ಬೆಂಗಳೂರು: ಗುಲಾಬಿ, ರೋಜ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ! ಗುಲಾಬಿ - ಹೂವುಗಳ ರಾಣಿ! ಅಷ್ಟೇ ಅಲ್ಲ ಪ್ರೀತಿ ಮತ್ತು ಸೌಂದರ್ಯದ ಸಂಕೇತ. ಐಷಾರಾಮಿ ನೈಸರ್ಗಿಕ ಪದಾರ್ಥಗಳೊಂದಿಗೆ ನಿಮ್ಮ ಚರ್ಮವನ್ನು ಸೋಗಸಾಗಿಸಲು ಇಷ್ಟಪಡುತ್ತೀರಾ? ಹೌದು ಎಂದಾದರೆ, ನೈಸರ್ಗಿಕ ಮತ್ತು ಸಾವಯವ ಗುಲಾಬಿ ದಳಗಳ ಸೌಂದರ್ಯ ಪ್ರಯೋಜನಗಳ ಬಗ್ಗೆ ತಪ್ಪದೇ ತಿಳಿಯಿರಿ. 


COMMERCIAL BREAK
SCROLL TO CONTINUE READING

ಆಯುರ್ವೇದದಲ್ಲಿ (Ayurveda) ಗುಲಾಬಿಗಳ ಉತ್ಕರ್ಷಣ ನಿರೋಧಕ, ವಿಶ್ರಾಂತಿ, ಆರ್ಧ್ರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ರೋಸ್ ವಾಟರ್ ಅಥವಾ ಸಾರಭೂತ ತೈಲದ ರೂಪದಲ್ಲಿ ಪ್ರಾಚೀನ ಕಾಲದಿಂದಲೂ ಗುಲಾಬಿಯನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿದೆ. ಆದರೆ, ಗುಲಾಬಿ ದಳಗಳು ಕೂದಲ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಗುಲಾಬಿ ದಳದ ಪುಡಿ ಬಳಸುವುದರಿಂದ ಸಿಗುವ ಸೌಂದರ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ...


* ಗುಲಾಬಿ ದಳದ ಪೌಡರ್ ಅನ್ನು ಬಾಡಿ ಸ್ಕ್ರಬ್ ಆಗಿ ಬಳಸಬಹುದು:
½ ಕಪ್ ಗುಲಾಬಿ ದಳದ ಪುಡಿ, ½ ಕಪ್ ಬ್ರೌನ್ ಶುಗರ್ ಮತ್ತು ಸ್ವಲ್ಪ ವರ್ಜಿನ್ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ನೀವು ಸ್ನಾನಕ್ಕೆ ಹೋಗುವ ಮೊದಲು ಈ ಸ್ಕ್ರಬ್ ಬಳಸಿ. ನಿಮ್ಮ ಇಡೀ ದೇಹದ ಚರ್ಮವನ್ನು ಸುಂದರಗೊಳಿಸಲು ಈ ಮಿಶ್ರಣವನ್ನು ಹಚ್ಚಿ ಮೃದುವಾದ ವೃತ್ತಾಕಾರದ ಚಲನೆಗಳೊಂದಿಗೆ ಮಸಾಜ್ ಮಾಡಿ. ನೀವು ಅತ್ಯಂತ ಒಣ ಚರ್ಮ ಹೊಂದಿದ್ದರೆ, ಈ ಸ್ಕ್ರಬ್‌ಗೆ ಜೇನುತುಪ್ಪ ಸೇರಿಸಿ.


ಈ ಸ್ಕ್ರಬ್ ಚರ್ಮದ ಸತ್ತ ಜೀವಕೋಶಗಳು, ಕೊಳೆ, ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಯವಾದ ಕಾಂತಿಯುತ ಚರ್ಮವನ್ನು ನೀಡುತ್ತದೆ.


ಇದನ್ನೂ ಓದಿ- Skin Care Tips for Men: ಪುರುಷರಿಗೆ ಸೌಂದರ್ಯ ಸಲಹೆ; ಆಕರ್ಷಕ ತ್ವಚೆಯನ್ನು ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ


* ಎಕ್ಸ್‌ಫೋಲಿಯೇಟರ್ ಆಗಿ ಬಳಸಬಹುದು:
ಗುಲಾಬಿ ದಳದ ಪುಡಿ (Rose Petal Powder) ಮತ್ತು ಕಡಲೆ ಹಿಟ್ಟನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದರ ಪೇಸ್ಟ್ ತಯಾರಿಸಲು ಸ್ವಲ್ಪ ನೀರು ಸೇರಿಸಿ. ನೀವು ರೋಸ್ ವಾಟರ್ ಅನ್ನು ಕೂಡ ಬಳಸಬಹುದು. ವೃತ್ತಾಕಾರದಲ್ಲಿ ಈ ಪೇಸ್ಟ್ ಅನ್ನು ಹಚ್ಚಿ ಮತ್ತು 15-20 ನಿಮಿಷಗಳ ಕಾಲ ಬಿಡಿ. ಅದು ಒಣಗಿದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಿಮ್ಮ ಮುಖವನ್ನು ತೊಳೆಯುವಾಗ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿ. 


