Chanakya Niti: ಹುಂಜದ ಈ 4 ಅಭ್ಯಾಸಗಳಲ್ಲಡಗಿದೆ ಯಶಸ್ಸಿನ ಗುಟ್ಟು, ಅನುಸರಿಸುವವರಿಗೆ ಯಶಸ್ಸು ಗ್ಯಾರಂಟಿ
Chanakya Niti: ಜೀವನದಲ್ಲಿ ಯಶಸ್ಸು ಪಡೆಯಲು ಆಚಾರ್ಯ ಚಾಣಕ್ಯರು ಹೇಳಿರುವ ಒಂದು ಶ್ಲೋಕದಲ್ಲಿ ಹುಂಜದ 4 ಮಹತ್ವಪೂರ್ಣ ಗುಣಗಳ ಕುರಿತು ಬಣ್ಣಿಸಿದ್ದಾರೆ. ಒಂದು ವೇಳೆ ವ್ಯಕ್ತಿ ಹುಂಜದ ಈ ನಾಲ್ಕು ಗುಣಗಳನ್ನು ಅನುಸರಿಸಿದರೆ, ಆ ವ್ಯಕ್ತಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
Chanakya Niti: ವಿಶ್ವದ ಅತ್ಯುತ್ತಮ ವಿದ್ವಾಂಸರಲ್ಲಿ ಆಚಾರ್ಯ ಚಾಣಕ್ಯರು ಕೂಡ ಒಬ್ಬರು. ಇಂದಿಗೂ ಚಾಣಕ್ಯನ ನೀತಿಗಳು ಮಕ್ಕಳು, ಹಿರಿಯರು, ಯುವಕರು ಮತ್ತು ಮಹಿಳೆಯರಿಗೆ ತನ್ನ ಮಾರ್ಗದರ್ಶನವನ್ನು ನೀಡುತ್ತಿವೆ. ಚಾಣಕ್ಯ ಹೇಳುವಂತೆ ಯಾವುದೇ ಸಂದರ್ಭವಿರಲಿ ವ್ಯಕ್ತಿಯ ತನ್ನ ಆಲೋಚನೆಯಿಂದ ಮಾತ್ರ ತನ್ನ ಸಮಸ್ಯೆಯನ್ನು ಪರಿಹರಿಸಬಹುದು, ಆದ್ದರಿಂದ ಯಾವಾಗಲೂ ಧನಾತ್ಮಕವಾಗಿ ಆಲೋಚಿಸಿ. ಯಾರ ಆಲೋಚನೆಗಳು ಧನಾತ್ಮಕವಾಗಿರುತ್ತವೆ, ಅವರು ಎಂತಹ ಕಷ್ಟಕರವಾದ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಪಡೆಯುತ್ತಾರೆ. ಆಚಾರ್ಯ ಚಾಣಕ್ಯರು ಯಶಸ್ಸನ್ನು ಪಡೆಯಲು ಹುಂಜದ ನಾಲ್ಕು ಪ್ರಮುಖ ಗುಣಗಳ ಕುರಿತು ತನ್ನ ಶ್ಲೋಕದಲ್ಲಿ ಉಲ್ಲೇಖಿಸಿದ್ದಾರೆ. ಕೋಳಿಯ ಈ ನಾಲ್ಕು ಗುಣಗಳನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ ಎಂದು ಅವರು ಹೇಳಿದ್ದಾರೆ.
ಪ್ರತ್ಯುತ್ಥಾನಂಚ್ ಯುದ್ಧಾ ಚ ವಿಭಾಗಾನ್ ಚ ಬಂಧುಷು ।
ಶ್ವ್ಯಾಮಾಕ್ರಮ್ಯ ಭುಕ್ತಂ ಚ ಶಿಕ್ಷೇಚ್ಚತ್ವಾರಿ ಕುಕ್ಕುಟಾತ್ ।
ಸೂರ್ಯೋದಯಕ್ಕೆ ಮೊದಲು ಏಳುವುದು
ಬ್ರಹ್ಮ ಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಗುರಿಯನ್ನು ಸಾಧಿಸುವ ಮೊದಲ ಹೆಜ್ಜೆಯಾಗಿದೆ. ಪ್ರತಿದಿನ ಸೂರ್ಯೋದಯಕ್ಕೆ ಮುನ್ನ ಕೋಳಿ ಕೂಗುತ್ತದೆ. ಬೆಳಗ್ಗೆ ಸರಿಯಾದ ಸಮಯಕ್ಕೆ ಏಳುವ ವ್ಯಕ್ತಿಯು ತನ್ನ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯ. ಮುಂಜಾನೆ ಬೇಗ ಏಳುವುದರಿಂದ ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿಯ ಸಂಚಾರವಿರುತ್ತದೆ, ಇದರಿಂದಾಗಿ ದಿನವಿಡೀ ಆತ ಚೈತನ್ಯದಿಂದ ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ಕೆಚ್ಚೆದೆಯಿಂದ ಹೋರಾಟ ನಡೆಸಿ
