ನವದೆಹಲಿ : ಮಕ್ಕಳಿಗೆ ಚಾಕೋಲೇಟ್ ಅಂದರೆ ಬಹಳ ಇಷ್ಟ ಆಗಬಹುದು.  ಹೊರಗಡೆಯ ಚಾಕಲೇಟ್ ಆರೋಗ್ಯಕ್ಕೆ ಹಿತವಾಗದೇ ಹೋಗಬಹುದು. ನಾವಿಂದು ನಿಮಗೆ ಒಂದು ವಿಶೇಷ ರೆಸಿಪಿ ಹೇಳುತ್ತೇವೆ. ಬಹಳ ಸುಲಭ. ತುಂಬಾ ಸಾಮಾಗ್ರಿಗಳ ಅಗತ್ಯವೂ ಇಲ್ಲ. ಕೇವಲ ಎರಡೇ ಎರಡು ಸಾಮಾಗ್ರಿಗಳಿಂದ ಮನೆಯಲ್ಲಿಯೇ ಮಿಲ್ಕ್ ಚಾಕೋಲೇಟ್ (Milk chocolate recipe) ಮಾಡಬಹುದು.  ಮಿಲ್ಕ್ ಚಾಕಲೇಟ್ ಮಾಡುವುದು ಹೇಗೆ ಕಲಿಯೋಣ.


COMMERCIAL BREAK
SCROLL TO CONTINUE READING

ಬೇಕಾದ ಸಾಮಾಗ್ರಿ
ಮಿಲ್ಕ್ ಚಾಕಲೇಟ್ ಮಾಡಲು ಕೇವಲ ಎರಡು ಸಾಮಾಗ್ರಿ ಸಾಕು. 
1. ಕಂಡೆನ್ಸಡ್ ಮಿಲ್ಕ್ : 180 ಗ್ರಾಂ ಕಂಡೆನ್ಸಡ್ ಮಿಲ್ಕ್ (Condensed milk) ಸಾಕು.  ಕಂಡೆನ್ಸಡ್ ಮಿಲ್ಕ್ ಮಾಡುವುದು ಗೊತ್ತಿದ್ದರೆ, ಮನೆಯಲ್ಲೇ ಮಾಡಬಹುದು. ಕಷ್ಟ ಆಗುತ್ತದೆ ಎಂದಾದರೆ ಮಾರುಕಟ್ಟೆಯಿಂದಲೂ ನೀವು ಖರೀದಿಸಿ ತರಬಹುದು. 
2. ಕೋಕೋ ಪೌಡರ್.
ನಿಮಗೆ ಇಷ್ಟವಾಗುವ ಯಾವುದೇ ಕೋಕೋ ಪೌಡರ್ ( Coca powder) ತೆಗೆದುಕೊಳ್ಳಿ.  ಇಲ್ಲಿ ನಿಮಗೆ 60 ಗ್ರಾಂ ಕೋಕೋ ಪೌಡರ್ ಸಾಕು. 


ಇದನ್ನೂ ಓದಿ :  Monsoon Food : ಮಳೆಗಾಲದಲ್ಲಿ ರೋಗಗಳಿಂದ ದೂರವಿರಬೇಕೇ? ಹಾಗಿದ್ರೆ ಆಹಾರದಲ್ಲಿ ಈ ಬದಲಾವಣೆ ಇರಲಿ!


