Chaitra Navratri 2022 - ಚೈತ್ರ ನವರಾತ್ರಿಯ ಉತ್ಸವವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿಯ ಅಷ್ಠಮಿ ಹಾಗೂ ನವಮಿ ತಿಥಿಯಂದು ಕನ್ಯಾ ಪೂಜೆಯ ವಿಶೇಷ ಮಹತ್ವವಿದೆ. ನವರಾತ್ರಿಯ ದಿನಗಳಲ್ಲಿ ಕೆಲವರು ಸಪ್ತಮಿ ತಿಥಿಯವರೆಗೆ ವ್ರತ-ಉಪವಾಸ ಕೈಗೊಳ್ಳುತ್ತಾರೆ. ಇನ್ನೊಂದೆಡೆ ಕೆಲ ಭಕ್ತರು ಅಷ್ಠಮಿಯವರೆಗೆ ವೃತವನ್ನು ಆಚರಿಸಿ ನವಮಿಯ ದಿನ ಕನ್ಯಾ ಪೂಜೆ ನೆರವೇರಿಸುತ್ತಾರೆ. ಆದರೆ, ಹಲವು ಬಾರಿ ಅಷ್ಠಮಿ ಹಾಗೂ ನವಮಿ ತಿಥಿಗೆ ಸಂಬಂಧಿಸಿದಂತೆ ಜನರು ಗೊಂದಲದಲ್ಲಿರುತ್ತಾರೆ. ಹಾಗಾದರೆ ಬನ್ನಿ ಅಷ್ಠಮಿ ತಿಥಿ ಯಾವಾಗ ಮತ್ತು ಕನ್ಯಾ ಪೂಜೆ ನೆರವೇರಿಸುವ ಶುಭ ಮುಹೂರ್ತ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಅಷ್ಠಮಿ ತಿಥಿಯ ಶುಭ ಮುಹೂರ್ತ(Chaitra Navratri 2022 Ashtami)
ಪಂಚಾಂಗದ ಪ್ರಕಾರ ಅಷ್ಠಮಿ ತಿಥಿ ಏಪ್ರಿಲ್ 9 ರಂದು ಬೀಳುತ್ತಿದೆ ಅಂದರೆ ಶನಿವಾರದ ದಿನ. ಅಷ್ಠಮಿ ತಿಥಿಯನ್ನು ಸಾಮಾನ್ಯವಾಗಿ ದುರ್ಗಾಷ್ಠಮಿ ರೂಪದಲ್ಲಿ ಆಚರಿಸಲಾಗುತ್ತದೆ. ಏಪ್ರಿಲ್ 10 ರಂದು ರಾತ್ರಿ 1 ಗಂಗೆ 23ನಿಮಿಷಕ್ಕೆ ಅಷ್ಠಮಿ ತಿಥಿ ಕೊನೆಗೊಳ್ಳುತ್ತಿದೆ.

ದುರ್ಗಾ ಅಷ್ಠಮಿ ಪೂಜಾ ವಿಧಿ (Durga Ashtami Puja Vidhi)
ಅಷ್ಠಮಿ ತಿಥಿಯ ದಿನ ಬೆಳಗ್ಗೆ ಸ್ನಾನ ಮಾಡಿ ದೇವಿ ದುರ್ಗೆಗೆ ಪೂಜೆ ಸಲ್ಲಿಸಲು ಶುಭ್ರ ವಸ್ತ್ರಗಳನ್ನು ಧರಿಸಿ. ಪೂಜೆಗಾಗಿ ಚೌರಂಗದ ಮೇಲೆ ಒಂದು ಬಿಳಿ ಬಣ್ಣದ ವಸ್ರ ಹರಡಿ. ಇದಾದ ಬಳಿಕ ದೇವಿ ದುರ್ಗೆಯ ಭಾವಚಿತ್ರವನ್ನಿರಿಸಿ, ತುಪ್ಪದ ದೀಪ ಬೆಳಗಿ ಹಾಗೂ ದೇವಿಗೆ ಪುಷ್ಪಗಳನ್ನು ಅರ್ಪಿಸಿ. ಪೂಜೆಯ ಬಳಿಕ ದೇವಿ ದುರ್ಗೆಗೆ ಆರತಿಯನ್ನು ಬೆಳಗಿ.

