ಈ ದಿಕ್ಕಿನಲ್ಲಿ ಬೆಡ್ ರೂ ಇದ್ದರೆ ಆಸ್ಪತ್ರೆಗೆ ಹಣ ಸುರಿಯುವುದು ಎಂದೇ ಅರ್ಥ ! ನಿದ್ರಾಹೀನತೆ, ಚಡಪಡಿಕೆ ತಪ್ಪಿದ್ದಲ್ಲ ! ನೆಮ್ಮದಿ ಮರೀಚಿಕೆಯೇ
ಮನೆಯ ಬೆಡ್ರೂಮ್ ಯಾವ ದಿಕ್ಕಿನಲ್ಲಿ ಇದೆ ಎನ್ನುವುದು ಮನೆಯ ಏಳಿಗೆಯನ್ನು ನಿರ್ಧರಿಸುತ್ತದೆ.
ಬೆಂಗಳೂರು : ನಾವು ಜೀವನದಲ್ಲಿ ಎಷ್ಟು ಪ್ರಗತಿ ಸಾಧಿಸುತ್ತೇವೆ ಎಂಬುದರಲ್ಲಿ ನಮ್ಮ ಪ್ರಯತ್ನದ ಜೊತೆಗೆ ಅದೃಷ್ಟದ ಪಾತ್ರವೂ ದೊಡ್ಡದಿದೆ. ಇದರೊಂದಿಗೆ, ವಾಸ್ತು ಶಾಸ್ತ್ರವು ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನೀವು ಮನೆಯಲ್ಲಿ ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇಡುತ್ತೀರಿ ಎನ್ನುವುದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ.
ಆಗ್ನೇಯ ಕೋನದ ದಿಕ್ಕು ಯಾವುದು? :
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ಮತ್ತು ದಕ್ಷಿಣದ ನಡುವೆ ಇರುವ ಸ್ಥಳವನ್ನು ಆಗ್ನೇಯ ದಿಕ್ಕು ಎಂದು ಕರೆಯಲಾಗುತ್ತದೆ.ಈ ದಿಕ್ಕು ಬೆಂಕಿಯ ಅಂಶಕ್ಕೆ ಸಂಬಂಧಿಸಿದ್ದಾಗಿದೆ. ಸೂರ್ಯನ ಕಿರಣಗಳ ತೀವ್ರತೆ ಈ ದಿಕ್ಕಿನಲ್ಲಿ ಗರಿಷ್ಠವಾಗಿರುವುದೇ ಇದಕ್ಕೆ ಕಾರಣ.ಹಾಗಾಗಿ ಈ ದಿಕ್ಕಿನಲ್ಲಿ ಯಾವುದೇ ವಸ್ತುವನ್ನು ಇರಿಸುವ ಮೊದಲು ಬಹಳ ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಜಾಕ್ ಪಾಟ್ ! 18 ತಿಂಗಳ ಬಾಕಿ ಡಿಎ ಬಗ್ಗೆ ಕೊನೆಗೂ ಹೊರ ಬಿತ್ತು ಆದೇಶ ! ಒಂದು ವಾರದಲ್ಲಿ ಖಾತೆ ಸೇರುವುದು ಹಣ
ಈ ದಿಕ್ಕಿನಲ್ಲಿ ಸುಡುವ ವಸ್ತುಗಳನ್ನು ಇಡಬಾರದು :
ತ್ವರಿತವಾಗಿ ಬಿಸಿಯಾಗುವ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಇದರೊಂದಿಗೆ, ಸುಡುವ ವಸ್ತುಗಳು ಮತ್ತು ವಿದ್ಯುತ್ ಉಪಕರಣಗಳನ್ನು ಕೂಡಾ ಈ ದಿಕ್ಕಿನಲ್ಲಿ ಇಡುವಂತಿಲ್ಲ. ಹೀಗೆ ಮಾಡುವುದರಿಂದ ಮನೆಯಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ಕುಟುಂಬದಲ್ಲಿ ತೊಂದರೆಗಳು ಎದುರಾಗುತ್ತವೆ.
ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಅಳವಡಿಸಬೇಕಲ್ಲವೇ? :
ವಾಸ್ತು ಶಾಸ್ತ್ರದ ಪ್ರಕಾರ, ಬೆಂಕಿ ಮತ್ತು ನೀರು ಪರಸ್ಪರ ವಿರುದ್ಧ ಅಂಶಗಳಾಗಿವೆ. ಆದ್ದರಿಂದ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕಿನಲ್ಲಿ ನೀರಿನ ಟ್ಯಾಂಕ್, ಬೋರಿಂಗ್, ಟ್ಯಾಪ್ ಅಥವಾ ಕೈ ಪಂಪ್ ಅನ್ನು ಸ್ಥಾಪಿಸುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಹಾಗೆ ಮಾಡುವುದರಿಂದ ಋಣಾತ್ಮಕ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ವ್ಯಕ್ತಿಯು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ.
ಮಲಗುವ ಕೋಣೆ ಆಗ್ನೇಯ ಮೂಲೆಯಲ್ಲಿದ್ದರೆ ?:
ವಾಸ್ತು ಶಾಸ್ತ್ರಗಳ ಪ್ರಕಾರ, ಅಗ್ನಿ ಕೋನವು ಬೆಂಕಿಯ ದಿಕ್ಕನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಈ ದಿಕ್ಕಿನಲ್ಲಿ ಮಲಗುವ ಕೋಣೆ ಇರಲೇಬಾರದು. ಒಂದು ವೇಳೆ ಈ ದಿಕ್ಕಿನಲ್ಲಿ ಮಲಗುವ ಕೋಣೆ ಇದ್ದರೆ ಒತ್ತಡ, ನಿದ್ರಾಹೀನತೆ, ಚಡಪಡಿಕೆ, ಹೆದರಿಕೆ, ಬೆವರುವಿಕೆ ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ, ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಈ ದಿಕ್ಕಿನಲ್ಲಿ ಮಲಗುವ ಕೋಣೆ ಎಂದರೆ ಆಸ್ಪತ್ರೆಗೆ ಹಣ ಸುರಿಯುವುದು ಎಂದೇ ಅರ್ಥ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