ಸ್ಟೀಲ್ ಪಾತ್ರೆಯಲ್ಲಿ ಈ ಆಹಾರವನ್ನು ಎಂದಿಗೂ ಬೇಯಿಸಬಾರದು ! ಒಮ್ಮೆ ಚೆಕ್ ಮಾಡಿಕೊಳ್ಳಿ
Don`t Cook These Foods in Steel Utensils:ಕಬ್ಬಿಣ ಮತ್ತು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವಲ್ಲಿ ಅಪಾಯವಿದೆ ಎನ್ನುವುದು ಅನೇಕ ತಜ್ಞರ ಅಭಿಪ್ರಾಯ. ಹಾಗೆಯೇ ಸ್ಟೀಲ್ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ಕೂಡಾ ಅಪಾಯವೇ.
Don't Cook These Foods in Steel Utensils : ಪ್ರಾಚೀನ ಕಾಲದಲ್ಲಿ, ಮಣ್ಣಿನ ಪಾತ್ರೆಗಳನ್ನು ಆಹಾರವನ್ನು ಬೇಯಿಸಲು ಬಳಸಲಾಗುತ್ತಿತ್ತು. ಆದರೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಮಣ್ಣಿನ ಪಾತ್ರೆಗಳ ಜಾಗಕ್ಕೆ ಸ್ಟೀಲ್ ಪಾತ್ರೆಗಳು ಬಂದವು. ಇಂದು ಬಹುತೇಕರ ಮನೆಯಲ್ಲಿ ಸ್ಟೀಲ್ ಪಾತ್ರೆಗಳ ಬಳಕೆಯೇ ಜಾಸ್ತಿ. ಈ ಪಾತ್ರೆಗಳ ಬಳಕೆಯೂ ಸುಲಭ ಅದನ್ನು ಸ್ವಚ್ಚಗೊಳಿಸುವುದು ಕೂಡಾ ಸುಲಭ. ಕಬ್ಬಿಣ ಮತ್ತು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವಲ್ಲಿ ಅಪಾಯವಿದೆ ಎನ್ನುವುದು ಅನೇಕ ತಜ್ಞರ ಅಭಿಪ್ರಾಯ. ಹಾಗೆಯೇ ಸ್ಟೀಲ್ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ಕೂಡಾ ಅಪಾಯವೇ.
ಉಕ್ಕಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಅನಾನುಕೂಲಗಳು :
ಸ್ಟೀಲ್ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದರಿಂದ ಅದರ ಕಣಗಳು ಆಹಾರಕ್ಕೆ ಸೇರುತ್ತವೆ. ಸ್ಟೀಲ್ ಪಾತ್ರೆಗಳ ತಳವು ಬಹಳ ಬೇಗನೆ ತುಂಬಾ ಬಿಸಿಯಾಗುತ್ತದೆ. ಆದ್ದರಿಂದ ಕಡಿಮೆ ಉರಿಯಲ್ಲಿ ದೀರ್ಘಕಾಲ ಬೇಯಿಸಬೇಕಾದ ಆಹಾರವನ್ನು ಸ್ಟೀಲ್ ಪಾತ್ರೆಗಳಲ್ಲಿ ಬೇಯಿಸದೆ ಇರುವುದೇ ಒಳ್ಳೆಯದು.
ಇದನ್ನೂ ಓದಿ : ಕೂದಲು ದಟ್ಟವಾಗಿ ಬೆಳೆಯಲು ಈ ಆಹಾರಗಳನ್ನು ತಪ್ಪದೇ ಸೇವಿಸಿ...ಬದಲಾವಣೆ ನೋಡಿ!!
-ಉಕ್ಕಿನ ಪಾತ್ರೆಯನ್ನು ಅದರ ಸ್ಮೋಕ್ ಪಾಯಿಂಟ್ ಮೀರಿ ಬಿಸಿಮಾಡಿದರೆ, ಅದರಲ್ಲಿರುವ ಟ್ರೈಗ್ಲಿಸರೈಡ್‌ಗಳು ಒಡೆಯಲು ಪ್ರಾರಂಭಿಸುತ್ತವೆ. ಹೀಗಾದಾಗ ಅದು ಫ್ರೀ ಫ್ಯಾಟಿ ಆಸಿಡ್ ಆಗಿ ಬದಲಾಗುತ್ತದೆ. ಅವು ನೀರಿನಲ್ಲಿ ಕರಗುವುದಿಲ್ಲ. ಮಾತ್ರವಲ್ಲ ಇದನ್ನು ನಮ್ಮ ಹೊಟ್ಟೆಯು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಸ್ಟೀಲ್ ಪಾತ್ರೆಗಳಲ್ಲಿ ಈ ವಸ್ತುಗಳನ್ನು ಬೇಯಿಸಬೇಡಿ :
ನೀರು ಮತ್ತು ಉಪ್ಪನ್ನು ಕರಗಿಸಿ ತಯಾರಿಸಿದ ಸ್ಟೀಲ್ ಪಾತ್ರೆಗಳಲ್ಲಿ ಕೆಲವೊಂದು ವಸ್ತುಗಳನ್ನು ಬೇಯಿಸುವುದು ಸೂಕ್ತವಲ್ಲ. ಸಾಮಾನ್ಯವಾಗಿ ನಾವು ಸ್ಟೀಲ್ ಪ್ಯಾನ್‌ಗಳಲ್ಲಿ ನೂಡಲ್ಸ್, ಪಾಸ್ತಾ, ಮೆಕರೋನಿಗಳನ್ನು ತಯಾರಿಸುತ್ತೇವೆ. ಇದರ ಉಪ್ಪು ಮತ್ತು ಎಣ್ಣೆಯು ಪ್ಯಾನ್ ನ ತಳದಲ್ಲಿ ಸೇರಿಕೊಳ್ಳುತ್ತದೆ. ಇದು ಉಪ್ಪು ನೀರಿನ ಕಲೆಗಳು ಉಳಿಯುತ್ತವೆ. ಅಲ್ಲದೆ ಇದು ರಿಯಾಕ್ಟ್ ಮಾಡಲು ಆರಂಭಿಸುತ್ತದೆ.
ಇದನ್ನೂ ಓದಿ : ರಾತ್ರಿ ಮಲಗುವಾಗ ಈ ಕೆಲಸಗಳನ್ನು ಮಾಡಿ ಸಾಕು, ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ!
ಸ್ಟೀಲ್ ಪಾತ್ರೆಗಳನ್ನು ಓವನ್ ನಲ್ಲಿ ಇಡಬೇಡಿ :
ನಾವು ಅನೇಕ ಬಾರಿ ಸ್ಟೀಲ್ ಪಾತ್ರೆಗಳನ್ನು ಓವನ್ ನಲ್ಲಿ ಇಡುತ್ತೇವೆ. ಅದು ಹಾನಿಕಾರಕ ಮತ್ತು ಅಪಾಯಕಾರಿ. ಯಾವುದೇ ಲೋಹವು ವಿದ್ಯುತ್ ವಾಹಕವಾಗಿರುವುದರಿಂದ, ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ. ಇದು ನಮ್ಮ ಜೀವನಕ್ಕೆ ಸಂಚಕಾರವನ್ನು ಉಂಟು ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.