Banana leaf Halwa Recipe: ನೀವು ಬಾಳೆ ಹಣ್ಣಿನ ಹಲ್ವಾ ತಿಂದಿರಬಹುದು. ಟೇಸ್ಟಿಯ ಜೊತೆ ಆರೋಗ್ಯಕ್ಕೆ ಈ ಸ್ವೀಟ್ ತುಂಬಾ ಒಳ್ಳೆಯದು. ಆದರೆ ಎಂದಾದರೂ ಬಾಳೆ ಎಲೆಯಿಂದ ತಯಾರಿಸಿದ ಹಲ್ವಾ ಸವಿದಿದ್ದೀರಾ? ಇಲ್ಲವಾದ್ರೆ ಈ ವರದಿ ಓದಿ:


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಗುತ್ತಿಗೆದಾರರ ಬಿಲ್ ಪಾಸು ಮಾಡಲು ತೊಂದರೆ… ದೂರು ನೀಡಿದರೆ ತನಿಖೆ- ಮುಖ್ಯಮಂತ್ರಿ ಸಿದ್ದರಾಮಯ್ಯ


ಅಗತ್ಯವಿರುವ ವಸ್ತುಗಳು


  • ಬಾಳೆ ಎಲೆ - 1

  • ತುಪ್ಪ

  • 4 ಟೀಸ್ಪೂನ್ ಕಾರ್ನ್ ಹಿಟ್ಟು

  • 1.25 ಕಪ್ ಸಕ್ಕರೆ

  • 1/2 ಟೀಚಮಚ ಏಲಕ್ಕಿ ಪುಡಿ


ಪಾಕವಿಧಾನ


ತಾಜಾವಾಗಿರುವ 1 ದೊಡ್ಡ ಬಾಳೆ ಎಲೆಯನ್ನು ತೆಗೆದುಕೊಳ್ಳಿ. ಅದರ ಮೇಲಿರುವ ನಾರುಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಮಿಕ್ಸಿಂಗ್ ಜಾರ್‌’ಗೆ 2 ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ನಾರಿನ ಭಾಗವನ್ನು ಬಟ್ಟೆಯ ಸಹಾಯದಿಂದ ಅಥವಾ ಜರಡಿಯ ಸಹಾಯದಿಂದ ಚೆನ್ನಾಗಿ ಸೋಸಿಕೊಳ್ಳಿ, ಅದರಿಂದ ಗರಿಷ್ಠ ನೀರು ಹೊರಬರುವವರೆಗೆ ಚೆನ್ನಾಗಿ ಸ್ಕ್ವೀಝ್ ಮಾಡಿ.


ಈಗ ಬಾಳೆ ಎಲೆಯ ರಸಕ್ಕೆ 4 ಚಮಚ ಕಾರ್ನ್ ಫ್ಲೋರ್, 1/2 ಚಮಚ ಏಲಕ್ಕಿ ಪುಡಿ ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ 1.25 ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯಲ್ಲಿ ಈ ಮಿಶ್ರಣಕ್ಕೆ 2 ಚಮಚ ತುಪ್ಪವನ್ನು ಸೇರಿಸಿ ಬೆರೆಸಿ. ಇದು ದಪ್ಪವಾಗಲು ಪ್ರಾರಂಭವಾಗುತ್ತದೆ. ಉಂಡೆಗಳಿಲ್ಲದೆ ನಿರಂತರವಾಗಿ ಮಿಕ್ಸ್ ಮಾಡಿ. ನಡುವೆ ತುಪ್ಪ ಸೇರಿಸಿ (2 ಚಮಚ) ಒಟ್ಟು 1/4 ಕಪ್ ತುಪ್ಪ ಬೇಕಾಗುತ್ತದೆ.


ನಂತರ ಹುರಿದ ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಗಟ್ಟಿಯಾದ ಬಳಿಕ, ಪಕ್ಕದಲ್ಲೇ ತುಪ್ಪ ಸವರಿ ಇಟ್ಟಿದ್ದ ಬಟ್ಟಲಿನಂತಹ ಪಾತ್ರೆಗೆ ಹಾಕಿ.  ತಣ್ಣಗಾಗಲು ಬಿಡಿ. ನಂತರ ಅದನ್ನು ತುಂಡುಗಳಾಗಿ ಕತ್ತರಿಸಿ. ಈಗ ರುಚಿಕರವಾದ ಬಾಳೆ ಎಲೆ ಹಲ್ವಾ ಸವಿಯಬಹುದು.


ಇದನ್ನೂ ಓದಿ: Shubman Gill: ಶುಭ್ಮನ್ ಗಿಲ್ ಸತತ ವೈಫಲ್ಯ! ಈತನಿಗೆ ಸ್ಥಾನ ನೀಡುವ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.