ಮಾಡುವ ವಿಧಾನ
1. ಕಂಡೆನ್ಸಡ್ ಹಾಲನ್ನು ಒಲೆ ಅಥವಾ ಮೈಕ್ರೋಓವೆನ್ ಮೇಲಿಟ್ಟು ಉಕ್ಕುವ ತನಕ ಬಿಸಿ ಮಾಡಿ ಸಾಕು.  ಎಚ್ಚರವಹಿಸಿ ಹಾಲು ಅಧಿಕ ಬಿಸಿ ಆಗಬಾರದು.  ಹಾಲು ತುಂಬಾ ಬಿಸಿಯಾಗಿ ದಪ್ಪ ಆಗಬಾರದು. ಈ ವಿಧಾನವನ್ನು ನೀವು ವಿಶೇಷವಾಗಿ ಗಮನಿಸಿ ಮಾಡಬೇಕು. 
2. ಕೋಕೋ ಪೌಡರ  ಅನ್ನು ಕಂಡೆನ್ಸಡ್ ಹಾಲಿನಲ್ಲಿ ಜರಡಿ ಹಿಡಿದು ಹಾಕಿ.  ಒಂದೇ ಸಲ ಹಾಕಬೇಡಿ. ಸ್ಪಲ್ಪ ಸ್ವಲ್ಪವೇ ಹಾಕುತ್ತಿರಿ. ಹಾಕಿ ತಿರುಗಿಸುತ್ತಲೇ ಇರಿ. ಎಚ್ಚರ ವಹಿಸಿ. ಅಂದು ಉಂಡೆ ಉಂಡೆ ಆಗಬಾರದು. 
3. ಮಿಕ್ಸ್ ಮಾಡಲು ಕಷ್ಟ ಆದರೆ ಒಂದು ಚಾಕು ತರಹದ ಉಪಕರಣ ಬಳಸಿ. ಅದನ್ನು ಒಂದು  ಮೃದುವಾದ ಹಿಟ್ಟಿನ  ಉಂಡೆಯ ತರದಲ್ಲಿ ರೋಲ್ ಮಾಡಿ.  ತುಂಬಾ ಅಂಟು ಅಂಟಾಗಿದ್ದರೆ ಕೋಕೋ ಪೌಡರ್ ಸ್ವಲ್ಪ ಸೇರಿಸಿ. ತುಂಬಾ ಗಟ್ಟಿಯಾಗಿದೆ ಎಂದು ಕೊಂಡರೆ ಸ್ವಲ್ಪ ಕಂಡೆನ್ಸಡ್ ಹಾಲು ಹಾಕಿ. 


ಇದನ್ನೂ ಓದಿ :  ಈ ಮುನ್ನೆಚ್ಚರಿಕೆ ಇರಲಿ..! ಮಳೆಗಾಲದ ವೈರಲ್ ಫ್ಲೂ ನಿಂದ ಬಚಾವ್ ಆಗಿ


4. ಒಂದು ಆಯತಾಕರದ ಮೋಲ್ಡ್ ಅಥವಾ ಬೇಕಿಂಗ್ ಟ್ರೇ ಬಳಸಿ ಅದರಲ್ಲಿ ಹಿಟ್ಟನ್ನು ಸಮಾನವಾಗಿ ಹರಡಿ. ಬೆರಳುಗಳಿದ ಒತ್ತಿ ಅದನ್ನು ಸರಿಮಾಡಿ. 
5. ಮೂರು ಗಂಟೆ ಅದನ್ನು ಫ್ರೀಜರ್ ನಲ್ಲಿ (frizzer) ತಣ್ಣಗಾಗಲು ಬಿಡಿ
6. ನಂತರ ಅದನ್ನು ಫ್ರಿಜ್ ನಿಂದ (fridge) ಹೊರಗೆ ತೆಗೆಯಿರಿ. ಟಾಪಿಂಗ್ ಮಾಡುವುದು ಅನಿವಾರ್ಯವಲ್ಲ. ಬೇಕಾದರೆ ಸ್ವಲ್ಪ ಕೋಕೋ ಪೌಡರ್ ಅಥವಾ ಸಕ್ಕರೆ ಪೌಡರ್ (sugar powder) ಸಿಂಪಡಿಸಿ. ನಂತರ ಅದನ್ನು ಅಚ್ಚುಕಟ್ಟಾಗಿ ತುಂಡುಗಳಾಗಿ ಕಟ್ ಮಾಡಿ. 
7. ನಿಮ್ಮ ಮಿಲ್ಕ್ ಚಾಕಲೇಟ್ (milk chocolate) ಈಗ ರೆಡಿ. ಬೇಕಾದರೆ ನೀವು ಅದನ್ನು ಒಂದು ವಾರ ಅಥವಾ ಒಂದು ತಿಂಗಳೂ ಫ್ರಿಜ್ನಲಲ್ಲಿಟ್ಟು ತಿನ್ನಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.