Coffee: ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ..?
ಪ್ರತಿದಿನ 3 ಕಪ್‌ಗಳಷ್ಟು ಫಿಲ್ಟರ್ ಮಾಡಿದ ಕಾಫಿ ಕುಡಿಯುವವರು ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಶೇ.60ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ನವದೆಹಲಿ: ನೀವು ಕಾಫಿ(Coffee)ಯನ್ನು ತುಂಬಾ ಇಷ್ಟಪಡುತ್ತಿದ್ದರೆ, ಈಗ ಯಾವುದಕ್ಕೂ ತಲೆಕೆಡಿಸಿಕೊಳ್ಳುವು ಅವಶ್ಯಕತೆಯಿಲ್ಲ. ಕಾಫಿ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದು, ನೀವು ಪ್ರತಿದಿನ ಕಾಫಿ ಸೇವಿಸಬಹುದು. ಹೌದು ಇತ್ತೀಚೆಗಷ್ಟೇ ಕಾಫಿ ಕುಡಿಯುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಇದರ ಪ್ರಕಾರ ನೀವು ಕಾಫಿ ಕುಡಿಯುವ ಮೂಲಕ ಮಧುಮೇಹವನ್ನು ಕಡಿಮೆ ಮಾಡಿಕೊಳ್ಳಬಹುದು. ಕಾಫಿಯು ಟೈಪ್ 2 ಡಯಾಬಿಟಿಸ್(Type 2 Diabetes) ಅನ್ನು ತಡೆಯಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹೀಗಾಗಿ ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದರ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂದು ತಿಳಿಯೋಣ.
ಫಿಲ್ಟರ್ ಕಾಫಿ ಪ್ರಯೋಜನಕಾರಿಯಾಗಿದೆ
ಸಂಶೋಧನೆಯ ಪ್ರಕಾರ ನೀವು ಬೇಯಿಸಿದ ಕಾಫಿಯ ಬದಲಿಗೆ ಫಿಲ್ಟರ್ ಕಾಫಿ(Health Benefits Of Coffee)ಯನ್ನು ಕುಡಿಯಲು ಬಯಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಫಿಲ್ಟರ್ ಕಾಫಿ ಕುಡಿಯುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ನೀವು ಕಾಫಿಯನ್ನು ಹೇಗೆ ತಯಾರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯದ ಪರಿಣಾಮವು ಅವಲಂಬಿತವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕಾಫಿ ಸೇವಿಸುವ ವಿಧಾನವು ನಿಮ್ಮ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಈ 9 ಲಕ್ಷಣಗಳು ಕ್ಯಾನ್ಸರ್ ನ ಸಂಕೇತವಾಗಿರಬಹುದು, ಇವುಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ
ಯಾರು ಈ ಸಂಶೋಧನೆ ಮಾಡಿದವರು?
ಈ ಸಂಶೋಧನೆಯನ್ನು ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ಫಿಲ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ಸ್ವೀಡನ್‌ನ ಉಮಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಸಂಶೋಧನೆ ನಡೆಸಿದೆ. ಬೇಯಿಸಿದ ಕಾಫಿಗಿಂತ ಫಿಲ್ಟರ್ ಕಾಫಿ(Coffee Benefits) ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸಂಶೋಧಕರು ಏನು ಹೇಳುತ್ತಾರೆ?
ಉಮಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಿಕಾರ್ಡ್ ಲ್ಯಾಂಡ್‌ಬರ್ಗ್ ಪ್ರಕಾರ, ದಿನಕ್ಕೆ 3 ಕಪ್ ಕಾಫಿಯು ಟೈಪ್ 2 ಮಧುಮೇಹದ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಸಂಶೋಧನೆಯಲ್ಲಿ ಭಾಗವಹಿಸುವವರ ರಕ್ತದಲ್ಲಿ ಇರುವ ‘ಬಯೋಮಾರ್ಕರ್ಸ್’ಅನ್ನು ಪರೀಕ್ಷಿಸಲಾಯಿತು. ಬಳಿಕ ಆರೋಗ್ಯದ ದೃಷ್ಟಿಯಿಂದ ಫಿಲ್ಟರ್ ಕಾಫಿಯನ್ನೇ ಸೇವಿಸಬೇಕು. ಇದು ನಿಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ(Coffee For Diabetes) ಬೀರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Weight Loss: ಈ ರೀತಿ ನೀರು ಕುಡಿಯುವುದರಿಂದ ನಿಯಂತ್ರಣದಲ್ಲಿರುತ್ತೆ ತೂಕ
ಶೇ.60ರಷ್ಟು ಪರಿಣಾಮ
ಪ್ರತಿದಿನ 3 ಕಪ್‌ಗಳಷ್ಟು ಫಿಲ್ಟರ್ ಮಾಡಿದ ಕಾಫಿ ಕುಡಿಯುವವರು ಮಧುಮೇಹ(Diabetes)ವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಶೇ.60ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕುದಿಸಿದ ಕಾಫಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಹಳೆಯ ಸಂಶೋಧನೆಯಲ್ಲೂ ಈ ವಿಷಯಗಳು ಮುನ್ನೆಲೆಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಬೇಯಿಸಿದ ಕಾಫಿ ಕುಡಿಯುವುದನ್ನು ತಪ್ಪಿಸಲು ಪ್ರಯತ್ನಿಸಿ ಮತ್ತು ಫಿಲ್ಟರ್ ಕಾಫಿಯನ್ನೇ ಹೆಚ್ಚಾಗಿ ಸೇವಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.