Auspicious Day For Shopping: ಚಿನ್ನ, ಮನೆ ಹಾಗೂ ವಾಹನ ಖರೀದಿಗೆ ಜೂನ್ 4 ವಿಶೇಷವಾಗಿರಲಿದೆ, ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ
Pushya Nakshtra 2022: ಯಾವುದೇ ಒಂದು ಮೌಲ್ಯವನ್ನು ಹೊಂದಿರುವ ವಸ್ತುವಿನ ಖರೀದಿಗೆ ಶುಭ ದಿನ ಮತ್ತು ಸಮಯವನ್ನು ಹೊಂದಿರುವುದು ತುಂಬಾ ಅವಶ್ಯಕ. ಒಂದು ವೇಳೆ ನೀವೂ ಕೂಡ ಚಿನ್ನ, ಮನೆ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದಾರೆ, ಜೂನ್ 4 ಅಂದರೆ ನಾಳಿನ ದಿನವು ತುಂಬಾ ತುಂಬಾ ವಿಶೇಷವಾಗಿರಲಿದೆ. ಈ ದಿನ ಪುಷ್ಯ ನಕ್ಷತ್ರದ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ.
Buy Gold-House On 4th June: ಸಾಮಾನ್ಯವಾಗಿ, ಯಾವುದೇ ಕೆಲಸವನ್ನು ಮಾಡುವ ಮೊದಲು, ಒಬ್ಬ ವ್ಯಕ್ತಿಯು ಉತ್ತಮ ದಿನ ಉತ್ತಮ ಸಮಯ ಇತ್ಯಾದಿಗಳ ಕುರಿತು ಜೋತಿಶಿಗಳಿಗೆ ವಿಚಾರಿಸುತ್ತಾನೆ. ವಸ್ತುಗಳ ಖರೀದಿಗೆ ಸಮಯ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಚಿನ್ನ, ಮನೆ ಮತ್ತು ವಾಹನ ಮುಂತಾದ ಭಾರಿ ಮೌಲ್ಯ ಹೊಂದಿರುವ ವಸ್ತುಗಳನ್ನು ಖರೀದಿಸುವ ಮೊದಲು ಸರಿಯಾದ ದಿನ ಮತ್ತು ಸಮಯವನ್ನು ನೋಡುವುದು ತುಂಬಾ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ, ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಪುಷ್ಯ ನಕ್ಷತ್ರದಲ್ಲಿ ವಸ್ತುಗಳನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜೂನ್ 4 ರ ಶನಿವಾರದಂದು ಪುಷ್ಯ ನಕ್ಷತ್ರದ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಈ ಯೋಗವು ಯಾವುದೇ ಶುಭ ಕಾರ್ಯ, ಶಾಪಿಂಗ್ ಇತ್ಯಾದಿಗಳಿಗೆ ತುಂಬಾ ವಿಶೇಷವಾಗಿದೆ. ಈ ದಿನದಂದು ಮಾಡಿದ ಎಲ್ಲಾ ಕೆಲಸಗಳು ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು ಸಾಧಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಜನರು ಯಾವುದೇ ಶುಭ ಕಾರ್ಯಕ್ಕಾಗಿ ಈ ನಕ್ಷತ್ರಕ್ಕಾಗಿ ಕಾಯುತ್ತಾರೆ.
ಪುಷ್ಯ ನಕ್ಷತ್ರದಲ್ಲಿ ಏನು ಖರೀದಿಸಬೇಕು?
ಹಿಂದೂ ಪಂಚಾಂಗದ ಪ್ರಕಾರ, ನಾಳೆ ಅಂದರೆ ಜೂನ್ 4, ಶನಿವಾರ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಐದನೇ ದಿನ. ಈ ದಿನ ಪುಷ್ಯ ನಕ್ಷತ್ರವಿರಲಿದೆ. ಈ ನಕ್ಷತ್ರ ಪೂಜೆ, ಧಾರ್ಮಿಕ ಕೆಲಸ ಮತ್ತು ಶುಭ ಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಪುಷ್ಯ ನಕ್ಷತ್ರದಲ್ಲಿ ವಾಹನಗಳು, ಭೂಮಿ, ಚಿನ್ನ ಅಥವಾ ಯಾವುದೇ ದೊಡ್ಡ ವ್ಯವಹಾರವನ್ನು ಅಂತಿಮಗೊಳಿಸುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ-Weekly Horoscope: ಹೊಸ ನೌಕರಿ ಹುಡುಕಾಟದಲ್ಲಿರುವವರಿಗೆ ಈ ವಾರ ಸಿಗಲಿದೆ ಯಶಸ್ಸು
ಪುಷ್ಯ ನಕ್ಷತ್ರದ ಕಾಲಾವಧಿ ಎಷ್ಟು?
ಹಿಂದೂ ಪಂಚಾಂಗದ ಪ್ರಕಾರ, ಪುಷ್ಯ ನಕ್ಷತ್ರವು ಜೂನ್ 3, 2022, ಶುಕ್ರವಾರ ರಾತ್ರಿ 7.05 ರಿಂದ ಜೂನ್ 4, 2022 ರವರೆಗೆ, ಅಂದರೆ ಶನಿವಾರ ರಾತ್ರಿ 11.55 ರವರೆಗೆ.
ಇದನ್ನೂ ಓದಿ-Astrology Tips: ಈ ಕೆಟ್ಟ ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು ಎಚ್ಚರ!
ಪುಷ್ಯ ನಕ್ಷತ್ರದಲ್ಲಿ ಏನು ಮಾಡಬೇಕು
>> ಹಿಂದೂ ಧರ್ಮದಲ್ಲಿ ಪುಷ್ಯ ನಕ್ಷತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ನಕ್ಷತ್ರದ ಅವಧಿಯಲ್ಲಿ ಚಿನ್ನ ಖರೀದಿಸುವುದರಿಂದ ಸಮೃದ್ಧಿ ಹರಿದುಬರಲಿದೆ ಎಂಬುದು ಧಾರ್ಮಿಕ ನಂಬಿಕೆ.
>> ಈ ನಕ್ಷತ್ರದ ಕಾಲಾವನ್ಧಿಯಲ್ಲಿ ವಾಹನ, ಮನೆ ಖರೀದಿಯೂ ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.
>> ಪುಷ್ಯ ನಕ್ಷತ್ರದ ಸಮಯದಲ್ಲಿ ಅಂಗಡಿಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಇಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಕ್ಷತ್ರದ ಅವಧಿಯಲ್ಲಿ ಒಂದು ಚದರ ಬೆಳ್ಳಿಯ ತುಂಡನ್ನು ಖರೀದಿಸಿ, ಅದನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.
>> ಈ ದಿನ ಶ್ರೀ ವಿಷ್ಣುವಿನ ಜೊತೆ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಮತ್ತು ಶ್ರೀ ಯಂತ್ರವನ್ನು ಖರೀದಿಸುವುದರಿಂದ ಸಮೃದ್ಧಿ ಪ್ರಪ್ತಿಯಾಗುತ್ತದೆ.
>> ಪುಷ್ಯ ನಕ್ಷತ್ರದ ದಿನದಂದು ಹೊಸ ವ್ಯವಹಾರ ಪ್ರಾರಂಭಿಸುವುದು ಸಾಕಷ್ಟು ಲಾಭ ತರಲಿದೆ ಎನ್ನಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