ಹರ್ಬಲ್ ಟೀ ಸೇವನೆಯಿಂದ ಸಿಗುತ್ತೆ ಸಾಕಷ್ಟು ಪ್ರಯೋಜನ
Herbal Tea`s Recipe For Healthy Skin: ಹರ್ಬಲ್ ಟೀ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎಂದು ನಾವು ಕೇಳಿಯೇ ಇದ್ದೇವೆ. ಹರ್ಬಲ್ ಟೀ ಎಂದೊಡನೆ ಸಹಜವಾಗಿ ನೆನಪಾಗುವ ಹೆಸರು ಎಂದರೆ ಗ್ರೀನ್ ಟೀ. ಆದರೆ, ಗ್ರೀನ್ ಟೀ ಮಾತ್ರವಲ್ಲ ಇನ್ನೂ ಹಲವು ಗಿಡಮೂಲಿಕೆ ಚಹಾಗಳೂ ಇವೆ. ಇಂದು ನಾವು ನಿಮಗಾಗಿ ಹರ್ಬಲ್ ಟೀ ರೆಸಿಪಿಗಳನ್ನು ತಂದಿದ್ದೇವೆ. ನೀವು ಹರ್ಬಲ್ ಟೀ ಅನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.
ಆರೋಗ್ಯಕ್ಕೆ ಹರ್ಬಲ್ ಟೀ: ನಮ್ಮಲ್ಲಿ ಬಹಳಷ್ಟು ಮಂದಿ ಚಹಾ ಪ್ರಿಯರಿದ್ದಾರೆ. ಟೀ ಕುಡಿಯುವುದರಿಂದ ಒಂದು ರೀತಿಯ ಚೈತನ್ಯ ಹೆಚ್ಚುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಕೆಲವರಿಗೆ ಚಹಾ ಎಷ್ಟರ ಮಟ್ಟಿಗೆ ಅಭ್ಯಾಸ ಆಗಿರುತ್ತೆ ಎಂದರೆ ದಿನಕ್ಕೆ ಹಲವು ಬಾರಿ ಚಹಾ ಕುಡಿಯುತ್ತಾರೆ. ಆದರೆ, ಅತಿಯಾದ ಚಹಾ ಆರೋಗ್ಯಕ್ಕೆ ಹಾನಿಕಾರಕ. ಈ ಕಾರಣಕ್ಕಾಗಿ ಕೆಲವರು ಟೀ ಕುಡಿಯುವುದರಿಂದ ಅಂತರ ಕಾಯ್ದುಕೊಳ್ಳುವುದೂ ಉಂಟು. ಇನ್ನೂ ಕೆಲವು ತೂಕನಷ್ಟ ಸೇರಿದಂತೆ ಹಲವು ಆರೋಗ್ಯಕರ ಪ್ರಯೋಜನಗಳ ದೃಷ್ಟಿಯಿಂದ ಹರ್ಬಲ್ ಟೀ ಕುಡಿಯುತ್ತಾರೆ. ಇಂದು ನಾವು ನಿಮಗಾಗಿ ಹರ್ಬಲ್ ಟೀ ರೆಸಿಪಿಗಳನ್ನು ತಂದಿದ್ದೇವೆ. ನೀವು ಹರ್ಬಲ್ ಟೀ ಅನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.
ಹರ್ಬಲ್ ಟೀ, ಗಿಡಮೂಲಿಕೆ ಚಹಾ ಎಂದೊಡನೆ ಮೊದಲು ನೆನಪಾಗುವುದು ಗ್ರೀನ್ ಟೀ. ಆದರೆ, ಗ್ರೀನ್ ಟೀ ಮಾತ್ರವಲ್ಲ ಇನ್ನೂ ಹಲವು ಗಿಡಮೂಲಿಕೆ ಚಹಾಗಳೂ ಇವೆ. ಇದನ್ನು ಕುಡಿಯುವುದರಿಂದ ತ್ವಚೆ ಮತ್ತು ಕೂದಲು ಕೂಡ ಆರೋಗ್ಯಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆ ಚಹಾಗಳು ಯಾವುವು? ಅವುಗಳನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ...
