Baldness Remedy: ಈ ಎಣ್ಣೆಯಿಂದ ಮಸಾಜ್ ಮಾಡಿ, ಕೇವಲ 6 ದಿನಗಳಲ್ಲಿ ಬೋಳು ತಲೆಯಲ್ಲೂ ಕೂದಲು ಹುಟ್ಟಿಕೊಳ್ಳುತ್ತವೆ!
Bald Head Home Remedies: ವರ್ಷಗಳಷ್ಟು ಹಳೆಯದಾದ ಈ ಭಾರತೀಯ ಔಷಧದ ಪರಿಣಾಮವು ಹೊಸ ಸಂಶೋಧನೆಯಲ್ಲಿ ಬಹಿರಂಗವಾಗಿದೆ (Lifestyle News In Kannada)
ಬೆಂಗಳೂರು: ಶ್ರೀಗಂಧದ ಎಣ್ಣೆಯನ್ನು ಹಲವು ವರ್ಷಗಳಿಂದ ಔಷಧಿಯಾಗಿ ಬಳಸಲಾಗುತ್ತಿದೆ. ಈ ಭಾರತೀಯ ಆರೋಗ್ಯದ ಖಣಿ ವರ್ಷಗಳಲ್ಲಿ ವಿವಿಧ ರೀತಿಯಲ್ಲಿ ತನ್ನ ಅದ್ಭುತ ಚಮತ್ಕಾರಗಳನ್ನು ತೋರಿಸುತ್ತಿದೆ. ಇದೀಗ ವೈದ್ಯಕೀಯ ಲೋಕದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೂಡ ಶ್ರೀಗಂಧವು ತುಂಬಾ ಉಪಯುಕ್ತವಾಗಿದೆ ಎಂದು ಒಪ್ಪಿಕೊಳ್ಳುತ್ತಿವೆ. ಇದರ ಎಣ್ಣೆಯನ್ನು ಆರು ದಿನಗಳವರೆಗೆ ತಲೆಗೆ ಹಚ್ಚಿ ಮಸಾಜ್ ಮಾಡಿದರೆ, ಅದು ತಕ್ಷಣವೇ ಫಲಿತಾಂಶವನ್ನು ತೋರಿಸಲು ಪ್ರಾರಂಭಿಸುತ್ತದೆ. (Lifestyle News In Kannada)
ಸಂಶೋಧನೆ ಏನು ಹೇಳಿದೆ?
ಸಂಶೋಧಕರ ಪ್ರಕಾರ, ಶ್ರೀಗಂಧದ ಎಣ್ಣೆಯ ಪರಿಮಳವು ಕೂದಲಿನ ಬೇರುಗಳಲ್ಲಿ ಇರುವ 'OR2AT4' ಹೆಸರಿನ 'ವಾಸನೆ ಗ್ರಾಹಕ'ವನ್ನು ಸಕ್ರಿಯಗೊಳಿಸುತ್ತದೆ. ಈ ಗ್ರಾಹಕಗಳು ಹೊಸ ಕೂದಲು ಬೆಳೆಯುವ ಸಾಮರ್ಥ್ಯವಿರುವ 'ಕೆರಾಟಿನ್' ಪ್ರೊಟೀನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಾಗಿ, ಬೋಳು ತಲೆಯ ಮೇಲೆ ಆರು ದಿನಗಳಲ್ಲಿ ಹೊಸ ಕೂದಲು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೊಸ ಅಧ್ಯಯನವು ಬೋಳು ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿ ಔಷಧಗಳನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಹುಟ್ಟುಹಾಕುತ್ತದೆ.
