Bathing with Salt Water: ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ
Bathing with Salt Water Benefit: ಸಾಮಾನ್ಯವಾಗಿ ನಾವು ಹಲ್ಲು ನೋವಿನಿಂದ ತಕ್ಷಣದ ಪರಿಹಾರ ಪಡೆಯಲು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
ಉಪ್ಪು ನೀರಿನಿಂದ ಸ್ನಾನ ಮಾಡುವುದರ ಪ್ರಯೋಜನಗಳು: ಇತ್ತೀಚಿನ ದಿನಗಳಲ್ಲಿ ಒತ್ತಡಭರಿತ ಜೀವನಶೈಲಿಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಮಸ್ಯೆಗಳಿಗೆ ಮನೆಮದ್ದುಗಳು ಸಹ ಪರಿಹಾರವನ್ನು ನೀಡಬಹುದು. ಅಂತಹ ಒಂದು ಪರಿಹಾರವೆಂದರೆ ಉಪ್ಪು ನೀರಿನಿಂದ ಸ್ನಾನ ಮಾಡುವುದು. ಹೌದು, ನೀರಿನಲ್ಲಿ ಉಪ್ಪು ಬೆರೆಸಿ ಅದರಿಂದ ಸ್ನಾನ ಮಾಡುವುದರಿಂದ ಹಲವು ಪ್ರಯೋಜನಗಳು ಲಭ್ಯವಿದೆ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಕೀಲು ನೋವು ನಿವಾರಣೆಯಾಗುವುದರ ಜೊತೆಗೆ ಒತ್ತಡವೂ ಕಡಿಮೆ ಆಗುತ್ತದೆ. ಇದರ ಹೊರತಾಗಿ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ....
ಸೋಂಕಿನಿಂದ ರಕ್ಷಣೆ:
ಕರೋನಾವೈರಸ್ ಆರಂಭವಾದಾಗಿನಿಂದ ಎಲ್ಲರಲ್ಲೂ ಸೋಂಕಿನ ಬಗ್ಗೆ ಹೆಚ್ಚು ಆತಂಕ ಇದೆ. ಆದರೆ ಯಾವುದೇ ರೀತಿಯ ಸೋಂಕನ್ನು ತಡೆಗಟ್ಟಲು ಉಪ್ಪು ನೀರು ತುಂಬಾ ಉಪಯುಕ್ತವಾಗಿದೆ. ವಾಸ್ತವವಾಗಿ, ಉಪ್ಪಿನಲ್ಲಿರುವ ಖನಿಜಗಳು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತವೆ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರಂಧ್ರಗಳನ್ನು ತೆರೆಯುತ್ತದೆ ಮತ್ತು ದೇಹದಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೊಡವೆ ಸಮಸ್ಯೆಗೆ ಪರಿಹಾರ:
ಉಪ್ಪು ನೀರು ಮೊಡವೆಗಳನ್ನು ತೊಡೆದುಹಾಕಲು ಕೂಡ ತುಂಬಾ ಪ್ರಯೋಜನಕಾರಿ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಕೊಳಕು ಸುಲಭವಾಗಿ ಹೊರಬರುತ್ತದೆ. ಈ ರೀತಿಯಾಗಿ, ದೇಹದ ನಿರ್ವಿಶೀಕರಣದಿಂದಾಗಿ, ಮುಖದ ಕಲೆಗಳು ಮತ್ತು ಮೊಡವೆಗಳು ಸಹ ಕಡಿಮೆಯಾಗುತ್ತವೆ. ಇದರೊಂದಿಗೆ, ಈ ನೀರು ತ್ವಚೆಯನ್ನು ಹೈಡ್ರೇಟ್ ಮಾಡಲು ಸಹ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ- Health Tips: ಸ್ನಾನ ಮಾಡುವಾಗ ಈ 5 ತಪ್ಪುಗಳನ್ನು ಮಾಡಬೇಡಿ
ಒತ್ತಡ ಕಡಿಮೆ ಆಗುತ್ತೆ:
ನೀವು ಯಾವುದೇ ವಿಷಯದ ಬಗ್ಗೆ ಹೆಚ್ಚು ಒತ್ತಡವನ್ನು ಅನುಭವಿಸುತ್ತಿದ್ದರೆ, ಅಂತಹ ಸಂದರ್ಭದಲ್ಲಿ ತಪ್ಪದೇ ಉಪ್ಪು ನೀರಿನಿಂದ ಸ್ನಾನ ಮಾಡಿ. ಇದರಿಂದ ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ. ಉಪ್ಪು ನೀರಿನಲ್ಲಿ ಇರುವ ಖನಿಜಗಳು ದೇಹದಲ್ಲಿ ಹೀರಲ್ಪಡುತ್ತವೆ. ಸೋಡಿಯಂ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ದೇಹವು ಡಿಟಾಕ್ಸ್ ಮಾಡಿದಾಗ ದೇಹದ ಒತ್ತಡವು ಬಿಡುಗಡೆಯಾಗುತ್ತದೆ, ಇದು ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಕೀಲು ನೋವಿನಿಂದ ಮುಕ್ತಿ:
ಉಪ್ಪು ನೀರು ಕೀಲು ನೋವನ್ನು ಸಹ ಕಡಿಮೆ ಮಾಡುತ್ತದೆ. ಸ್ನಾನ ಮಾಡುವಾಗ ನೀರಿಗೆ ಚಿಟಿಕೆ ಉಪ್ಪು ಹಾಕಿದರೆ ಮೂಳೆಗಳಲ್ಲಿನ ಸಣ್ಣಪುಟ್ಟ ನೋವುಗಳು ಮಾಯವಾಗುತ್ತವೆ.
ಇದನ್ನೂ ಓದಿ- Bathing Tips: ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು
ಪಾದದ ನೋವಿಗೆ ರಿಲೀಫ್ ನೀಡುತ್ತೆ ಉಪ್ಪು ನೀರು:
ಇದಲ್ಲದೆ, ನಿಮ್ಮ ಪಾದಗಳಲ್ಲಿ ಸಾಕಷ್ಟು ನೋವು ಇದ್ದರೆ, ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ತೊಳೆಯುವುದು ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಬೇಕಿದ್ದರೆ ನೀವು ನಡೆಯುವಷ್ಟು ಬಿಸಿ ನೀರಿನಲ್ಲಿ ಉಪ್ಪು ಬೆರೆಸಿ ಸ್ವಲ್ಪಹೊತ್ತು ಕಾಲಿಟ್ಟು ಕೂರುವುದು ಕೂಡ ನಿಮಗೆ ಪರಿಹಾರವನ್ನು ನೀಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.