ದೇಹಕ್ಕೆ ಪ್ರಯೋಜನವಾಗಬೇಕಾದರೆ ಈ ಹೊತ್ತಿಗೆ ಸೇವಿಸಬೇಕು ಬೇಯಿಸಿದ ಮೊಟ್ಟೆ
ಮೊಟ್ಟೆಗಳಲ್ಲಿ ಪ್ರೋಟೀನ್, ಕಬ್ಬಿಣ, ವಿಟಮಿನ್ ಎ, ಬಿ 6, ಬಿ 12, ಫೋಲೇಟ್, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಮ್ ಎಸೆನ್ಶಿಯಲ್ ಅನ್ ಸ್ಯಾಚ್ಯುರೆಟೆಡ್ ಫ್ಯಾಟಿ ಆಸಿಡ್, ಸಮೃದ್ಧವಾಗಿದೆ. ವಯಸ್ಕರಿಂದ ಮಕ್ಕಳವರೆಗೆ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.
ನವದೆಹಲಿ : Benefits of eating boiled egg : ಮೊಟ್ಟೆ ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರೋಟೀನ್ ಸಮೃದ್ಧವಾಗಿರುವ ಬೇಯಿಸಿದ ಮೊಟ್ಟೆಗಳನ್ನು ತಿಂದರೆ, ಆರೋಗ್ಯಕ್ಕೆ (Benefits of eating boiled egg) ಉತ್ತಮ ಪ್ರಯೋಜನಗಳು ಸಿಗಲಿವೆ. ಈ ಆರೋಗ್ಯಕರ ಆಹಾರವು ವಿಶ್ವದ ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಪ್ರಪಂಚದಾದ್ಯಂತ ಜನರು ತಿನ್ನಲು ಇಷ್ಟಪಡುತ್ತಾರೆ. ಮೂಳೆಗಳನ್ನು ಗಟ್ಟಿಗೊಳಿಸುವುದರೊಂದಿಗೆ, ಇದು ಕಣ್ಣುಗಳ ಆರೋಗ್ಯಕ್ಕೂ ಒಳ್ಳೆಯದು.
ಮೊಟ್ಟೆಗಳಲ್ಲಿ (Egg) ಪ್ರೋಟೀನ್, ಕಬ್ಬಿಣ, ವಿಟಮಿನ್ ಎ, ಬಿ 6, ಬಿ 12, ಫೋಲೇಟ್, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಮ್ ಎಸೆನ್ಶಿಯಲ್ ಅನ್ ಸ್ಯಾಚ್ಯುರೆಟೆಡ್ ಫ್ಯಾಟಿ ಆಸಿಡ್, ಸಮೃದ್ಧವಾಗಿದೆ. ವಯಸ್ಕರಿಂದ ಮಕ್ಕಳವರೆಗೆ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.
ಇದನ್ನೂ ಓದಿ : Weight Loss: ಈ 5 ಆಹಾರ ಪದಾರ್ಥಗಳ ಸೇವನೆಯಿಂದ ಬೇಗ ತೂಕ ಕಡಿಮೆಯಾಗುತ್ತಂತೆ
ಆಹಾರ ತಜ್ಞರ ಪ್ರಕಾರ, ಬೇಯಿಸಿದ ಮೊಟ್ಟೆಗಳು (Boiled egg) ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು, ವಿಟಮಿನ್ ಎಯಿಂದ ಸಮೃದ್ಧವಾಗಿರುತ್ತದೆ. ಇದು ನಮ್ಮ ಚರ್ಮ ಮತ್ತು ದೃಷ್ಟಿಗೆ ಅತ್ಯಂತ ಪ್ರಯೋಜನಕಾರಿ. ಇದು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ (Bone health) ಒಳ್ಳೆಯದು. ಅದರಲ್ಲಿರುವ ವಿಟಮಿನ್ ಬಿ ಮತ್ತು ಐರನ್ ನ ಮೂಲವಾಗಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ನೀಗಿಸಲು ಸಹಾಯ ಮಾಡುತ್ತದೆ.
ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಅದ್ಭುತ ಪ್ರಯೋಜನಗಳು (Amazing benefits of eating boiled egg) :
-ಮೊಟ್ಟೆ ತೂಕವನ್ನು ಕಡಿಮೆ ಮಾಡಲು (Weight lose) ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ದೃಷ್ಟಿಯನ್ನು ಕೂಡಾ ಹೆಚ್ಚಿಸುತ್ತದೆ.
-ಮೊಟ್ಟೆ ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
- ಮೊಟ್ಟೆಯಲ್ಲಿ ಪ್ರೋಟೀನ್ ಹೇರಳವಾಗಿ ಕಂಡುಬರುತ್ತದೆ. ಇದು ನಿಮ್ಮ ಚರ್ಮ ಮತ್ತು ಕೂದಲಿಗೆ (Hair care) ಪ್ರಯೋಜನಕಾರಿ.
- ಪ್ರತಿದಿನ ಎರಡು ಮೊಟ್ಟೆಗಳನ್ನು ತಿಂದರೆ, ರಕ್ತದಲ್ಲಿರುವ ರಕ್ತಕಣಗಳು ಸುಧಾರಿಸಬಹುದು.
- ಮೊಟ್ಟೆಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರ ಹೊರತಾಗಿ, ಮೂಳೆಗಳಿಗೆ ಸಂಬಂಧಿಸಿದ ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.
ಇದನ್ನೂ ಓದಿ : Benefits of soaked raisins:ಒಣದ್ರಾಕ್ಷಿಯನ್ನು ಈ ರೀತಿ ಸೇವಿಸಿದರೆ ವಿವಾಹಿತ ಪುರುಷರಿಗೆ ಸಿಗುತ್ತೆ ಹೆಚ್ಚು ಲಾಭ
ಮೊಟ್ಟೆಯ ಬಿಳಿಭಾಗವನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ 1 ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರೋಟೀನ್ ಪೌಡರ್ ಗಳನ್ನು ಬಳಸಲು ಇಷ್ಟವಿಲ್ಲದೆ ಹೋದರೆ, ಅದರ ಬದಲಾಗಿ ಮೊಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಬೇಯಿಸಿದ ಮೊಟ್ಟೆಯನ್ನು ತಿನ್ನಲು ಸರಿಯಾದ ಸಮಯ ಯಾವುದು ?
ಡಯಟ್ ತಜ್ಞೆ ಡಾ.ರಂಜನಾ ಸಿಂಗ್ ಪ್ರಕಾರ, ಬೆಳಗಿನ ಉಪಹಾರದಲ್ಲಿ ಮೊಟ್ಟೆಯನ್ನು ತಿನ್ನುವುದು (boiled egg in breakfast) ಹೆಚ್ಚು ಪ್ರಯೋಜನಕಾರಿ. ಮೊಟ್ಟೆಯನ್ನು ಬೇಯಿಸಲು ಹೆಚ್ಚೆಂದರೆ 5 ರಿಂದ 10 ನಿಮಿಷಗಳಷ್ಟು ಸಮಯ ಸಾಕಾಗುತ್ತದೆ. ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳು ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಬೆಳಗಿನ ಉಪಾಹಾರವನ್ನು ಪ್ರೋಟೀನ್ ಸಮೃದ್ಧವಾಗಿ ಸೇವಿಸುವುದರಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಇದು ನಿಮಗೆ ಇಡೀ ದಿನ ಶಕ್ತಿಯನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