ದುಬಾರಿ ಕ್ರೀಂ, ಲೋಶನ್ ಅಗತ್ಯವೇ ಇಲ್ಲ ! ಮನೆಯಲ್ಲಿಯೇ ಇರುವ ಈ ವಸ್ತುಗಳಿಂದ ಸಿಗುವುದು ಕಾಂತಿಯುತ ತ್ವಚೆ
Face Mask For Skin Beauty : ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಫೇಸ್ ಮಾಸ್ಕ್ ಹಚ್ಚಿಕೊಳ್ಳಿ. ಈ ಫೇಸ್ ಮಾಸ್ಕ್ ಮೂಲಕ ತ್ವಚೆಯು ಫಳ ಫಳನೆ ಹೊಳೆಯಲು ಆರಂಭಿಸುತ್ತದೆ.
Face Mask For Skin Beauty : ಉದ್ಯೋಗಸ್ಥ ಮಹಿಳೆಯರು ಮತ್ತು ಗೃಹಿಣಿಯರು ಬಿಡುವಿಲ್ಲದ ಕೆಲಸಗಳಿಂದ ತಮ್ಮತ್ತ ಸರಿಯಾಗಿ ಗಮನ ಹರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಮನೆ ಮಂದಿಯ ಎಲ್ಲಾ ಬೇಕು ಬೇಡಗಳನ್ನು ನೋಡಿಕೊಳ್ಳುವ ಹೊತ್ತಿಗೆ ತಮ್ಮನ್ನೇ ನಿರ್ಲಕ್ಷಿಸಿ ಬಿಡುತ್ತಾರೆ ಮಹಿಳೆಯರು. ಅದರ ಪರಿಣಾಮವನ್ನು ಅವರ ಮುಖದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತದೆ. ನೀವುಕೂಡಾ ಇಂಥಹ ಸಮಸ್ಯೆ ಎದುರಿಸುತ್ತಿದ್ದರೆ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಫೇಸ್ ಮಾಸ್ಕ್ ಹಚ್ಚಿಕೊಳ್ಳಿ. ಈ ಫೇಸ್ ಮಾಸ್ಕ್ ಮೂಲಕ ತ್ವಚೆಯು ಫಲ ಫಳನೆ ಹೊಳೆಯಲು ಆರಂಭಿಸುತ್ತದೆ.
ರಾತ್ರಿ ವೇಳೆ ಈ 5 ರೀತಿಯ ಫೇಸ್ ಮಾಸ್ಕ್ ಗಳನ್ನು ಹಚ್ಚಿ :
1. ಕಲ್ಲಂಗಡಿ ರಸ :
ಕಲ್ಲಂಗಡಿ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಇದರಲ್ಲಿ ಸಾಕಷ್ಟು ಕಂಡುಬರುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ಮರುದಿನ ಬೆಳಿಗ್ಗೆ ಮುಖವನ್ನು ತೊಳೆಯಿರಿ. ಮುಖದ ಮೇಲಿನ ಸುಕ್ಕು ಹೋಗಲಾಡಿಸಲು ಕಲ್ಲಂಗಡಿ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಮಕ್ಕಳನ್ನೂ ಬಲಿ ಪಡಿಯುತ್ತಿದೆ ಹೃದಯಾಘಾತ! ಹೃದ್ರೋಗದ ಈ ಲಕ್ಷಣ ನಿರ್ಲಕ್ಷಿಸಬೇಡಿ..!
2. ರೋಸ್ ವಾಟರ್ :
ಮುಖದ ಕಾಂತಿಗಾಗಿ ರೋಸ್ ವಾಟರ್ ಬಳಸಲಾಗುತ್ತದೆ. ಇದು ತ್ವಚೆಯಲ್ಲಿ ಅಡಗಿರುವ ಕೊಳೆಯನ್ನು ಹೋಗಲಾಡಿಸುವುದಲ್ಲದೆ ತ್ವಚೆಯನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಮಲಗುವ ಮೊದಲು, ಹತ್ತಿಯ ಮೂಲಕ ಮುಖಕ್ಕೆ ರೋಸ್ ವಾಟರ್ ಹಚ್ಚಿ, ಬೆಳಿಗ್ಗೆ ಮುಖವನ್ನು ತೊಳೆಯಿರಿ.
3. ಆಲೂಗಡ್ಡೆ ಜ್ಯೂಸ್-ಗ್ರೀನ್ ಟೀ :
ತಣ್ಣನೆಯ ಗ್ರೀನ್ ಟೀ ಮತ್ತು ಆಲೂಗಡ್ಡೆ ರಸವನ್ನು ಒಂದು ಬಟ್ಟಲಿನಲ್ಲಿ ಬೆರೆಸಿ ನಂತರ ಅದನ್ನು ಹತ್ತಿ ಬಳಸಿ ಮುಖಕ್ಕೆ ಹಚ್ಚಿ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಮುಖವನ್ನು ಸ್ಪರ್ಶಿಸಿದಾಗ ಅದರ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ. ಗ್ರೀನ್ ಟೀ ನಮ್ಮ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಎರಡು ಕುಡಿ ಲವಂಗ ತಿಂದು ಚಮತ್ಕಾರ ನೋಡಿ!
4. ನಿಂಬೆ-ಕ್ರೀಮ್ ಫೇಸ್ ಮಾಸ್ಕ್ :
ನಿಂಬೆ ರಸವು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಟೋನ್ ಮಾಡಲು ಮತ್ತು ಎಣ್ಣೆಯಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಕೆನೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಒಂದು ಚಮಚ ಕೆನೆ ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಪೇಸ್ಟ್ ಅನ್ನು ಮುಖದ ಮೇಲೆ ಲಘುವಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಟ್ಟು ಬೆಳಗ್ಗೆ ಮುಖವನ್ನು ತೊಳೆಯಿರಿ.
5. ಹಾಲು ಮತ್ತು ಅರಿಶಿನ :
ಅನೇಕ ಬಾರಿ ಮುಖವು ಬಿಸಿಲಿನಿಂದ ಟ್ಯಾನ್ ಆಗುತ್ತದೆ, ಈ ಸಂದರ್ಭದಲ್ಲಿ ಹಾಲು ಆಂಟಿ ಟ್ಯಾನರ್ ಆಗಿ ಬಳಕೆಯಾಗುತ್ತದೆ. ಅಲ್ಲದೆ, ಅರಿಶಿನದಲ್ಲಿರುವ ಆಂಟಿಸೆಪ್ಟಿಕ್ ಮುಖವನ್ನು ಕಾಂತಿಯುತವಾಗಿಸುತ್ತದೆ. ಇವೆರಡರ ಫೇಸ್ ಮಾಸ್ಕ್ ತಯಾರಿಸಲು ಅರ್ಧ ಚಮಚ ಅರಿಶಿನ ಮತ್ತು ಹಸಿ ಹಾಲನ್ನು ಬೆರೆಸಿ ಕೈಗಳ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆಯಿರಿ.
ಇದನ್ನೂ ಓದಿ : ದೇಹದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಗೆ ಬ್ರೇಕ್ ಹಾಕಲು ಇಂದೇ ನಿಮ್ಮ ಲೈಫ್ ಸ್ಟೈಲ್ ನಲ್ಲಿ ಈ 5 ಬದಲಾವಣೆ ಮಾಡಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