ನೀವು ಕೂಡ ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸಿದರೆ, ಯಾವಾಗಲೂ ಜಾಗರೂಕರಾಗಿರಿ ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ ಎಂದು ಚಾಣಕ್ಯ ಹೇಳುತ್ತಾರೆ. ಅವುಗಳನ್ನು ಜಯಿಸಲು, ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೃಢವಾಗಿ ಎದುರಿಸಿ. ಹುಂಜ ಸದಾ ಎಚ್ಚರದಿಂದಿರುತ್ತದೆ ಮತ್ತು ಶತ್ರುವನ್ನು ಗ್ರಹಿಸಿದಾಗ ಯುದ್ಧಕ್ಕೆ ಸಿದ್ಧವಾಗುತ್ತದೆ ಮತ್ತು ನಂತರ ಯುದ್ಧದಲ್ಲಿ ಹಿಂದೆ ಸರಿಯುವುದಿಲ್ಲ, ಇದೆ ರೀತಿ ಯಾವುದೇ ರೀತಿಯ ತೊಂದರೆಗೆ ಹೆದರಬೇಡಿ. ಬಿಕ್ಕಟ್ಟು ಬಂದಾಗ ಅದನ್ನು ದೃಢವಾಗಿ ಎದುರಿಸುವ ವ್ಯಕ್ತಿ ಯಶಸ್ವಿಯಾಗುತ್ತಾನೆ.
ಇದನ್ನೂ ಓದಿ-Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ
ಕಠಿಣ ಆಹಾರ
ಪ್ರಾಮಾಣಿಕತೆ ಮತ್ತು ಶ್ರಮದಿಂದ ಸಿಗುವ ಹಣದಿಂದ ತೃಪ್ತರಾಗಬೇಕು. ಅವು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತವೆ. ಕಠಿಣ ಪರಿಶ್ರಮದ ಗಳಿಕೆ ಕಡಿಮೆ ಇರಬಹುದು ಆದರೆ ಅದು ಸಂತೋಷ ಮತ್ತು ಗೌರವ ನೀಡುತ್ತದೆ. ಇತರರ ಮೇಲೆ ಅವಲಂಬಿತರಾಗಬೇಡಿ. ಹುನ್ಜಗಳು ಹೊಟ್ಟೆ ತುಂಬಿಸಿಕೊಳ್ಳಲು ಯಾವಾಗಲು ಕಷ್ಟಪಡುತ್ತವೆ. ಜೀವನದಲ್ಲಿ ಕಷ್ಟಪಟ್ಟು ಸಿಗುವ ಹಣ್ಣಿನ ರುಚಿ ಅದೃಷ್ಟದಿಂದ ಸಿಗುವ ಹಣ್ಣಿನ ರುಚಿಗಿಂತ ಸಿಹಿಯಾಗಿರುತ್ತದೆ ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ-New Year 2023: ಅತ್ಯಂತ ಶುಭಯೋಗದಲ್ಲಿ ಹೊಸ ವರ್ಷದ ಆರಂಭ, ನೌಕರಿ-ವ್ಯಾಪಾರದಲ್ಲಿ ಯಶಸ್ಸಿಗಾಗಿ ಈ ಉಪಾಯ ಮಾಡಿ
ದುರಾಸೆಯಿಂದ ದೂರವಿರಿ, ಇತರರ ಭಾಗವನ್ನು ಕಸಿದುಕೊಳ್ಳಲು ಪ್ರಯತ್ನಿಸಬೇಡಿ
ಯಾರು ದುರಾಸೆಯನ್ನು ಮೀರಿ ತನ್ನ ಪಾಲಿಗೆ ಬಂದ ಹಣದಿಂದ ಕುಟುಂಬ ಮತ್ತು ಬಂಧುಗಳಿಗೆ ಸಂತೋಷದಿಂದ ನೀಡುತ್ತಾನೋ ಅವರು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. ಇದು ಹುಂಜದ ನಾಲ್ಕನೇ ಗುಣವಾಗಿದೆ. ಹುಂಜ ಯಾವಾಗಲೂ ತನ್ನ ಆಹಾರವನ್ನು ತನ್ನ ಗುಂಪಿನ ಇತರ ಸದಸ್ಯರೊಂದಿಗೆ ಹಂಚಿಕೊಂಡು ತಿನ್ನುತ್ತದೆ. ಒಬ್ಬರ ಕುಟುಂಬ, ಕೆಲಸ ಮತ್ತು ಸ್ನೇಹಿತರ ನಡುವೆ ಸರಿಯಾದ ಸಮತೋಲನವಿದ್ದರೆ, ಜೀವನದಲ್ಲಿ ಯಶಸ್ಸಿನ ಹಾದಿ ಸುಲಭವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.