ಸುವಾಸನೆಯು ಚಮತ್ಕಾರ ಮಾಡುತ್ತದೆ
ಪ್ರಮುಖ ಸಂಶೋಧಕರಾದ ಡೇವಿಡ್ ರೀಚ್ ಅವರು, ಮಾನವರು ಮತ್ತು ಪ್ರಾಣಿಗಳು ಮೂಗಿನ ಮೂಲಕ ಮಾತ್ರ ವಾಸನೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಆಯ್ದ ಸುಗಂಧಗಳಲ್ಲಿ ಇರುವ ರಾಸಾಯನಿಕಗಳಿಗೆ ಒಡ್ಡಿಕೊಂಡಾಗ ಅವರ ಕೂದಲಿನ ಬೇರುಗಳು, ಚರ್ಮ, ವೀರ್ಯ ಮತ್ತು ಕರುಳುಗಳು ಸಹ ಸಕ್ರಿಯವಾಗುತ್ತವೆ. ಕೆಲವು ಅಧ್ಯಯನಗಳಲ್ಲಿ, ಶ್ರೀಗಂಧದ ಎಣ್ಣೆಯು ಚರ್ಮದಲ್ಲಿ ಇರುವ ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಸಾರಿವೆ, ಇದು ಗಾಯಗಳು ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.
ಈ ರೀತಿಯ ಅಧ್ಯಯನವನ್ನು ನಡೆಸಲಾಗಿದೆ
ರೀಚ್ ಮತ್ತು ಅವರ ಸಹೋದ್ಯೋಗಿಗಳು 38 ರಿಂದ 69 ವರ್ಷ ವಯಸ್ಸಿನ ಹತ್ತಾರು ಪುರುಷರಿಂದ ನೆತ್ತಿಯ ಅಂಗಾಂಶವನ್ನು ತೆಗೆದುಕೊಂಡಿದ್ದಾರೆ. ಆರು ದಿನಗಳ ಕಾಲ ಅವುಗಳನ್ನು ಶ್ರೀಗಂಧದ ಪರಿಮಳಕ್ಕೆ ತೆರೆದಿಟ್ಟಿದ್ದಾರೆ. ಈ ಕಾರಣದಿಂದಾಗಿ, ಅಂಗಾಂಶಗಳಲ್ಲಿ 'ಕೆರಾಟಿನ್' ಪ್ರೋಟೀನ್ ಮಟ್ಟವು ಹೆಚ್ಚಾಗತೊಡಗಿದೆ. ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಅನೇಕ ಜೀವಸತ್ವಗಳು ಮತ್ತು ಹಾರ್ಮೋನುಗಳು ಸಹ ಸಕ್ರೇಯವಾದವು ಎನ್ನಲಾಗಿದೆ. ಅಧ್ಯಯನದ ಫಲಿತಾಂಶಗಳನ್ನು ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಕೆರಾಟಿನ್ ಅನ್ನು ರಕ್ಷಿಸುತ್ತದೆ
ಶ್ರೀಗಂಧದ ಎಣ್ಣೆಯು 'ಅಪೊಪ್ಟೋಸಿಸ್' ಪ್ರಕ್ರಿಯೆಯನ್ನು ಪ್ರತಿಬಂಧಿಸುತ್ತದೆ ಎಂದು ಅಧ್ಯಯನದಲ್ಲಿ ಗಮನಿಸಲಾಗಿದೆ. ಇದು ಕೆರಾಟಿನ್ ಕೋಶಗಳನ್ನು ಆತ್ಮಹತ್ಯೆಗೆ ಪ್ರಚೋದಿಸುವ ಜೀನ್‌ಗಳ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ.
ಇದರ ಪ್ರಯೋಜನಗಳು
ಕೂದಲಿನ ಬೇರುಗಳಲ್ಲಿ ಇರುವ ‘ಸ್ಮೆಲ್ ರಿಸೆಪ್ಟರ್’ಗಳು ಕ್ರಿಯಾಶೀಲವಾಗುತ್ತವೆ.
'ಕೆರಾಟಿನ್' ಪ್ರೊಟೀನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹೊಸ ಕೂದಲು ಉತ್ಪತ್ತಿಯಾಗುತ್ತದೆ.
ಪರಿಣಾಮವು 6 ದಿನಗಳಲ್ಲಿ ಗೋಚರಿಸುತ್ತದೆ, ಬೋಳು ಚಿಕಿತ್ಸೆಗಾಗಿ ಭರವಸೆಯನ್ನು ಇದು ಹುಟ್ಟು ಹಾಕುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