ಗ್ರೀನ್ ಟೀ:
ಹಸಿರು ಚಹಾ ಎಂದರೆ ಗ್ರೀನ್ ಟೀ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ತೂಕ ನಷ್ಟಕ್ಕೆ ಪ್ರಯತ್ನಿಸುವವರು ಗ್ರೀನ್ ಟೀ ಕುಡಿಯುತ್ತಾರೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಗ್ರೀನ್ ಟೀ ತಯಾರಿಸಲು, ಮೊದಲು ನೀವು ಬಾಣಲೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು, ನಂತರ ಅದಕ್ಕೆ ಗ್ರೀನ್ ಟೀ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಕುದಿಸಬೇಕು. ಅದು ಕುದಿಯುವಾಗ ಗ್ಯಾಸ್ ಅನ್ನು ಆಫ್ ಮಾಡಿ. ಬಳಿಕ ಅದನ್ನು ಸೋಸಿ ಕುಡಿಯಿರಿ.
ಇದನ್ನೂ ಓದಿ- Health Tips: ಈ 5 ಕಾಯಿಲೆಗಳಿಗೆ ತುಳಿಸಿ ಎಲೆ ರಾಮಬಾಣ
ಪುದೀನಾ ಟೀ:
ಪುದೀನಾ ಟೀ ಸೇವನೆ ಮಾಡುವುದರಿಂದ ತ್ವಚೆ ಆರೋಗ್ಯವಾಗಿರುತ್ತದೆ. ಇದನ್ನು ಕುಡಿಯುವುದರಿಂದ ಚರ್ಮಕ್ಕೆ ತಂಪು ಸಿಗುತ್ತದೆ. ಇದನ್ನು ಮಾಡಲು, ನಿಮಗೆ 8-10 ಪುದೀನ ಎಲೆಗಳು, ಕರಿಮೆಣಸು, ಕಪ್ಪು ಉಪ್ಪು, 2 ಕಪ್ ನೀರು ಬೇಕು. ಬಾಣಲೆಯಲ್ಲಿ ನೀರು ಹಾಕಿ ಕುದಿಸಿ ನಂತರ ಅದಕ್ಕೆ ಮೆಂತೆ ಸೊಪ್ಪು, ಕರಿಮೆಣಸು, ಕಪ್ಪು ಉಪ್ಪನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿ. ನಿಮ್ಮ ಪುದೀನ ಚಹಾ ಸಿದ್ಧವಾಗಿದೆ.
ಗುಲಾಬಿ ಚಹಾ:
ಪ್ರತಿದಿನ ಗುಲಾಬಿ ಚಹಾ ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಮಾಡಲು, ನಿಮಗೆ ಬೇಕಾಗಿರುವುದು ಹೊಸದಾಗಿ ಕತ್ತರಿಸಿದ ಗುಲಾಬಿ ದಳಗಳು, ನೀರು ಮತ್ತು ಜೇನುತುಪ್ಪ.
ಇದನ್ನೂ ಓದಿ- ಬಾಯಿಗೆ ಸಂಬಂಧಿಸಿದ ಈ ಲಕ್ಷಣಗಳು ಕಂಡು ಬಂದರೆ ಹುಷಾರಾಗಿರಿ, ಇದು ಮಾರಣಾಂತಿಕವೂ ಆಗಿರಬಹುದು!
ಗುಲಾಬಿ ಚಹಾ ತಯಾರಿಸಲು ಮೊದಲು ಗುಲಾಬಿ ದಳಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಈಗ ಬಾಣಲೆಯಲ್ಲಿ ನೀರನ್ನು ಬಿಸಿ ಮಾಡಿ ಅದರಲ್ಲಿ ಗುಲಾಬಿ ದಳಗಳನ್ನು ಹಾಕಿ. ಆದರೆ ಅದನ್ನು ಕುದಿಸಬಾರದು ಎಂಬುದನ್ನು ನೆನಪಿಡಿ. ಸ್ವಲ್ಪ ಸಮಯದ ನಂತರ, ಅದನ್ನು ಒಂದು ಕಪ್ನಲ್ಲಿ ಫಿಲ್ಟರ್ ಮಾಡಿ ಮತ್ತು ಜೇನುತುಪ್ಪವನ್ನು ಸೇರಿಸಿ ನಂತರ ಸವಿಯಿರಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.