ಬೆಂಗಳೂರು : ಮಾರ್ಚ್ 24 ರಂದು ಮೀನ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ (Mercury Transit). ಮಾರ್ಚ್ 15 ರಂದು, ಸೂರ್ಯನು ಮೀನ ರಾಶಿಯಲ್ಲಿ ಸಂಕ್ರಮಣವಾಗಿದೆ (Budha rashi parivarthane). ಮಾರ್ಚ್ 24 ರಂದು ಅಂದರೆ ಇಂದು ಬುಧನ ಪ್ರವೇಶ ಕೂಡಾ ಮೀನ ರಾಶಿಯಲ್ಲಿ ಆಗಿದೆ. ಈ ಎರಡೂ ಗ್ರಹಗಳು ಏಪ್ರಿಲ್ ವರೆಗೆ ಮೀನ ರಾಶಿಯಲ್ಲಿ ಇರುತ್ತವೆ. ಜ್ಯೋತಿಷ್ಯದ ಪ್ರಕಾರ ಮೀನ ರಾಶಿಯಲ್ಲಿ ಬುಧಾದಿತ್ಯ ಯೋಗವು ಸೃಷ್ಟಿಯಾಗುವುದರಿಂದ ಐದು ರಾಶಿಯವರಿಗೆ ಅಗಾಧವಾದ ಲಾಭಗಳಾಗಲಿವೆ (Budhadhitya yoga). 


COMMERCIAL BREAK
SCROLL TO CONTINUE READING

ವೃಷಭ ರಾಶಿ :  ವೃಷಭ ರಾಶಿಯ (Taurus) ಜನರ ಆದಾಯದಲ್ಲಿ ಹೆಚ್ಚಳವಾಗುವ ಬಲವಾದ ಅವಕಾಶಗಳಿವೆ. ಈ ಸಮಯದಲ್ಲಿ  ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. 15 ದಿನಗಳವರೆಗೆ, ಹಣಕಾಸಿನ ಲಾಭವಾಗಲಿದೆ. 


ಇದನ್ನೂ ಓದಿ : ಮರೆತು ಕೂಡ ತುಳಸಿಯ ಸುತ್ತ ಈ 5 ವಸ್ತುಗಳನ್ನು ಇಡಬೇಡಿ.. ಕೆಟ್ಟ ದಿನಗಳನ್ನು ಎದುರಿಸಬೇಕಾದೀತು, ಎಚ್ಚರ!


ಮಿಥುನ : ಸೂರ್ಯ-ಬುಧ ಗ್ರಹಗಳ ಅನುಗ್ರಹದಿಂದ ಮಿಥುನ ರಾಶಿಯವರಿಗೆ (Gemini)ಬಹಳಷ್ಟು ಲಾಭವಾಗಲಿದೆ. ವ್ಯಾಪಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹಠಾತ್ ಹಣ ಲಾಭವಾಗಲಿದೆ. ಖರ್ಚುಗಳು ನಿಯಂತ್ರಣದಲ್ಲಿರುತ್ತವೆ.


ಕರ್ಕಾಟಕ : ಬುಧಾದಿತ್ಯ ಯೋಗವು (Budhadhitya yoga)ಕರ್ಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ಸಮಯದಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಅವಕಾಶಗಳಿವೆ. ವಿದೇಶಕ್ಕೆ ಹೋಗುವ ಅವಕಾಶವೂ ಇರಬಹುದು. ಇಂದಿನಿಂದ 15 ದಿನಗಳವರೆಗೆ  ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ. 


ಇದನ್ನೂ ಓದಿ : ಈ ರಾಶಿಯವರ ಮೇಲೆ ಹಣದ ಹೊಳೆಯೇ ಹರಿಸಲಿದ್ದಾನೆ ಶುಕ್ರ


ಕನ್ಯಾ : ಬುಧಾದಿತ್ಯ ಯೋಗವು ಈ ರಾಶಿಯವರಿಗೆ ಫಲಕಾರಿಯಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಅಪಾರ ಲಾಭವನ್ನು ಗಳಿಸಬಹುದು.


ಕುಂಭ : ಬುಧಾದಿತ್ಯ ಯೋಗದ ರಚನೆಯು ಕುಂಭ ರಾಶಿಯವರಿಗೆ (Aquarius) ಶುಭವಾಗಲಿದೆ. ಆರ್ಥಿಕ ಲಾಭವಾಗಲಿದೆ. ಈ ಸಮಯದಲ್ಲಿ ಸಾಲದಿಂದ ಮುಕ್ತರಾಗಬಹುದು. ಸಂಬಂಧಿಕರ ಬೆಂಬಲ ಸಿಗಲಿದೆ. ಆದರೆ ಯಾವುದೇ ವಿಷಯಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.