ನವದೆಹಲಿ : Bathing Tips - ಯಾವುದೇ ವಿಶೇಷ ಪರ್ವ, ವೃತ-ಹಬ್ಬಗಳು ಅಥವಾ ಶುಭ ತಿಥಿಗಳು (Auspicious Tithi)ಬಂದರೆ ಮೊದಲು ಬೆಳಗ್ಗೆ ಎದ್ದು ಸ್ನಾನ ಮಾಡುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಹಾಗೆ ನೋಡುವುದಾದರೆ, ಹಿಂದೂ ಧರ್ಮ-ಶಾಸ್ತ್ರಗಳಲ್ಲಿ (Hindu Religion) ತನು-ಮನದ ಶುದ್ಧತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಿರುವಾಗ ವಿಶೇಷ ಸಂದರ್ಭಗಳಲ್ಲಿ ಪವಿತ್ರ ನದಿಗಳಲ್ಲಿ  (Holy River) ಸ್ನಾನ ಮಾಡುವ ವಾಡಿಕೆ ಇದೆ. ಶರೀರದ ಶುದ್ಧತೆ ವ್ಯಕ್ತಿಯನ್ನು ಹಲವು ರೋಗಗಳಿಂದ ಕಾಪಾಡುತ್ತದೆ. ಮನಸ್ಸಿನ ಶುದ್ಧತೆ ಮನುಷ್ಯನಿಗೆ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಆದರೆ, ಇಂದಿಗೂ ಕೂಡ ಕೆಲ ಜನರು ದಿನನಿತ್ಯ ಸ್ನಾನ  (Bath) ಮಾಡುವುದಿಲ್ಲ ಅಥವಾ ಸ್ನಾನ ಮಾಡುವಲ್ಲಿ ನಿರಂತರತೆಯನ್ನು ಕಾಯುವುದಿಲ್ಲ.


COMMERCIAL BREAK
SCROLL TO CONTINUE READING

ಈ ದಿನಗಳಲ್ಲಿ ಸ್ನಾನ ಮಾಡಲು ಮರೆಯಬೇಡಿ
ವಿವಿಧ ಕಾರಣಗಳಿಂದಾಗಿ ಚಳಿಗಾಲದ ದಿನಗಳಲ್ಲಿ ಅಥವಾ ಉಳಿದ ದಿನಗಳಲ್ಲಿ ಸ್ನಾನ ಮಾಡುವುದನ್ನು ತಪ್ಪಿಸುವವರಿಗೆ ಧರ್ಮಗ್ರಂಥಗಳಲ್ಲಿ ಕೆಲ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಒಬ್ಬ ವ್ಯಕ್ತಿಯು ನಿರ್ದಿಷ್ಟ ದಿನಾಂಕಗಳಲ್ಲಿ ಸ್ನಾನ ಮಾಡದಿದ್ದರೆ, ಅದು ಪಾಪಕ್ಕೆ ಕಾರಣ ಎನ್ನಲಾಗಿದೆ  ಇದರ ಹೊರತಾಗಿ, ವ್ಯಕ್ತಿಗೆ ದೇವಾಧಿ-ದೇವತೆಗಳ (God-Goddess) ಆಶೀರ್ವಾದ ಲಭಿಸುವುದಿಲ್ಲ ಮತ್ತು ಸಂಪತ್ತು ಮತ್ತು ಸಂತೋಷವು ಅವನ ಜೀವನದಿಂದ ದೂರ ಹೋಗುತ್ತದೆ.


