ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಯಾವುದೇ ಗ್ರಹವು ಅಸ್ತವಾದಾಗ ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರಸ್ತುತ, ಗ್ರಹಗಳ ರಾಜಕುಮಾರ, ಬುಧ ಅಸ್ತವಾಗಿದೆ (Budha Asta). ಬುಧ ಗ್ರಹ ಮಾರ್ಚ್ 14, ರಂದು ಸೋಮವಾರ ಬೆಳಿಗ್ಗೆ 05:53 ಕ್ಕೆ ಅಸ್ತವಾಗಿದೆ. ಮತ್ತೆ ಏಪ್ರಿಲ್ 12, 2022 ರ ಮಂಗಳವಾರ ಸಂಜೆ 07:32 ಕ್ಕೆ ಬುಧ ಉದಯವಾಗಲಿದೆ. ಬುಧ ಅಸ್ತವು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ (Budha Asta effects). 


COMMERCIAL BREAK
SCROLL TO CONTINUE READING

ಮೇಷ (Aries): ಬುಧ ಮೇಷ ರಾಶಿಯ 11 ನೇ ಮನೆಯಲ್ಲಿ ಅಸ್ತಮಿಸಿದ್ದಾನೆ (Mercury Set 2022). ಆದ್ದರಿಂದ, ನೀವು ಕೆಲಸ ಮತ್ತು ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದಾಯದಲ್ಲಿ ಇಳಿಕೆ ಕಂಡು ಬರಬಹುದು.  ವ್ಯಾಪಾರಿಗಳ ಯಾವುದೇ ಡೀಲ್  ಅಂತಿಮಗೊಳ್ಳುವವರೆಗೆ ಬಂದು ನಿಂತು ಬಿಡಬಹುದು. ಹಾಗಾಗಿ ಈ ಸಂದರ್ಭದಲ್ಲಿ  ಹಣ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ.


ಇದನ್ನೂ ಓದಿ : ಜೀವನದಲ್ಲಿ ಈ ಜನರಿಗೆ ತೊಂದರೆ ಕೊಟ್ಟರೆ ಕಷ್ಟಗಳ ಪರ್ವತವೇ ಮೇಲೆರಗಬಹುದು.! ಮುನಿಸಿಕೊಳ್ಳಲಿದ್ದಾಳೆ ಲಕ್ಷ್ಮೀ


ವೃಷಭ ರಾಶಿ (Taurus):  ಬುಧಗ್ರಹದ ಅಸ್ತವು ವೃಷಭ ರಾಶಿಯವರಿಗೆ ಭಾರೀ ಕಷ್ಟಗಳನ್ನು ತಂದೊಡ್ಡಬಹುದು (Budha Asta effects). ಬುಧ ನಿಮ್ಮ ರಾಶಿಯ ಉದ್ಯೋಗ ಮತ್ತು ವೃತ್ತಿಯ ಮನೆಯಲ್ಲಿ ಅಸ್ತನಾಗಿದ್ದಾನೆ. ಇದರಿಂದಾಗಿ ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗಾವಕಾಶಗಳು ಕೈತಪ್ಪಿ ಹೋಗಬಹುದು. ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ. ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧಗಳು ಹದಗೆಡಬಹುದು. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ನೀವು ನಿರೀಕ್ಷಿಸಿದ ಫಲವನ್ನು ಪಡೆಯುವುದು ಸಾಧ್ಯವಾಗದೇ ಇರಬಹುದು. 


ಮಿಥುನ (Gemini) : ಬುಧನು ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಅಸ್ತನಾಗಿದ್ದಾನೆ. ಒಂಬತ್ತನೇ ಮನೆಯನ್ನು ಅದೃಷ್ಟ ಮತ್ತು ವಿದೇಶಿ ಪ್ರಯಾಣದ ಸ್ಥಾನ ಎಂದು  ಪರಿಗಣಿಸಲಾಗುತ್ತದೆ. ಬುಧ ಗ್ರಹದ ಪ್ರಭಾವದಿಂದ ಏಪ್ರಿಲ್ 12 ರವರೆಗೆ ಅದೃಷ್ಟ ಕಡಿಮೆಯಾಗಲಿದೆ. ಕೈ ಹಾಕುವ ಕೆಲಸಗಳೆಲ್ಲವೂ ಹಾಳಾಗಬಹುದು (Mercury se effects). ಬುಧದ ಅಸ್ತ ಕಾಲದ ಸಮಯದಲ್ಲಿ ನೀವು ದಾಖಲೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯವಹಾರದಲ್ಲಿನ ಯಾವುದೇ ಒಪ್ಪಂದವು ಕೊನೆ ಘಳಿಗೆಯಲ್ಲಿ ಕೈ ತಪ್ಪಬಹುದು.  ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು.


ಇದನ್ನೂ ಓದಿ : ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸಿ ಬಿಡುತ್ತಾರೆ ಈ ಮೂರು ರಾಶಿಯವರು ..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.