂಬಿಸಿ ಪ್ರತಿವ್ಯಕ್ತಿಗಳ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯ ವಿಭಿನ್ನವಾಗಿರುತ್ತದೆ. ಬುಧ (Budh Grah) ಮತ್ತು ಶನಿ (Shani Planet) ಕ್ರಮವಾಗಿ ಬುದ್ಧಿವಂತಿಕೆ ಮತ್ತು ಕರ್ಮಕ್ಕೆ ಸಂಬಂಧಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ತಮ್ಮ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದ ಯಾವ ರಾಶಿಯ ಯುವತಿಯರು ಉನ್ನತ ಸ್ಥಾನ ಅಲಂಕರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

ಮಿಥುನ ರಾಶಿ (Gemini)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಗೆ ಸೇರಿದ ಹುಡುಗಿಯರು ಹಣವಂತರಾಗಿರುತ್ತಾರೆ. ಈ ರಾಶಿಚಕ್ರದ ಹುಡುಗಿಯರು ವೃತ್ತಿಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ಅಲ್ಲದೆ, ಇವರು ವ್ಯಾಪಾರದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ವಾಸ್ತವದಲ್ಲಿ, ಈ ರಾಶಿಯವರು ಬುಧ ಮತ್ತು ಶನಿಯಿಂದ ಪ್ರಭಾವಿತವಾರಾಗಿರುತ್ತಾರೆ. ಹೀಗಾಗಿ, ಈ ರಾಶಿಗೆ ಸೇರಿದ ಹುಡುಗಿಯರು ತುಂಬಾ ವೇಗವಾಗಿರುತ್ತಾರೆ ಮತ್ತು ಕಠಿಣ ಪರಿಶ್ರಮದಿಂದ ಕೂಡಿರುತ್ತಾರೆ.


ಇದನ್ನೂ ಓದಿ-ಏಪ್ರಿಲ್ ನಲ್ಲಿ ರೂಪುಗೊಳ್ಳಲಿದೆ ದುರ್ಲಭ ಯೋಗ !ಶನಿ ಸಮೇತ ನವ ಗ್ರಹಗಳ ರಾಶಿ ಬದಲಾವಣೆ: ಹೇಗಿರಲಿದೆ ಪ್ರಭಾವ ?

ಕನ್ಯಾರಾಶಿ (Virgo)
ಕನ್ಯಾ ರಾಶಿಯ ಹುಡುಗಿಯರು ಬುದ್ಧಿವಂತರು. ಈ ರಾಶಿಚಕ್ರದ ಹುಡುಗಿಯರು ಹಣ ಸಂಪಾದಿಸುವ ಉತ್ಸಾಹವನ್ನು ಹೊಂದಿರುತ್ತಾರೆ. ಅವರ ಮಾತಿನ ಶೈಲಿಯೇ ಬೇರೆಯಾಗಿರುತ್ತದೆ. ಈ ಕಾರಣದಿಂದಾಗಿ ಇವರು ಇತರರಿಗಿಂತ ಭಿನ್ನರಾಗಿರುತ್ತಾರೆ. ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದಾಗಿ, ಇವರು ಸಾಮಾನ್ಯವಾಗಿ ಪ್ರತಿ ಕೆಲಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಕನ್ಯಾ ರಾಶಿಯ ಹುಡುಗಿಯರಿಗೆ ಬುಧ ಮತ್ತು ಶನಿ ದೇವ ದಯೆ ತೋರುತ್ತಾರೆ. ಇದರಿಂದಾಗಿ ಈ ರಾಶಿಚಕ್ರಕ್ಕೆ ಸೇರಿದ ಹುಡುಗಿಯರು ಕಠಿಣ ಪರಿಶ್ರಮಿಳಾಗಿರುತ್ತಾರೆ ಮತ್ತು ಭಾವೋದ್ರಿಕ್ತರಾಗಿರುತ್ತಾರೆ.


ಇದನ್ನೂ ಓದಿ-April Monthly Horoscope : ಗ್ರಹಗಳ ಬದಲಾವಣೆಯಿಂದ ಈ ತಿಂಗಳು ಯಾರಿಗೆ ಲಾಭ, ಮತ್ತು ಯಾರಿಗೆ ನಷ್ಟ ?

ಮಕರರಾಶಿ (Capricorn)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯ ಅಧಿಪತಿ ಶನಿದೇವ. ಹೀಗಿರುವಾಗ, ಈ ರಾಶಿಚಕ್ರದ ಹುಡುಗಿಯರು ಶನಿದೇವನ (Shani Grah)ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಆದ್ದರಿಂದ, ಈ ರಾಶಿಗೆ ಸೇರಿದ ಹುಡುಗಿಯರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಮಾನವನ್ನು ಸಾಧಿಸುತ್ತಾರೆ. ಅಲ್ಲದೆ, ಇವರು ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲ, ಇವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸುತ್ತಾರೆ.

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.