ನವದೆಹಲಿ: Chaitra Navaratri 2022 - ಹಿಂದೂ ಧರ್ಮದಲ್ಲಿ (Hindu Religion) ಚೈತ್ರ ಮಾಸಕ್ಕೆ (Chitra Month) ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್‌ನ ಹೊಸ ವರ್ಷವು ಇದೇ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ ಹೊಸ ಸಂವತ್ಸರದ ಆರಂಭವೂ ಇದೇ ತಿಂಗಳಿನಿಂದ ಆರಂಭವಾಗುತ್ತದೆ. ಇದಲ್ಲದೆ ಚೈತ್ರ ನವರಾತ್ರಿಯೂ ಈ ಮಾಸದಲ್ಲಿ ಬರುತ್ತದೆ. ಚೈತ್ರ ನವರಾತ್ರಿ ಏಪ್ರಿಲ್ 2 ರಿಂದ ಪ್ರಾರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚೈತ್ರ ನವರಾತ್ರಿಯಲ್ಲಿ 2 ಪ್ರಮುಖ ಗ್ರಹಗಳ ಸಂಯೋಗ ನಡೆಯಲಿದೆ. ಹೀಗಿರುವಾಗ ಚೈತ್ರ ನವರಾತ್ರಿಯಲ್ಲಿ (Chaitra Navaratri) ಗ್ರಹಗಳ ಸಂಯೋಗದ ಪ್ರಭಾವ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

ಶನಿ-ಮಂಗಳ ಸಂಚಾರ
ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಚೈತ್ರ ನವರಾತ್ರಿಯ ಸಮಯದಲ್ಲಿ ಗ್ರಹಗಳ ಸಂಯೋಜನೆಯು (Planetory Combination) ಕೆಲ ರಾಶಿಗಳ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ವಾಸ್ತವವಾಗಿ ಈ ಬಾರಿ ಚೈತ್ರ ನವರಾತ್ರಿಯಲ್ಲಿ ಗ್ರಹಗಳ ರಾಶಿ ಬದಲಾವಣೆಯೊಂದಿಗೆ ಇಡೀ ವರ್ಷ ಕೆಲವು ರಾಶಿಯವರಿಗೆ ತೊಂದರೆ ಉಂಟಾಗುವ ಕೆಲ ಯೋಗಗಳು ರೂಪಗೊಳ್ಳಲಿವೆ. ಈ ಗ್ರಹಗಳ ಚಲನೆ ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಮೇಲೆ ವಿಭಿನ್ನ ರೀತಿಯಲ್ಲಿ ಪರಭಾವ ಬೀರಲಿದೆ. ಚೈತ್ರ ನವರಾತ್ರಿಯಲ್ಲಿ ಶನಿ (Shani Gochar 2022) ಮತ್ತು ಮಂಗಳರ (Mangal Rashi Parivartan) ಸಂಯೋಜನೆ ವಿಶೇಷ ಪ್ರಭಾವ ಬೀರಲಿದೆ.


ಇದನ್ನೂ ಓದಿ-ಭಾನುವಾರ ಮಾಡುವ ಈ ಕೆಲಸಗಳಿಂದ ದಾರಿದ್ರ್ಯ ಕಾಡುತ್ತದೆಯಂತೆ ..!

ಯಾವ ರಾಶಿಚಕ್ರದ ಜನರ ಮೇಲೆ ಏನು ಪ್ರಭಾವ?
ಜ್ಯೋತಿಷ್ಯ ಶಾಸ್ತ್ರದ ತಜ್ಞರ ಪ್ರಕಾರ, ಶನಿ ಮತ್ತು ಮಂಗಳರ ಸಂಯೋಜನೆ ಮಕರರಾಶಿಯಲ್ಲಿ ನೆರವೇರಲಿದೆ. ವಾಸ್ತವದಲ್ಲಿ, ಶನಿ ಮತ್ತು ಮಂಗಳ ಎರಡೂ ಗ್ರಹಗಳನ್ನು ಶತ್ರು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಯೋಗವು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕನ್ಯಾ, ಕರ್ಕ ಮತ್ತು ಧನು ರಾಶಿಯವರು ಶನಿ-ಮಂಗಳ ಸಂಯೋಜನೆಯ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇದೇ ವೇಳೆ, ಮೇಷ, ಮಕರ ಮತ್ತು ಕುಂಭ ರಾಶಿಯ ಜನರು ಈ ಸಂಯೋಜನೆಯಿಂದ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದಲ್ಲದೆ ಮೀನದಲ್ಲಿ ಸೂರ್ಯ, ಬುಧನೊಂದಿಗೆ ಮೇಷದಲ್ಲಿ ಚಂದ್ರ, ವೃಷಭದಲ್ಲಿ ರಾಹು ಮತ್ತು ವೃಶ್ಚಿಕದಲ್ಲಿ ಕೇತು. ಗ್ರಹಗಳ ಸ್ಥಾನವು ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಹೀಗಿರುವಾಗ, ಮಂಗಳ-ಶನಿ ಋಣಾತ್ಮಕ ಪರಿಣಾಮ ಬೀರಲಿರುವ ರಾಶಿಗಳ ಮೇಲಿನ ಪ್ರಭಾವಗಳು ಕಡಿಮೆಯಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-ಇಂದು ಉದಯಿಸಲಿರುವ ಗುರು ಈ ರಾಶಿಯವರಿಗೆ ನೀಡಲಿದ್ದಾನೆ ಸಂಕಷ್ಟ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.