ಕೇತು-ಚಂದಿರನ ಮೈತ್ರಿಯಿಂದ `ಅಶುಭ ಗ್ರಹಣ ಯೋಗ` ಈ ಜನರು ಭಾರಿ ಎಚ್ಚರಿಕೆಯಿಂದಿರಬೇಕು.. ಇಲ್ದಿದ್ರೆ...!
Ashubh Grahan Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯಲ್ಲಿ ಅಶುಭ ಗ್ರಹಣ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗದಿಂದ ಮೂರು ರಾಶಿಗಳ ಜಾತಕದವರಿಗೆ ಸಂಕಷ್ಟ ಕಾಲ ಆರಂಭವಾಗಲಿದೆ. ಯಾವ ಮೂರು ರಾಶಿಗಳಿಗೆ ಸಂಕಷ್ಟ ಕಾಲ ಆರಂಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ,
Ketu-Moon Conjunction: ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳು ಒಂದು ನಿರ್ದಿಷ್ಟ ಕಾಲಾವಧಿಯ ಅಂತರದಲ್ಲಿ ಸಂಚಾರ ಮಾಡುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ನಿರ್ಮಿಸುತ್ತವೆ. ಅವುಗಳ ಪರಿಣಾಮವು ಇಡೀ ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಫೆಬ್ರವರಿ 13, 2023 ರಂದು, ಕೇತು ಮತ್ತು ಚಂದಿರನ ಮೈತ್ರಿ ತುಲಾ ರಾಶಿಯಲ್ಲಿ ರೂಪುಗೊಳ್ಳಲಿದೆ. ಎಲ್ಲಾ ದ್ವಾದಶ ರಾಶಿಗಳ ಮೇಲೆ ಅದರ ಪ್ರಭಾವವು ಕಂಡುಬರಲಿದೆ. ಆದರೆ 3 ರಾಶಿಗಳ ಜನರು ಈ ಅವಧಿಯಲ್ಲಿ ವಿಶೇಷ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಈ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಕರ್ಕ ರಾಶಿ
ಈ ಅಶುಭ ಗ್ರಹಣ ಯೋಗವು ನಿಮ್ಮ ಪಾಲಿಗೆ ತುಂಬಾ ಅಶುಭ ಸಾಬೀತಾಗಲಿದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಭಾರಿ ಚಂಚಲತೆ ಇರಲಿದೆ. ಮಾನಸಿಕ ಒತ್ತಡವೂ ಇರಬಹುದು. ನೀವು ಕೆಲ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬಹುದು. ಅಲ್ಲದೆ, ಇದು ಯಾರೊಂದಿಗಾದರು ವೈಷಮ್ಯಕ್ಕೆ ಕಾರಣವಾಗಬಹುದು. ಇದೇ ವೇಳೆ, ಮನೆಯಲ್ಲಿ ವಯಸ್ಸಾದ ವ್ಯಕ್ತಿಯ ಆರೋಗ್ಯ, ಅದರಲ್ಲಿಯೂ ವಿಶೇಷವಾಗಿ ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮತ್ತೊಂದೆಡೆ, ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಪ್ರಸ್ತುತ ಅದನ್ನು ಕೈಬಿಡುವುದು ಉತ್ತಮ. ಏಕೆಂದರೆ ಸಮಯವು ಅನುಕೂಲಕರವಾಗಿಲ್ಲ.
ಇದನ್ನೂ ಓದಿ-Gautam Adani ಗೆ ಮುಳುವಾಯಿತೆ ಶನಿಯ ಸಾಡೆಸಾತಿ! ಮುಂದೀನಾಗಲಿದೆ? ಜೋತಿಷ್ಯ ಪಂಡಿತರು ಹೇಳುವುದೇನು?
