Chaitra Navratri 2022: ನವರಾತ್ರಿಯ ಸಮಯದಲ್ಲಿ, ದೇವಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಈ ವರ್ಷ ಚೈತ್ರ ನವರಾತ್ರಿಯು ಏಪ್ರಿಲ್ 2 ರಿಂದ ಏಪ್ರಿಲ್ 11 ರವರೆಗೆ ಇರಲಿದೆ. ಶಾಸ್ತ್ರಗಳ ಪ್ರಕಾರ, ನವರಾತ್ರಿಯಲ್ಲಿ ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸುವ ಒಂದು ದಿನವಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಚೈತ್ರ ನವರಾತ್ರಿಯ ಯಾವ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ ಮತ್ತು ಲಕ್ಷ್ಮಿ ದೇವಿಯನ್ನು ಹೇಗೆ ಪೂಜಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.

COMMERCIAL BREAK
SCROLL TO CONTINUE READING

ಚೈತ್ರ ನವರಾತ್ರಿಯ ಐದನೇ ದಿನ ವಿಶೇಷ
ಅಂದಹಾಗೆ, ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಆದರೆ, ಚೈತ್ರ ನವರಾತ್ರಿಯ ಐದನೇ ದಿನ (Lakshmi Panchami 2022) ದೇವಿ ಲಕ್ಷ್ಮಿಗೆ ಸಂಬಂಧಿಸಿದೆ ಎಂಬುದು ಧಾರ್ಮಿಕ ನಂಬಿಕೆ. ಇಂತಹ ಸಂದರ್ಭದಲ್ಲಿ ಲಕುಮಿಯನ್ನು ಮೆಚ್ಚಿಸಲು ವಿಶೇಷ ಪೂಜೆ, ಹವನ ಮಾಡಲಾಗುತ್ತದೆ. ಚೈತ್ರ ಶುಕ್ಲ ಪಂಚಮಿಯ (Chaitra Navratri Lakshmi Panchami) ದಿನವು ಲಕ್ಷ್ಮಿ ದೇವಿಯನ್ನು ಪೂಜಿಸಲು ಉತ್ತಮವಾಗಿದೆ ಎಂದು ನಂಬಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ (Chtra Navratri Puja Vidhi) ವಿಶೇಷ ಲಾಭಗಳು ದೊರೆಯುತ್ತವೆ.

ಚೈತ್ರ ಶುಕ್ಲ ಪಂಚಮಿಯಂದು ದೇವಿ ಲಕ್ಷ್ಮಿಯನ್ನು ಹೇಗೆ ಪೂಜಿಸಬೇಕು?
ಚೈತ್ರ ಶುಕ್ಲ ಪಕ್ಷದ ಪಂಚಮಿ (Lakshmi Panchami 2022 Puja Vidhi) ತಿಥಿಯು ಲಕ್ಷ್ಮಿ ದೇವಿಯ ಆರಾಧನೆಗೆ ಬಹಳ ವಿಶೇಷವಾಗಿದೆ. ವಿಧಿ-ವಿಧಾನಗಳಿಂದ ಈ ದಿನ ಲಕ್ಷ್ಮಿ ದೇವಿಯನ್ನು (Goddess Lakshmi) ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಈ ದಿನ ಲಕ್ಷ್ಮಿ ದೇವಿಗೆ ಭತ್ತ, ಕಬ್ಬು, ಬೆಲ್ಲ, ಅರಿಶಿನ ಇತ್ಯಾದಿಗಳನ್ನು ಅರ್ಪಿಸಿ, ನಂತರ ಕಮಲದ ಹೂವುಗಳು ಮತ್ತು ಶ್ರೀಸೂಕ್ತದಿಂದ ಹವನ ಮಾಡಿ. ಕಮಲದ ಹೂವು ಲಭ್ಯವಿಲ್ಲದಿದ್ದರೆ, ಹವನವನ್ನು ಬಳ್ಳಿಯ ತುಂಡುಗಳಿಂದ ಅಥವಾ ತುಪ್ಪದಿಂದ ಮಾಡಬಹುದು. ಹವನದ ನಂತರ ಲಕ್ಷ್ಮಿ ದೇವಿಗೆ ಜೇನುತುಪ್ಪದ ಪದಾರ್ಥಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ತಾಯಿಯ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇದರೊಂದಿಗೆ ಸಿರಿ-ಸಂಪತ್ತಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.


ಇದನ್ನೂ ಓದಿ-ಕುಬೇರ ಯೋಗದಿಂದ ಭಾರೀ ಅದೃಷ್ಟ ಪಡೆಯಲಿವೆ ಈ ಮೂರು ರಾಶಿಗಳು.! ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ

ದೇವಿ ಲಕ್ಷ್ನಿಯ 8 ಸ್ವರೂಪಗಳು
ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಚೈತ್ರ ನವರಾತ್ರಿಯಲ್ಲಿ ಮಹಾಲಕ್ಷ್ಮಿಯ 8 ರೂಪಗಳನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಇದೇ ವೇಳೆ, ಸಿರಿ-ಸಂಪತ್ತು ಹೆಚ್ಚಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಲಕ್ಷ್ಮಿ ದೇವಿಯ ಎಂಟು ರೂಪಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಅಷ್ಟಲಕ್ಷ್ಮಿ ಎಂದು ಕರೆಯುತ್ತಾರೆ.


ಇದನ್ನೂ ಓದಿ-Vastu Shastra: ವಾಸ್ತು ಪ್ರಕಾರ ಮನೆಯಲ್ಲಿ ಈ 3 ವಿಶೇಷ ಬದಲಾವಣೆ ಮಾಡಿ, ಅದೃಷ್ಟವೇ ಬದಲಾಗುತ್ತೆ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.