ಭಾನುವಾರ ಮಾಡುವ ಈ ಕೆಲಸಗಳಿಂದ ದಾರಿದ್ರ್ಯ ಕಾಡುತ್ತದೆಯಂತೆ ..!
ಭಾನುವಾರ ಕೂಡಾ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ. ಯಾಕೆಂದರೆ ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಬಡತನ ದಾರಿದ್ರ್ಯ ಕಾಡುತ್ತದೆ ಎನ್ನಲಾಗಿದೆ.
ಬೆಂಗಳೂರು : ಹಿಂದೂ ಧರ್ಮದಲ್ಲಿ, ಪ್ರತಿ ದಿನವನ್ನು ನಿರ್ದಿಷ್ಟ ದೇವರಿಗೆ ಮೀಸಲಿಡಲಾಗಿದೆ. ಸೋಮವಾರವನ್ನು ಭಗವಾನ್ ಶಿವನಿಗೆ (Lord Shiva), ಮಂಗಳವಾರವನ್ನು ಆಂಜನೇಯ, ಮತ್ತು ಬುಧವಾರ ಗಣಪತಿಗೆ ಅರ್ಪಿಸಲಾಗುತ್ತದೆ. ಅದೇ ರೀತಿ ಭಾನುವಾರದ ದಿನ ಸೂರ್ಯ ದೇವನನ್ನು ಪೂಜಿಸಲಾಗುತ್ತದೆ (Sun God). ಅದಕ್ಕಾಗಿಯೇ ಈ ದಿನಗಳಲ್ಲಿ ಈ ದೇವತೆಗಳಿಗೆ ಅಹಿತಕರವಾಗುವಂತಹ ಯಾವ ಕೆಲಸಗಳನ್ನು ಮಾಡಬಾರದು ಎನ್ನಲಾಗುತ್ತದೆ. ಹಾಗೆಯೇ ಭಾನುವಾರ ಕೂಡಾ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ. ಯಾಕೆಂದರೆ ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಬಡತನ ದಾರಿದ್ರ್ಯ ಕಾಡುತ್ತದೆ ಎನ್ನಲಾಗಿದೆ.
ಭಾನುವಾರ ಈ ಕೆಲಸಗಳನ್ನು ಮಾಡಬಾರದು :
1. ಈ ದಿನದಂದು ನೀಲಿ, ಕಪ್ಪು ಮತ್ತು ಬೂದು ಬಣ್ಣಗಳಂತಹ ಗಾಢ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ (Sun Remedies).
2. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಸೂರ್ಯಾಸ್ತದ ನಂತರ ಉಪ್ಪು ಸೇವನೆ ತಪ್ಪು ಎಂದು ಹೇಳಲಾಗುತ್ತದೆ. ಇದರಿಂದ ಮನೆಯ ಸುಖ-ಸಮೃದ್ಧಿ ಕಡಿಮೆಯಾಗುವ ಎಚ್ಚರಿಕೆ ಇದೆ.
ಇದನ್ನೂ ಓದಿ : ಇಂದು ಉದಯಿಸಲಿರುವ ಗುರು ಈ ರಾಶಿಯವರಿಗೆ ನೀಡಲಿದ್ದಾನೆ ಸಂಕಷ್ಟ
3. ನಂಬಿಕೆಯ ಪ್ರಕಾರ, ಭಾನುವಾರ ತುಳಸಿಗೆ (Tulsi Plant) ನೀರು ಅರ್ಪಿಸಬಾರದು. . ಪುರಾಣಗಳಲ್ಲಿ, ಈ ದಿನವನ್ನು ತುಳಸಿ ಮಾತೆಗೆ ಉಪವಾಸವಿರುತ್ತದೆ ಎನ್ನುತ್ತದೆ ಶಾಸ್ತ್ರ. ಹಾಗಾಗಿ ಭಾನುವಾರ ತುಳಸಿಗೆ ನೀರು ಅರ್ಪಿಸಬಾರದು.
4. ರವಿವಾರ ಕೂದಲು ಕತ್ತರಿಸುವುದು ಸಹ ತೊಂದರೆಯನ್ನು ಉಂಟು ಮಾಡಬಹುದು. ಭಾನುವಾರ ಕೂದಲಿಗೆ ಕತ್ತರಿ ಹಾಕುವುದರಿಂದ (Hair Cut) ನಾವು ಮಾಡಲು ಉದ್ದೇಶಿಸಿರುವ ಕೆಲಸ ಕಾರ್ಯಗಳಿಗೆ ಅಡೆತಡೆ ಎದುರಾಗುತ್ತದೆಯಂತೆ.
5. ಭಾನುವಾರದಂದು ವ್ಯಕ್ತಿಯು ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : Astrology: ಶನಿಯ ಸಾಡೇಸಾತಿಯಿಂದ ಮುಕ್ತಿ ಪಡೆಯಬೇಕೇ? ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರು ಈ ಕೆಲಸ ಮಾಡಿ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.