ವೃಶ್ಚಿಕ ರಾಶಿ
ಕೇತು ಮತ್ತು ಚಂದ್ರನ ಈ ಅಶುಭ ಗ್ರಹಣ ಯೋಗವು ನಿಮಗೆ ಪ್ರತಿಕೂಲ ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ಈ ಯೋಗವು ನಿಮ್ಮ ಸಂಕ್ರಮಣದ ಜಾತಕದ ದ್ವಾದಶ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಸಮಯದಲ್ಲಿ ನೀವು ಸ್ವಲ್ಪ ಎಚ್ಚರದಿಂದಿರಬೇಕು. ಈ ಅವಧಿಯಲ್ಲಿ ನೀವು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲಬಹುದು. ಅಲ್ಲದೆ, ನೀವು ಕೈಗೊಂಡ ಪ್ರಯಾಣವು ಫಲಪ್ರದವಾಗದೆ ಇರಬಹುದು. ಹೀಗಾಗಿ ಪ್ರಯಾಣ ಮಾಡುವುದನ್ನು ಆದಷ್ಟು ತಪ್ಪಿಸಿ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರವೂ ಕೂಡ ಮಂದಗತಿಯತ್ತ ಸಾಗಲಿದೆ. ಅಲ್ಲದೆ, ಈ ಅವಧಿಯಲ್ಲಿ ನೀವು ಯಾವುದಾದರೊಂದು ಒಪ್ಪಂದವನ್ನು ಮಾಡಲು ಬಯಸುತ್ತಿದ್ದರೆ, ಅದನ್ನು ಸ್ವಲ್ಪಕಾಲ ಮಾಡಿಕೊಳ್ಳದೆ ಇರುವುದು ಉತ್ತಮ. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
ಇದನ್ನೂ ಓದಿ-Mahashivratri 2023 ರಂದು ರೂಪುಗೊಳ್ಳುತ್ತಿದೆ ಅಪರೂಪದ ಕಾಕತಾಳೀಯ, ಮರೆತೂ ಈ ತಪ್ಪುಗಳನ್ನು ಮಾಡ್ಬೇಡಿ
ಮೀನ ರಾಶಿ
ಅಶುಭ ಗ್ರಹಣ ಯೋಗದ ನಿರ್ಮಾಣ ಮೀನ ರಾಶಿಯವರಿಗೆ ಹಾನಿಕಾರಕ ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಅಷ್ಟಮ ಭಾವದಲ್ಲಿ ರೂಪಗೊಳ್ಳುತ್ತಿದೆ. ಜೋತಿಷ್ಯ ಶಾಸ್ತ್ರದಲ್ಲಿ ಇದನ್ನು ವಯಸ್ಸು ಮತ್ತು ನಿಗೂಢ ಕಾಯಿಲೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಆರೋಗ್ಯದ ಬಗ್ಗೆ ಸಮಸ್ಯೆಗಳನ್ನು ಎದುರಿಸಬಹುದು. ಕಫ, ಶೀತ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಅಲ್ಲದೆ, ಕೆಲ ದೀರ್ಘಕಾಲದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಪ್ರಸ್ತುತ ನಿಮ್ಮ ರಾಶಿಗೆ ಶನಿಯ ಸಾಡೆಸಾತಿ ಕೂಡ ಆರಂಭವಾಗಿದೆ. ಹೀಗಾಗಿ ಕೆಲ ಕೆಲಸಗಳನ್ನು ಮಾಡುವುದನ್ನು ನೀವು ನಿಲ್ಲಿಸಬಹುದು. ಇದಲ್ಲದೆ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಿ. ಮಾತಿನ ಮೇಲೆ ಹಿಡಿತವಿರಲಿ.
ಇದನ್ನೂ ಓದಿ-ಕುಂಭ ರಾಶಿಯಲ್ಲಿ 12 ತಿಂಗಳುಗಳ ಬಳಿಕ ಸೂರ್ಯ-ಶುಕ್ರರ ಮೈತ್ರಿ, ಈ ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.