Beetroot For Skin: ಬೀಟ್ರೂಟ್ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೀಟ್ರೂಟ್ನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. 


COMMERCIAL BREAK
SCROLL TO CONTINUE READING

ಸೌಂದರ್ಯ ತಜ್ಞರ ಪ್ರಕಾರ, ಬೀಟ್ರೂಟ್ ಬಳಕೆ ಆರೋಗ್ಯಕ್ಕಷ್ಟೇ ಅಲ್ಲ ಆಕರ್ಷಕ ತ್ವಚೆ ನಿಮ್ಮದಾಗಿಸಲು ಕೂಡ ತುಂಬಾ ಪ್ರಯೋಜನಕಾರಿ ಆದ ತರಕಾರಿ ಆಗಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಗುಲಾಬಿಯಂತಹ ಹೊಳಪು ಬರುತ್ತದೆ. ಅಂತೆಯೇ ಇದರ ಫೇಸ್ ಪ್ಯಾಕ್ ತಯಾರಿಸಿ ಬಳಸುವುದರಿಂದ ಚರ್ಮದ ಹಲವು ಸಮಸ್ಯೆಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ.  


ಚರ್ಮದ ಸಮಸ್ಯೆಗಳಿಗೆ ತಕ್ಕಂತೆ ಬೀಟ್ರೂಟ್ ಅನ್ನು ಈ ರೀತಿ ಬಳಸಿ: 
ಕಲೆ ನಿವಾರಣೆ: 

ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಗಾಢ ಕಲೆ ಇದ್ದರೆ 2 ಚಮಚ ಮುಲ್ತಾನಿ ಮಿಟ್ಟಿಗೆ 5 ಚಮಚ ಬೀಟ್ರೂಟ್ ರಸವನ್ನು ಬೆರೆಸಿ ಮಾಸ್ಕ್ ತಯಾರಿಸಿ, ಇದನ್ನು ಮುಖಕ್ಕೆ ಹಚ್ಚಿ. ಇದು ಪೂರ್ತಿಯಾಗಿ ಡ್ರೈ ಆದ ನಂತರ ಸ್ವಲ್ಪ ನೀರು ಚಿಮುಕಿಸಿ ಮಸಾಜ್ ಮಾಡುತ್ತಾ ಆ ಪ್ಯಾಕ್ ಅನ್ನು ರಿಮೂವ್ ಮಾಡಿ. ಇದರಿಂದ ಕಲೆ ನಿವಾರಣೆಯಾಗುತ್ತದೆ.


ಇದನ್ನೂ ಓದಿ- ಕರಿಬೇವನ್ನು ಈ ರೀತಿ ಸೇವಿಸಿ ಹೊಟ್ಟೆ - ಸೊಂಟದ ಭಾಗದ ಕೊಬ್ಬು ಮಂಜಿನಂತೆ ಕರಗುವುದು


ಡಾರ್ಕ್ ಸರ್ಕಲ್:
ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಸಮಸೆಯನ್ನು ನಿವಾರಿಸಲು 1 ಚಮಚ ಬೀಟ್ರೂಟ್ ರಸದಲ್ಲಿ 4-5 ಹನಿ ಬಾದಾಮಿ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿ. ಬಳಿಕ ಮೂರರಿಂದ ಐದು ನಿಮಿಷಗಳ ಕಾಲ ಮುಖಕ್ಕೆ ಲಘುವಾಗಿ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. 


ತುಟಿ ಒನಗುವ ಸಮಸ್ಯೆ: 
ನಿಮಗೆ ಆಗಾಗ್ಗೆ ತುಟಿ ಒಣಗುವ ಸಮಸ್ಯೆ ಇದ್ದರೆ ಅರ್ಧ ಘಂಟೆಯವರೆಗೆ ಬೀಟ್ರೂಟ್ ರಸವನ್ನು ಫ್ರಿಜ್ನಲ್ಲಿ ಇರಿಸಿ. ರಾತ್ರಿ ಮಲಗುವ ಮೊದಲು ಇದನ್ನು ನಿಮ್ಮ ತುಟಿಗಳಿಗೆ ಲೇಪಿಸಿ. ಬೆಳಿಗ್ಗೆ ಎದ್ದ ನಂತರ ವಾಶ್ ಮಾಡಿ. 


ಇದನ್ನೂ ಓದಿ- ಕರಿಬೇವನ್ನು ಈ ರೀತಿ ಸೇವಿಸಿ ಹೊಟ್ಟೆ - ಸೊಂಟದ ಭಾಗದ ಕೊಬ್ಬು ಮಂಜಿನಂತೆ ಕರಗುವುದು


ಕಾಂತಿಯುತ ಚರ್ಮ: 
ನಿಮ್ಮ ಮುಖ, ಕುತ್ತಿಗೆ ಸುತ್ತಲೂ ಕಪ್ಪು ಕಲೆಗಳಿದ್ದರೆ ಒಂದು ಸ್ಪೂನ್ ಕಡಲೆ ಹಿಟ್ಟಿನಲ್ಲಿ ಬೀಟ್ರೂಟ್ ರಸ ಮತ್ತು ಮೊಸರನ್ನು  ಮಿಕ್ಸ್ ಮಾಡಿ ಮಾಸ್ಕ್ ತಯಾರಿಸಿ. ಇದನ್ನು ಕುತ್ತಿಗೆಯವರೆಗೂ ಹಚ್ಚಿ ಅರ್ಧಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಫೇಸ್ ವಾಶ್ ಮಾಡಿ. ಇದರಿಂದ ಹೊಳೆಯುವ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.