Lucky Moles : ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ನಿಮಗೆ ರಾಜಯೋಗ..!
Body Lucky Moles : ಜ್ಯೋತಿಷ್ಯದ ಜಾತಕದಲ್ಲಿ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಭವಿಷ್ಯವನ್ನು ಹಸ್ತವನ್ನು ನೋಡುವ ಮೂಲಕ ತಿಳಿಯಲಾಗುತ್ತದೆ. ಅಂತೆಯೇ, ಸಾಮುದ್ರಿಕ ವಿಜ್ಞಾನವು ಮಾನವ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
Body Lucky Moles : ಜ್ಯೋತಿಷ್ಯದ ಜಾತಕದಲ್ಲಿ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಭವಿಷ್ಯವನ್ನು ಹಸ್ತವನ್ನು ನೋಡುವ ಮೂಲಕ ತಿಳಿಯಲಾಗುತ್ತದೆ. ಅಂತೆಯೇ, ಸಾಮುದ್ರಿಕ ವಿಜ್ಞಾನವು ಮಾನವ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಪ್ರಕಾರ, ಮಾನವ ದೇಹದ ರಚನೆ, ಮಚ್ಚೆ ಮತ್ತು ಗುರುತುಗಳ ಮೂಲಕ ಭವಿಷ್ಯದ ಕೆಲ ಮಾಹಿತಿಯನ್ನ ತಿಳಿಸುತ್ತದೆ. ಹಾಗಿದ್ರೆ, ನಿಮ್ಮ ದೇಹದ ಯಾವಾಗ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ? ಇಲ್ಲಿದೆ ನೋಡಿ..
ಸಾಮುದ್ರಿಕ ಶಾಸ್ತ್ರದಲ್ಲಿ, ದೇಹದ ಕೆಲ ಭಾಗದಲ್ಲಿ ಕೆಲವು ಮಚ್ಚೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಅದೃಷ್ಟದ ಸಂಕೇತವಾಗಿದೆ. ಈ ಮಚ್ಚೆಗಳು ಯಾರ ದೇಹದಲ್ಲಿದ್ದರೆ ಅಂತಹವರು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸಬೇಕಾಗಿಲ್ಲ.
ಇದನ್ನೂ ಓದಿ : Surya-Shukra Gochar 2023 : 'ಶನಿ' ರಾಶಿಯಲ್ಲಿ ಸೂರ್ಯ - ಶುಕ್ರನ ಪ್ರವೇಶ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಹಣದ ಸುರಿಮಳೆ!
ಬಲ ಹಣೆಯ
ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಅಂತಹವರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಅವರು ಎಂದಿಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ ಮತ್ತು ಹಣದ ಕೊರತೆಯಿಲ್ಲ.
ಬಲ ಕೆನ್ನೆ
ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದು ತುಂಬಾ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಬಲ ಕೆನ್ನೆಯ ಮೇಲೆ ಮಚ್ಚೆ ಇರುವ ವ್ಯಕ್ತಿಗೆ ಲಕ್ಷ್ಮಿದೇವಿಯ ವಿಶೇಷ ಅನುಗ್ರಹ ಇರುತ್ತದೆ. ಅವರ ಮನೆಯಲ್ಲಿ ಸದಾ ಆಶೀರ್ವಾದ ಇರುತ್ತದೆ ಮತ್ತು ಹಣದ ಕೊರತೆ ಇರುವುದಿಲ್ಲ.
ಎದೆ ಭಾಗದಲ್ಲಿ
ಎದೆಯ ಮಧ್ಯದಲ್ಲಿ ಮಚ್ಚೆ ಇರುವುದು ಅದೃಷ್ಟದ ಸಂಕೇತ. ಇವರು ತುಂಬಾ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಜೀವನದಲ್ಲಿ ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ. ಇವರಿಗೆ ಹಣದ ಕೊರತೆಯು ಯಾವತ್ತೂ ಬರುವುದಿಲ್ಲ. ಇವರು ಜೀವನದಲ್ಲಿ ಏನನ್ನು ಪಡೆಯಲು ಬಯಸುತ್ತಾರೋ ಅದನ್ನು ಪಡೆದೆ ಪಡೆಯುತ್ತಾರೆ.
ಬಲಗೈ
ತನ್ನ ಬಲಗೈಯಲ್ಲಿ ಮಚ್ಚೆ ಹೊಂದಿರುವ ವ್ಯಕ್ತಿ. ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ. ಅವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಇವರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಜೀವನದಲ್ಲಿ ಕೆಲವು ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಅವರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.
ಬಲ ಅಂಗೈ
ವ್ಯಕ್ತಿಯ ಬಲ ಅಂಗೈಯಲ್ಲಿ ಮಚ್ಚೆ ಇರುವುದು ಅದೃಷ್ಟವನ್ನು ಸೂಚಿಸುತ್ತದೆ. ಇವರು ಅದೃಷ್ಟದಲ್ಲಿ ಬಹಳ ಶ್ರೀಮಂತರು. ಇವರು ಯಾವ ಕೆಲಸ ಮಾಡಿದರೂ ಯಶಸ್ಸು ಕೈ ಹಿಡಿಯುತ್ತದೆ. ಅವರಿಗೆ ಪ್ರತಿ ಹೆಜ್ಜೆಯಲ್ಲೂ ಅದೃಷ್ಟದ ಬೆಂಬಲ ಸಿಗುತ್ತದೆ.
ಇದನ್ನೂ ಓದಿ : Morning Tips: ಬೆಳಗ್ಗೆ ಎದ್ದ ಕೂಡಲೇ ಅಪ್ಪಿತಪ್ಪಿಯೂ ಕನ್ನಡಿ ನೋಡಬೇಡಿ.!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.