Best Ways to Get Rid of Rats from Home: ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಇಲಿಗಳ ಕಾಟ ಇದ್ದೇ ಇರುತ್ತವೆ, ಗೃಹೋಪಯೋಗಿ ವಸ್ತುಗಳು, ವಿದ್ಯುತ್ ತಂತಿಗಳು ಇತ್ಯಾದಿಗಳನ್ನು ಕಡಿದು ಹಾಕುತ್ತಾ ಉಪಟಳ ನೀಡುತ್ತವೆ. ಹೀಗಾಗಿ ಇಲಿಗಳನ್ನು ಕೊಲ್ಲಲು ಅನೇಕ ಜನರು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ಪ್ರಾಣ ಹಾನಿ ಮಾಡದೆ ಅವುಗಳನ್ನು ಮನೆಯಿಂದ ದೂರ ಓಡಿಸುವ ಟಿಪ್ಸ್’ಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗುಜರಾತ್ ಟೈಟಾನ್ಸ್’ಗೆ ಶಾಕ್! IPLಗೆ ಆಯ್ಕೆಯಾದ ಮೊದಲ ಬುಡಕಟ್ಟು ಆಟಗಾರನಿಗೆ ಆಕ್ಸಿಡೆಂಟ್


ಕ್ಯಾಸ್ಟರ್ ಬೀಜ:


ಮನೆಯಿಂದ ಇಲಿಗಳನ್ನು ದೂರವಿಡಲು ಕ್ಯಾಸ್ಟರ್ ಬೀಜ ಸಾಕಷ್ಟು ಸಹಾಯ ಮಾಡುತ್ತದೆ. ಮೊದಲು ಕ್ಯಾಸ್ಟರ್ ಬೀಜವನ್ನು ರುಬ್ಬಿ ಒಣಗಿಸಿ. ನಂತರ ಯಾವುದಾದರೂ ಹಿಟ್ಟಿನ ಜೊತೆ ಈ ಪುಡಿಯನ್ನು ಬೆರೆಸಿ, ಉಂಡೆ ಕಟ್ಟಿ. ಆ ಸಣ್ಣ ಉಂಡೆಗಳನ್ನು ಇಲಿಗಳು ಬರುವ ಸ್ಥಳಗಳಲ್ಲಿ ಇಡಿ. ಇವುಗಳನ್ನು ತಿನ್ನುವುದರಿಂದ ಇಲಿಗಳು ಮನೆಯಿಂದ ಓಡಿ ಹೋಗುತ್ತವೆ.


ನಾಫ್ತಲೀನ್ಸ್ ಅಥವಾ ನಶೆ ಗುಳಿಗೆ:


ಕರ್ಪೂರದಂತೆ ಕಾಣುವ ಈ ನಾಫ್ತಲೀನ್‌ ಅಥವಾ ನಶೆಗುಳಿಗೆಗಳನ್ನು ಇಲಿಗಳು ಇಷ್ಟಪಡುವುದಿಲ್ಲ. ನಾಫ್ತಲೀನ್ ಬಾಲ್’ಗಳ ವಾಸನೆ ಬಂದರೆ ಅವುಗಳು ಓಡಿಹೋಗುತ್ತವೆ. ನ್ಯಾಫ್ಥಲೀನ್ ಬಾಲ್’ಗಳನ್ನು ಪುಡಿಮಾಡಿ ಅದನ್ನು ಹಿಟ್ಟಿನಲ್ಲಿ ಮಿಶ್ರಣ ಮಾಡಿ. ಈಗ ನೀರು ಸೇರಿಸಿ ಮೃದುವಾದ ಉಂಡೆಕಟ್ಟಿ. ಇದಾದ ನಂತರ ಮನೆಯ ವಿವಿಧೆಡೆ ಇಡಿ. ಇದರ ವಾಸನೆಗೆ ಇಲಿಗಳು ಮನೆ ಬಿಟ್ಟು ಹೋಗುತ್ತವೆ.


ಇಲಿಗಳನ್ನು ತೊಡೆದುಹಾಕಲು ಇನ್ನೊಂದು ಮಾರ್ಗವಿದೆ. ಅಡಿಗೆ ಸೋಡಾ ಮತ್ತು ಪುದೀನಾ. ಮೊದಲು ಒಂದು ಕಪ್ ಹಿಟ್ಟು ತೆಗೆದುಕೊಳ್ಳಿ. ಇದಕ್ಕೆ ಪುದೀನಾ ಎಣ್ಣೆ ಮತ್ತು ಅಡಿಗೆ ಸೋಡಾ ಸೇರಿಸಿ. ಈ ಹಿಟ್ಟಿನಿಂದ ಉಂಡೆಗಳನ್ನು ತಯಾರಿಸಿ ಮನೆಯಲ್ಲಿ ಇಲಿಗಳು ಬರುವ ಸ್ಥಳಗಳಲ್ಲಿ ಇರಿಸಿ. ಹೀಗೆ ಮಾಡಿದರೆ ಇಲಿಗಳು ಓಡಿಹೋಗುತ್ತವೆ.


ಇದನ್ನೂ ಓದಿ: ಧರ್ಮಶಾಲಾ ಟೆಸ್ಟ್’ನಲ್ಲಿ ಈ ದಾಖಲೆ ಮುರಿಯಲು ಕಾಯುತ್ತಿದ್ದಾರೆ ಯಶಸ್ವಿ ಜೈಸ್ವಾಲ್!


(ಗಮನಿಸಿ: ಇದರಲ್ಲಿರುವ ವಿಷಯವು ಕೇವಲ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