ಕನ್ಯಾ ಪೂಜೆಯ ವಿಧಿ (Kanya Pujan Vidhi)
ಕನ್ಯಾ ಪೂಜೆಗಾಗಿ 2-10 ವರ್ಷ ವಯಸ್ಸಿನೋಳಗಿನ ಕನ್ಯೆಯರನ್ನು ಶ್ರದ್ಧೆಯಿಂದ ಆಮಂತ್ರಿಸಿ. ಕನ್ಯೆಯರು ಮನೆಯಲ್ಲಿ ಆಮಂತ್ರಿಸಿದ ನಂತರ, ಅವರಿಗೆ ಕುಳಿತುಕೊಳ್ಳಲು ಉಚಿತ ಸ್ಥಾನವನ್ನು ನೀಡಿ. ಇದಾದ ಬಳಿಕ ಹಾಲು, ಗಂಗಾಜಲ ಅಥವಾ ಶುದ್ಧ ನೀರಿನಿಂದ ಅವರ ಪಾದಗಳನ್ನು ತೊಳೆಯಿರಿ. ಕನ್ಯೆಯರ ಹಣೆಗೆ ಕುಂಕುಮದ ಬೊಟ್ಟು ಇಡಿ. ನಂತರ ಅವರ ಇಚ್ಛೆಗೆ ಅನುಗುಣವಾಗಿ ಅವರಿಗೆ ಭೋಜನವನ್ನು ನೀಡಿ. ಊಟದ ಬಳಿಕ ಅವರಿಗೆ ದಕ್ಷಿಣೆಯನ್ನು ನೀಡಿ, ಕಾಲು ಮುತ್ತಿ ಅವರ ಆಶೀರ್ವಾದ ಪಡೆಯಿರಿ.


ಇದನ್ನೂ ಓದಿ-Palmistry: ನಿಮ್ಮ ಅಂಗೈಯಲ್ಲೂ ಈ 3 ಸಂಗತಿಗಳಿವೆಯಾ? ಹಾಗಾದ್ರೆ, ನಿಮ್ಮ ಸಿರಿವಂತಿಕೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ

ಕನ್ಯಾ ಪೂಜೆಯ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಡಿ
>> ಕನ್ಯೆಯರ ವಯಸ್ಸು 2 ರಿಂದ 10 ವರ್ಷದೊಳಗಿರಬೇಕು.
>> ಕನ್ಯಾ ಪೂಜೆಯ ವೇಳೆ ಎಲ್ಲಾ ಕನ್ಯೆಯರ ಮುಖ ಪೂರ್ವ ದಿಕ್ಕಿನ ಕಡೆಗೆ ಇರಬೇಕು
>> ಕನ್ಯಾ ಪೂಜೆಯ ವೇಳೆ ಓರ್ವ ಬಾಲಕನನ್ನು ಕೂಡ ಕೂರಿಸಿ. ಏಕೆಂದರೆ ಬಾಲಕನನ್ನು ಭೈರವದ ರೊಪ ಎಂದೇ ಪರಿಗಣಿಸಲಾಗುತ್ತದೆ.
>> ಕನ್ಯಾ ಪೂಜೆಯ ವೇಳೆ ತಯಾರಿಸಲಾಗುವ ಪ್ರಸಾದದಲ್ಲಿ ಬೆಳ್ಳುಳ್ಳಿ, ಈರುಳ್ಳಿಗಳನ್ನು ಬಳಸಬೇಡಿ. ಇದಲ್ಲದೆ ಕನ್ಯೆಯರಿಗೆ ಉಣಬಡಿಸುವ  ಆಹಾರ ಶುದ್ಧ ಮತ್ತು ತಾಜಾ ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ-Ram Navami 2022: ರಾಮನವಮಿಯಂದು ಮಾಡಲಾಗುವ ಈ ಉಪಾಯಗಳಿಂದ ಮನೆ ಸುಖ-ಸಂಪತ್ತಿನಿಂದ ತುಂಬಿ ತುಳುಕಲಿದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆದರಿಸಿದ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.