ಗುಲಾಬಿ ದಳದ ಪುಡಿಯನ್ನು ಈ ರೀತಿ ಬಳಸುವುದರಿಂದ ಮುಚ್ಚಿಹೋಗಿರುವ ರಂಧ್ರಗಳನ್ನು ತೆಗೆದುಹಾಕಲು ಇದು ಸಹಕಾರಿ ಆಗಿದೆ. ಇದು ಹೆಚ್ಚುವರಿ ಎಣ್ಣೆ, ಕೊಳೆ, ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ಸ್ಪಷ್ಟ ಚರ್ಮವನ್ನು ನೀಡುತ್ತದೆ. ಈ ಸ್ಕ್ರಬ್ ಅನ್ನು ವಾರಕ್ಕೊಮ್ಮೆ ಬಳಸಿ. ಇದು ತೆರೆದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.


* ಚರ್ಮದ ಪೋಷಣೆಗಾಗಿ: 
ಅರ್ಧ ಕಪ್ ಗುಲಾಬಿ ದಳದ ಪುಡಿಯನ್ನು (Benefits Of Rose Petal Powder) ತೆಗೆದುಕೊಳ್ಳಿ. 1 ಮೊಟ್ಟೆಯ ಬಿಳಿಭಾಗ ಮತ್ತು 1 ಚಮಚ ಜೇನುತುಪ್ಪ ಸೇರಿಸಿ. ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ ನೀವು ಜೇನುತುಪ್ಪದ ಬದಲಾಗಿ ರೋಸ್ ವಾಟರ್ ಅನ್ನು ಬಳಸಬಹುದು. ದಪ್ಪ ಪೇಸ್ಟ್ ಮಾಡಿ ಮತ್ತು ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ. ಇದನ್ನು 30 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.


ಈ ಫೇಸ್ ಪ್ಯಾಕ್ ಮಿನಿ ಫೇಶಿಯಲ್ ಕೆಲಸವನ್ನು ಮಾಡುತ್ತದೆ. ಇದು ಮುಖದ ಮೇಲೆ ತೆರೆದ ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಚರ್ಮವನ್ನು ತೇವಗೊಳಿಸುವ ಮೂಲಕ ಅದನ್ನು ಪೋಷಿಸುತ್ತದೆ. ಇದು ಚರ್ಮವನ್ನು ಹಗುರಗೊಳಿಸುತ್ತದೆ ಮತ್ತು ಟೋನ್ ಮಾಡುತ್ತದೆ.


ಇದನ್ನೂ ಓದಿ-  Best Face Scrub: ಈ 2 ವಸ್ತುಗಳನ್ನು ಬೆರೆಸಿ ಸ್ಕ್ರಬ್ ಮಾಡಿ, ಕಲೆ-ಮೊಡವೆ ಮಾಯ; ಹೊಳೆಯುತ್ತೆ ತ್ವಚೆ


* ಚರ್ಮದ ಹಾನಿಯನ್ನು ತಡೆಗಟ್ಟಲು :
1 ಟೀಸ್ಪೂನ್ ಗುಲಾಬಿ ದಳದ ಪುಡಿಯನ್ನು ತೆಗೆದುಕೊಳ್ಳಿ ಮತ್ತು ಸಾಕಷ್ಟು ಹಸಿ ಹಾಲನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.


ಮೊಡವೆ, ಮುಖದ ಮೇಲಿನ ಕಲೆ, ಡಾರ್ಕ್ ಸರ್ಕಲ್ ಮತ್ತು ಸುಕ್ಕುಗಳನ್ನು ತೆಗೆದುಹಾಕಲು ಈ ಫೇಸ್ ಪ್ಯಾಕ್ ಸಹಕಾರಿ. ಹಾಲಿನಿಂದ ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ವಿಟಮಿನ್ ಎ, ಡಿ, ಬಿ 6, ಬಿ 12, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಲ್ಯಾಕ್ಟಿಕ್ ಆಸಿಡ್ ಮತ್ತು ಸೆಲೆನಿಯಮ್ ಅನ್ನು ಹೊಂದಿದೆ. ಇವೆಲ್ಲವೂ ಮೊಡವೆ, ಮುಖದ ಮೇಲಿನ ಕಲೆ, ಡಾರ್ಕ್ ಸರ್ಕಲ್ ಮತ್ತು ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ಇದು ನಿಮ್ಮ ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಗುಲಾಬಿ ಪುಡಿಯನ್ನು ಹಾಲಿನೊಂದಿಗೆ ಸೇರಿಸಿದಾಗ, ಅದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಶುಷ್ಕತೆಯನ್ನು ಹೋಗಲಾಡಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