Bay Leaves Benefits: ನಿಮಗೂ ಕೂಡ ಸೊಂಪಾದ ಉದ್ದನೆಯ ಕೂದಲನ್ನು ಪಡೆಯುವ ಆಸೆಯೇ? ಇದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಒಂದು ಮಸಾಲೆ ಎಲೆ ನಿಮ್ಮ ಕನಸನ್ನು ನನಸಾಗಿಸಬಲ್ಲದು. ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲ್ಪಡುವ ಬೇ ಎಲೆಗಳು (ಮಸಾಲೆ ಎಲೆ) ಉದ್ದನೆಯ, ಕಾಂತಿಯುತವಾದ ಕೂದಲನ್ನು ಪಡೆಯಲು ಸಹಕಾರಿ ಆಗಿವೆ. ಇದಕ್ಕಾಗಿ ಬೇ ಎಲೆಗಳನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಉದ್ದವಾದ, ಕಾಂತಿಯುತ ಕೇಶರಾಶಿಗಾಗಿ ಸಹಾಯಕ ಬೇ ಎಲೆಗಳು:
* ಬೇ ಎಲೆಗಳೊಂದಿಗೆ ಲವಂಗ: 

ಉದ್ದವಾದ ಕಾಂತಿಯುತವಾದ ಕೇಶರಾಶಿ ನಿಮದಾಗಿಸಲು ನಾಲ್ಕೈದು ಬೇ ಎಲೆಗಳೊಂದಿಗೆ ಒಂದೆರಡು ಲವಂಗವನ್ನು ಪುಡಿ ಮಾಡಿ ಹಾಗಿ. ಇದಕ್ಕೆ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬೆರೆಸಿ ನಿಮ್ಮ ಹೇರ್ ವಾಶ್ ಮಾಡುವ ಒಂದು ಗಂಟೆ ಮೊದಲು ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಾಕಿ ಡ್ರೈ ಆಗಲು ಬಿಡಿ. ನಂತರ ನೀವು ಬಳಸುವ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಸೊಂಪಾದ ಉದ್ದನೆಯ ಕೂದಲು ನಿಮ್ಮದಾಗುತ್ತದೆ.


ಇದನ್ನೂ ಓದಿ- Hair loss treatment: ಪ್ರತಿದಿನ ಆಹಾರದಲ್ಲಿ ಬಳಸುವ ಈ ಪದಾರ್ಥವೇ ಬೋಳು ತಲೆಗೆ ಕಾರಣವಾಗುತ್ತಿದೆ!


* ಮೊಸರಿನೊಂದಿಗೆ ಬೇ ಎಲೆಗಳನ್ನು ಬಳಸಿ:
ಮೊಸರಿನೊಂದಿಗೆ ಬೇ ಎಲೆಗಳನ್ನು ಪುಡಿ ಮಾಡಿ ಹಾಕಿ. ಅದರಲ್ಲಿ ನಿಂಬೆ ರಸ, ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ. ಈ ಮಿಶ್ತ್ರನವನ್ನು ಕೂದಲಿಗೆ ಹಚ್ಚಿ. ಸ್ವಲ್ಪಸಮಯದ ನಂತರ ಕೂದಲನ್ನು ವಾಶ್ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ. ಮಾತ್ರವಲ್ಲ, ಕೂದಲು ಬೆಳೆಯಲು ಕೂಡ ಇದು ಸಹಕಾರಿ ಆಗಿದೆ.


ಇದನ್ನೂ ಓದಿ- Health Tips : ಚಳಿಗಾಲದ ಈ ರೋಗಗಳಿಂದ ದೂರವಿರಲು ತಪ್ಪದೆ ಸೇವಿಸಿ ಸಜ್ಜೆ ರೊಟ್ಟಿ!


* ಬೇ ಎಲೆಗಳೊಂದಿಗೆ ಸಾಸಿವೆ ಎಣ್ಣೆ:
ಬೇ ಎಲೆಯ ಪುಡಿಯಲ್ಲಿ ಸಾಸಿವೆ ಎಣ್ಣೆಯನ್ನು ಬೆರೆಸಿ ನಂತರ ಇದರಲ್ಲಿ ಮೆಂತ್ಯೆ ಪುಡಿ, ಲವಂಗವನ್ನು ಮಿಶ್ರಣ ಮಡಿ. ನೀವು ಹೇರ್ ವಾಶ್ ಮಾಡುವ ಮೂರ್ನಾಲ್ಕು ಗಂಟೆಗಳ ಮೊದಲು ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ನಂತರ ಶಾಂಪೂವಿನಿಂದ ಚೆನ್ನಾಗಿ ಕೂದಲನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ಕೂದಲುದುರುವ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ. ಜೊತೆಗೆ ಕೂದಲು ದಟ್ಟವಾಗಿ ಬೆಳೆಯುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.