ಹುಣ್ಣಿಮೆ
ಹಿಂದೂ ಧರ್ಮದಲ್ಲಿ ಎಲ್ಲಾ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಿಗೆ (Purnima-Amavasya) ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ದಿನಗಳಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಅಥವಾ ಸ್ನಾನದ ನೀರಿನಲ್ಲಿ ಪವಿತ್ರ ನದಿಗಳ ನೀರನ್ನು ಬೆರೆಸಿ ಸ್ನಾನ ಮಾಡಲು ಸೂಚಿಸಲಾಗುತ್ತದೆ. ಹುಣ್ಣಿಮೆಯ ದಿನ ಒಂದು ವೇಳೆ ವ್ಯಕ್ತಿ ಸ್ನಾನ ಮಾಡದೆ ಹೋದರೆ, ದೇವಿ ಲಕುಮಿ ಮುನಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ಏಕೆಂದರೆ ಆ ದಿನ ಶ್ರೀವಿಷ್ಣುವನ್ನು ಆರಾಧಿಸಲಾಗುತ್ತದೆ ಹಾಗೂ ಶ್ರೀವಿಷ್ಣು ಲಕ್ಷ್ಮಿದೇವಿಯ ಪತಿಯಾಗಿದ್ದಾರೆ. ಹೀಗಿರುವಾಗ ಜೀವನದಲ್ಲಿ ಒಂದು ವೇಳೆ ನಿಮ್ಮ ಮೇಲೆಯೂ ಕೂಡ ನಾರಾಯಣ ಹಾಗೂ ದೇವಿ ಲಕ್ಷ್ಮಿಯ ಕೃಪೆ ಇರಬೇಕು ಎಂದಾದಲ್ಲಿ ಹುಣ್ಣಿಮೆಯ ದಿನ ಸ್ನಾನ ಮಾಡುವುದನ್ನು ತಪ್ಪಿಸಬೇಡಿ.


ಅಮಾವಾಸ್ಯೆ
ಈ ದಿನ ಪಿತೃಗಳ ಆಶೀರ್ವಾದ ಪಡೆಯಲು ಪೂಜೆ ಸಲ್ಲಿಸಲಾಗುತ್ತದೆ. ಅಮಾವಾಸ್ಯೆಯ ದಿನ ಸ್ನಾನ ಮಾಡದೆ ಹೋದಲ್ಲಿ ಪೂರ್ವಜರು ಮುನಿಸಿಕೊಳ್ಳುತ್ತಾರೆ ಹಾಗೂ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳು ಎದುರಾಗುತ್ತವೆ. ವೃತ್ತಿ ಜೀವನದಲ್ಲಿ ಯಶಸ್ಸು, ಆರೋಗ್ಯವಂತ ಶರೀರ ಹಾಗೂ ಆರ್ಥಿಕ ಸಂಪನ್ನತೆಗಾಗಿ ಪೂರ್ವಜರ ಕೃಪೆ ತುಂಬಾ ಅವಶ್ಯಕವಾಗಿದೆ.


ಇದನ್ನೂ ಓದಿ-Saturday Tips: ಶನಿವಾರದಂದು ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗುತ್ತೆ


ಇದಲ್ಲದೆ ಪ್ರತಿ ತಿಂಗಳಲ್ಲಿ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷದ ಚತುರ್ಥಿ, ಏಕಾದಶಿ, ತ್ರಯೋದಶಿ ಹಾಗೂ ಚತುರ್ದಶಿ ತಿಥಿಗಳನ್ನು ಕೂಡ ತುಂಬಾ ಪವಿತ್ರ ಎಂದು ಭಾವಿಸಲಾಗಿದೆ. ಈ ತಿಥಿಗಳಲ್ಲಿಯೂ ಕೂಡ ವ್ಯಕ್ತಿಗಳು ಸ್ನಾನ ಮಾಡದೆ ಇರಬಾರದು. ಅನಾರೋಗ್ಯದ ಕಾರಣ ಒಂದು ವೇಳೆ ಸ್ನಾನ ಮಾಡದಿದ್ದರೂ ಕೂಡ ಬಿಸಿ ನೀರಿನಿಂದ ಕೈಕಾಲು ತೊಳೆದು ಶುಭ್ರ ಬಟ್ಟೆಗಳನ್ನು ಧರಿಸಬೇಕು.


ಇದನ್ನೂ ಓದಿ-Cracking Knuckles: ನಿಮಗೂ ಬೆರಳು ಮುರಿಯುವ ಅಭ್ಯಾಸವಿದೆಯಾ? ಮೊದಲು ಈ ವರದಿ ಓದಿ


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)


ಇದನ್ನೂ ಓದಿ- ತಾಮ್ರದ ಉಂಗುರ ಹಾಕುವುದರಿಂದ ನಿವಾರಣೆಯಾಗಲಿದೆ ಈ ದೋಷಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