ನವದೆಹಲಿ: ಋತುಚಕ್ರದ ನೋವಿನಿಂದ(Periods Pain) ಮಹಿಳೆಯರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರ ತೊಂದರೆಯಿಂದ ಪಾರಾಗಲು ಅವರು ಹಲವು ರೀತಿಯ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೂ ಅವರ ನೋವಿನ ಸಮಸ್ಯೆ ಕಡಿಮೆಯಾಗುವುದಿಲ್ಲ. ಇಂತಹ ಮಹಿಳೆಯರು ಇದೀಗ ಯಾವುದೇ ರೀತಿ ಚಿಂತಿಸುವ ಅಗತ್ಯವಿಲ್ಲ. ಋತಚಕ್ರ ಸಂಬಂಧಿತ ಸಮಸ್ಯೆಗಳಿಗೆ ಪರಿಣಾಮಕಾರಿ ರಾಮಬಾಣದ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಖಂಡಿತವಾಗಿಯೂ ಇದು ನಿಮ್ಮ ನೋವಿಗೆ ಪರಿಹಾರವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ನೀವೆಲ್ಲರೂ ಒಂದಲ್ಲ ಒಂದು ಬಾರಿ ಹಾಗಲಕಾಯಿ(Bitter Gourd)ಯನ್ನು ಸೇವಿಸಿರಬೇಕು. ಆದರೆ ಹಾಗಲಕಾಯಿ ಮಾತ್ರವಲ್ಲದೆ ಅದರ ಎಲೆಗಳು ಕೂಡ ತುಂಬಾ ಪ್ರಯೋಜನಕಾರಿಯಾಗಿವೆ ಎಂಬುದು ನಿಮಗೆ ತಿಳಿದಿದೆಯೇ..? ಹೌದು, ಹಾಗಲಕಾಯಿಯಷ್ಟೇ ಅದರ ಎಲೆಗಳು ಕೂಡ ತುಂಬಾ ಉಪಯುಕ್ತವಾಗಿವೆ. ಇದಿರಂದ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.  


ಇದನ್ನೂ ಓದಿ: Bathing Tips: ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು


ಹಾಗಲಕಾಯಿ ಎಲೆಗಳ ಪ್ರಯೋಜನಗಳು


ಹಾಗಲಕಾಯಿ ಮಾತ್ರವಲ್ಲ ಅದರ ಎಲೆ(Bitter Gourd Leaves Benefits)ಗಳನ್ನೂ ಗಿಡಮೂಲಿಕೆಯಾಗಿ ಬಳಸುತ್ತಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಹಾಗಲಕಾಯಿ ಎಲೆಗಳಲ್ಲಿ ವಿಟಮಿನ್ C ಯಿಂದ ವಿಟಮಿನ್ A ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.


ಪಿರಿಯಡ್ಸ್ ನೋವಿನಿಂದ ಮುಕ್ತಿ ಸಿಗುತ್ತದೆ


ಹಾಗಲಕಾಯಿ ಮತ್ತು ಹಾಗಲಕಾಯಿ ಎಲೆಗಳು(Bitter Gourd Leaves) ಯಾವುದೇ ಔಷಧಿಗಿಂತ ಕಡಿಮೆಯಿಲ್ಲ.ಇದನ್ನು ಮಧುಮೇಹ, ತಲೆನೋವು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಪಿರಿಯಡ್ಸ್(Periods) ನೋವನ್ನು ನಿವಾರಿಸುವಲ್ಲಿ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಮುಟ್ಟಿನ ನೋವನ್ನು ಕಡಿಮೆ ಮಾಡಲು 10 ರಿಂದ 15 ಹಾಗಲಕಾಯಿ ಎಲೆಗಳನ್ನು ಪುಡಿಮಾಡಿ, ಅದರ ರಸವನ್ನು ಹೊರತೆಗೆಯಿರಿ. ಬಳಿಕ ಇದಕ್ಕೆ ಕರಿಮೆಣಸು ಮಿಶ್ರಣ ಮಾಡಿರಿ. ಈ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಕುಡಿಯಿರಿ. ಇದನ್ನು ಕುಡಿಯುವುದರಿಂದ ಪಿರಿಯಡ್ಸ್ ನೋವಿನಿಂದ ಪರಿಹಾರ ಸಿಗುತ್ತದೆ.


ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲಿಯೇ ಹಾರ್ಟ್ ಅಟ್ಯಾಕ್ ಬಾರದಂತೆ ನೋಡಿಕೊಳ್ಳುವುದು ಹೇಗೆ ?


(ಗಮನಿಸಿರಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಈ ಮನೆಮದ್ದುಗಳ ಸಲಹೆ ಪಾಲಿಸುವ ಮುನ್ನು ಕಡ್ಡಾಯವಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.