ನವದೆಹಲಿ: ಬಾಳೆಹಣ್ಣು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಬಾಳೆಹಣ್ಣನ್ನು ಇಷ್ಟಪಟ್ಟು ಸೇವಿಸುತ್ತಾರೆ. ಹಣ್ಣುಗಳ ಬಗಗೆ ಯಾರಾದರೂ ಹೇಳಿದಾಗ ಬಹುತೇಕರಿಗೆ ಥಟ್ ಅಂತಾ ನೆನಪಿಗೆ ಬರುವ ಮೊದಲ ಹೆಸರೇ ಬಾಳೆಹಣ್ಣು. ಬಾಳೆಹಣ್ಣು ಎಲ್ಲಾ ವಯೋಮಾನದವರಿಗೂ ತುಂಬಾ ಇಷ್ಟ. ಇದು ತುಂಬಾ ಟೇಸ್ಟಿ ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಕೆಲವರಿಗೆ ಬಾಳೆಹಣ್ಣು ಶೇಕ್ ಮಾಡಿ ಕುಡಿಯುವುದೂ ಇಷ್ಟ. ಜಿಮ್‌ಗೆ ಹೋಗುವವರು ಬನಾನಾ ಶೇಕ್ ಅನ್ನು ಹೆಚ್ಚಾಗಿ ಕುಡಿಯುತ್ತಾರೆ. ಬಾಳೆಹಣ್ಣಿನ ಅತಿಯಾದ ಸೇವನೆಯು ನಿಮಗೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಇದನ್ನು ಕೇಳಿ ನಿಮಗೆ ವಿಚಿತ್ರ ಅನಿಸಿದರೆ ಈ ಸುದ್ದಿಯನ್ನು ಓದಲೇಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹರ್ಬಲ್‌ ಟೀ ಕುಡಿಯೋದು 100 ಸಿಗರೇಟ್‌ ಸೇದಿದಕ್ಕೆ ಸಮವಂತೆ!: ಈ ಆಘಾತಕಾರಿ ವರದಿ ನೀವು ಓದಲೇಬೇಕು


ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ?


1. ನೀವು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಕಡಿಮೆ ಬಾಳೆಹಣ್ಣನ್ನು ತಿನ್ನಬೇಕು. ವಾಸ್ತವವಾಗಿ ಬಾಳೆಹಣ್ಣುಗಳು ಟೈರಮೈನ್ ಎಂಬ ವಸ್ತುವನ್ನು ಹೊಂದಿರುತ್ತವೆ, ಇದು ಮೈಗ್ರೇನ್ ನೋವನ್ನು ಹೆಚ್ಚಿಸುತ್ತದೆ. ಕೆಲವರಿಗೆ ಬಾಳೆಹಣ್ಣಿನಿಂದ ಅಲರ್ಜಿ ಇರಬಹುದು. ಇಂತಹ ಜನರು ಇದರ ಸೇವನೆಯಿಂದ ದೂರವಿರಬೇಕು.


2. ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದರ ಅತಿಯಾದ ಸೇವನೆಯು ರಕ್ತದಲ್ಲಿ ಅಧಿಕ ಪೊಟ್ಯಾಸಿಯಮ್‍ಗೆ ಕಾರಣವಾಗಬಹುದು, ಇದರಿಂದಾಗಿ ಹೈಪರ್ಕೆಲೆಮಿಯಾ ಸಮಸ್ಯೆಯುಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಬಾಳೆಹಣ್ಣಿನಲ್ಲಿ ಪಿಷ್ಟದ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಆದ್ದರಿಂದ ಬಾಳೆಹಣ್ಣನ್ನು ಸೇವಿಸುವುದರಿಂದ ಹಲ್ಲಿನ ಸಮಸ್ಯೆಗಳು ಸಹ ಉಂಟಾಗಬಹುದು.


3. ಬಾಳೆಹಣ್ಣಿನ ಅತಿಯಾದ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇದನ್ನು ಸೇವಿಸಬಾರದು. ಬಾಳೆಹಣ್ಣು ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ನೀವು ಬಾಳೆಹಣ್ಣು ತಿನ್ನುತ್ತಿದ್ದರೆ ಫಿಟ್ ಆಗಿರಲು ವ್ಯಾಯಾಮ ಮಾಡಬೇಕು.


4. ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣವೂ ಹೆಚ್ಚಿರುವುದರಿಂದ ಮಧುಮೇಹ ರೋಗಿಗಳು ಇದರಿಂದ ದೂರವಿರಬೇಕು. ದೊಡ್ಡ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ, ಇದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.


ಇದನ್ನೂ ಓದಿ: Healthy Teeth: ಆರೋಗ್ಯಕರ ಹಲ್ಲುಗಳಿಗಾಗಿ ನಿಮ್ಮ ಡಯಟ್ನಲ್ಲಿರಲಿ ಈ 2 ಆಹಾರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.