ಈ ಬೀಜವನ್ನು ಹೀಗೆ ಸೇವಿಸಿ ನೋಡಿ, ಜೋತು ಬಿದ್ದ ಹೊಟ್ಟೆ ಸ್ಲಿಂ ಆಗುವುದು ಪಕ್ಕಾ !
Chia Seeds For Weight Loss: ತೂಕ ನಷ್ಟಕ್ಕೆ, ಚಿಯಾ ಬೀಜಗಳನ್ನು ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು.
Chia Seeds For Weight Loss : ಚಿಯಾ ಬೀಜಗಳ ಸೇವನೆಯು ದೇಹಕ್ಕೆ ತುಂಬಾ ಆರೋಗ್ಯಕರವಾಗಿದೆ. ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಸತು, ರಂಜಕ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ತೂಕ ನಷ್ಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿಡಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಇದು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.ತೂಕ ನಷ್ಟಕ್ಕೆ,ಚಿಯಾ ಬೀಜಗಳನ್ನು ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು.
ತೂಕ ನಷ್ಟಕ್ಕೆ ಚಿಯಾ ಸೀಡ್ಸ್ ನೀರು :
ತೂಕ ನಷ್ಟಕ್ಕೆ ಚಿಯಾ ಬೀಜಗಳ ನೀರನ್ನು ಸೇವಿಸಬಹುದು. ಇದನ್ನು ಮಾಡಲು, ಒಂದು ಚಮಚ ಚಿಯಾ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.ಪ್ರತಿನಿತ್ಯ ಈ ನೀರನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಬಹುದು.
ಇದನ್ನೂ ಓದಿ : ಬೆವರಿನ ದುರ್ವಾಸನೆಯಿಂದ ಮುಕ್ತಿಗಾಗಿ ಸರಳ ಮನೆಮದ್ದುಗಳು
ತೂಕ ನಷ್ಟಕ್ಕೆ ಚಿಯಾ ಸೀಡ್ಸ್ ಸ್ಮೂಥಿ :
ತೂಕ ನಷ್ಟಕ್ಕಾಗಿ ಬಳಸುವ ಸ್ಮೂಥಿಗಳಿಗೆ ಚಿಯಾ ಬೀಜಗಳನ್ನು ಬಳಸಬಹುದು. ಇದಕ್ಕಾಗಿ ನಿಮಗಿಷ್ಟವಾದ ಹಣ್ಣುಗಳು ಮತ್ತು ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದರಲ್ಲಿ ಒಂದು ಚಮಚ ನೆನೆಸಿದ ಚಿಯಾ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬೆಳಗ್ಗಿನ ಉಪಾಹಾರವಾಗಿ ಸೇವಿಸಬಹುದು.
ಸಲಾಡ್‌ನಲ್ಲಿ ಚಿಯಾ ಬೀಜಗಳನ್ನು ಬಳಸಿ :
ತೂಕ ನಷ್ಟಕ್ಕೆ, ಸಲಾಡ್‌ನಲ್ಲಿ ಚಿಯಾ ಬೀಜಗಳನ್ನು ಬೆರೆಸಿ ತಿನ್ನಬಹುದು. ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಇದಕ್ಕಾಗಿ ಸಲಾಡ್ ಮೇಲೆ 1-2 ಚಮಚ ಚಿಯಾ ಬೀಜಗಳನ್ನು ಹಾಕಿ ತಿನ್ನಬಹುದು. ಬೇಕಾದಲ್ಲಿ ನಿಂಬೆ ರಸ ಮತ್ತು ಕರಿಮೆಣಸನ್ನು ಸಹ ಸಿಂಪಡಿಸಬಹುದು.
ಇದನ್ನೂ ಓದಿ : Weight Loss Remedies: ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆ? ಈ ಐದು ಮನೆ ಉಪಾಯಗಳನ್ನು ಟ್ರೈ ಮಾಡಿ ನೋಡಿ!
ತೂಕ ನಷ್ಟಕ್ಕೆ ಚಿಯಾ ಸೀಡ್ಸ್ ಪುಡಿಂಗ್ :
ಚಿಯಾ ಬೀಜಗಳ ಪುಡಿಂಗ್ ತೂಕ ನಷ್ಟಕ್ಕೆ ಆರೋಗ್ಯಕರ ಆಯ್ಕೆಯಾಗಿದೆ. ಇದನ್ನು ತಯಾರಿಸಲು ಒಂದು ಚಮಚ ಚಿಯಾ ಬೀಜಗಳನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಡಿ. ಇದಕ್ಕೆ ಹಣ್ಣುಗಳು, ಒಣ ಹಣ್ಣುಗಳು ಮತ್ತು ಬೀಜಗಳನ್ನು ಸೇರಿಸಿ ಮತ್ತು ಬೆಳಿಗ್ಗೆ ಸೇವಿಸಿ.ಇದು ತಿನ್ನಲು ರುಚಿಕರವಾಗಿರುವುದರ ಜೊತೆಗೆ ತೂಕವನ್ನು ಕಡಿಮೆ ಮಾಡುತ್ತದೆ.
ಓಟ್ಸ್ ಮತ್ತು ಚಿಯಾ ಬೀಜಗಳು :
ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವಿಸುವುದಾದರೆ ಅದರಲ್ಲಿ ಚಿಯಾ ಬೀಜಗಳನ್ನು ಕೂಡಾ ಬೆರೆಸಬಹುದು. ಓಟ್ಸ್‌ಗೆ ಚಿಯಾ ಬೀಜಗಳನ್ನು ಸೇರಿಸುವುದರಿಂದ ನಿಮ್ಮ ಬೆಳಗಿನ ಉಪಾಹಾರವು ಹೆಚ್ಚು ಪೌಷ್ಟಿಕವಾಗಿರುತ್ತದೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.