ನವದೆಹಲಿ: Blue Sapphire Benefits - ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಗ್ರಹಗಳ ಶುಭ ಪರಿಣಾಮಗಳಿಗೆ ಹಲವು ವಿಧದ ರತ್ನಗಳನ್ನು ಸೂಚಿಸಲಾಗಿದೆ. ರತ್ನಗಳು ಜೀವನದ ಮೇಲೆ ಸರಿಯಾದ ಪರಿಣಾಮಗಳನ್ನು ಬೀರಿದರೆ ಅದೃಷ್ಟ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇದಕ್ಕಾಗಿಯೇ ಜ್ಯೋತಿಷಿಗಳು (Horoscope) ಸರಿಯಾದ ಸಮಯದಲ್ಲಿ ಸರಿಯಾದ ರತ್ನವನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಶನಿ ಮತ್ತು ಮಂಗಳನ ಮಂಗಳಕರ ಪರಿಣಾಮಗಳಿಗಾಗಿ ರಕ್ತ ನೀಲಮಣಿಯನ್ನು (Gemstone) ಧರಿಸಲಾಗುತ್ತದೆ. ಎರಡೂ ಗ್ರಹಗಳ ಅಶುಭ ಪರಿಣಾಮವು ಹರಳು ಧರಿಸುವುದರಿಂದ ಕೊನೆಗೊಳ್ಳುತ್ತದೆ. ರಕ್ತ ನೀಲಮಣಿಯನ್ನು (Blue Sapphire) ಧರಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ಅದನ್ನು ಧರಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ರಕ್ತ ನೀಲಮಣಿ ಎಂದರೇನು? (Jotish Tips)
ರಕ್ತ ನೀಲಮಣಿ ಗ್ರಹಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಈ ರತ್ನವು ನೋಡಲು ರಕ್ತದಂತೆ ಕೆಂಪಾಗಿರುತ್ತದೆ. ಈ ಹರಳಿನ ಮೇಲೆ ಮೇಲೆ ಕೆಂಪು ಕಲೆಗಳಿವೆ. ರತ್ನ ಶಾಸ್ತ್ರದ  (Gemology) ಪ್ರಕಾರ ಇದು ತುಂಬಾ ಪರಿಣಾಮಕಾರಿ. ಈ ರತ್ನವು ಯಾರಿಗೆ ಸರಿಹೊಂದುತ್ತದೆಯೋ ಅವರ ಅದೃಷ್ಟ ನೆಲದಿಂದ ಆಗಸಕ್ಕೆ ತಲುಪಲು ಸಮಯ ಬೇಕಾಗುವುದಿಲ್ಲ. ಇದಲ್ಲದೆ, ಈ ರತ್ನದ ಪ್ರಭಾವದಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾನೆ. ಆದರೆ ಅಶುಭ ಪರಿಣಾಮದಿಂದಾಗಿ ಜೀವನದ ಮೇಲೆ ನಕಾರಾತ್ಮಕ ಪರಿಣಾಮವೂ ಉಂಟಾಗುತ್ತದೆ.


ಇದನ್ನೂ ಓದಿ-Health Tips: ಕಷಾಯ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ, ಏನೆಂದು ತಿಳಿಯಿರಿ..!


ಯಾರು ರಕ್ತ ನೀಲಮಣಿಯನ್ನು ಧರಿಸಬೇಕು? (Neelam Benefits)
ಜ್ಯೋತಿಷ್ಯ (Astro Tips) ತಜ್ಞರು ಮೇಷ ಮತ್ತು ಮಕರ ರಾಶಿಯವರಿಗೆ ಈ ರತ್ನ ಧರಿಸಲು ಶಿಫಾರಸು ಮಾಡುತ್ತಾರೆ. ಜಾತಕದಲ್ಲಿ ಶನಿ ಮತ್ತು ಮಂಗಳನ ದೆಸೆಯಲ್ಲಿ ಈ ರತ್ನವು ಲಾಭದಾಯಕವೆಂದು ಸಾಬೀತಾಗುತ್ತದೆ. ಇದಲ್ಲದೇ ವೃಷಭ ಲಗ್ನ ಹಾಗೂ ವೃಶ್ಚಿಕ ರಾಶಿಯವರಿಗೆ ರಕ್ತ ನೀಲಮಣಿಯನ್ನು ಧರಿಸುವುದು ಶುಭಕರವಾಗಿದೆ. ಅಲ್ಲದೆ, ವ್ಯಕ್ತಿಯ ಜಾತಕವು ಕುಂಭ ಲಗ್ನ ಅಥವಾ ಮೇಷ ಲಗ್ನ ಮತ್ತು ಮೇಷ ರಾಶಿಯಾಗಿದ್ದರೆ, ಆಗ ರಕ್ತ ನೀಲಮಣಿಯನ್ನು ಧರಿಸಬೇಕು.


ಇದನ್ನೂ ಓದಿ-Makeup Tips:ಒಣಗಿದ ಮೇಕಪ್ ಉತ್ಪನ್ನಗಳನ್ನು ಎಸೆಯುವ ಬದಲು ಹೀಗೆ ಮಾಡಿ!


ರಕ್ತ ನೀಲಮಣಿಯನ್ನು ಧರಿಸುವ ವಿಧಾನ (How To Wear Blue Sapphire)
ಪಂಚ ಧಾತುಗಳಿಂದ ತಯಾರಾದ ಲೋಹದಲ್ಲಿ ರಕ್ತ ನೀಲಮಣಿ ಧರಿಸುವುದು ಮಂಗಳಕರ. ಈ ರತ್ನವನ್ನು ಸಾಮಾನ್ಯವಾಗಿ ಬಲಗೈಯಲ್ಲಿ ಧರಿಸಬೇಕು. ಆದರೆ, ಎಡಗೈಯಲ್ಲಿ ಕೆಲಸ ಮಾಡುವವರು ಎಡಗೈಯಲ್ಲಿ ಧರಿಸಬೇಕು. ಇದಲ್ಲದೇ ಶನಿವಾರ ಈ ರತ್ನವನ್ನು ಧರಿಸಲು ಮಂಗಳಕರ ದಿನವಾಗಿದೆ.


ಇದನ್ನೂ ಓದಿ-Vastu Tips: ಈ ವಸ್ತುಗಳನ್ನು ನಿಮ್ಮ ಮನೆಯ ಮೇಲ್ಛಾವಣಿ/ಬಾಲ್ಕನಿಯಲ್ಲಿ ಇಡುವುದು ತುಂಬಾ ಅಶುಭ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.