ಬೆಂಗಳೂರು :   ಆಚಾರ್ಯ ಚಾಣಕ್ಯ ಮಹಾನ್ ತತ್ವಜ್ಞಾನಿ,  ರಾಜಕೀಯ ಬಲ್ಲವರು.. ಜೀವನಕ್ಕೆ ಅಗತ್ಯವಿರುವ ಪಾಠಗಳನ್ನು ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.  ಚಾಣಕ್ಯ, ತನ್ನ ನೀತಿಗಳ ಮೂಲಕ, ಜೀವನದಲ್ಲಿ ಎತ್ತರಕ್ಕೆ ಬೆಳೆಯುವುದು ಹೇಗೆ ಎನ್ನುವುದನ್ನು ಕೂಡಾ ಉಲ್ಲೇಖಿಸಿದ್ದಾರೆ.  ಅಲ್ಲದೆ, ತಮ್ಮ ನೀತಿಗಳಿಂದ ಸಮಾಜವನ್ನು ಉತ್ತಮಗೊಳಿಸಲು ಏನು ಮಾಡಬೇಕು ಎನ್ನುವುದನ್ನು ಕೂಡಾ ಅವರು ತಿಳಿಸಿದ್ದಾರೆ. ಆಚಾರ್ಯ ಚಾಣಕ್ಯರ ನೀತಿಗಳು ಇಂದಿನ ಕಾಲಕ್ಕೂ ಪ್ರಸ್ತುತವೆಂದು ಹೇಳಲಾಗುತ್ತದೆ. ಚಾಣಕ್ಯನ ನೀತಿಗಳನ್ನು ಅನುಸರಿಸುವವನು ಯಾವಾಗಲೂ ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಆಚಾರ್ಯ  ಚಾಣಕ್ಯ,  ಅನೇಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹೇಳಿದ್ದಾರೆ. ಮನುಷ್ಯನ ಯಾವ ಅಭ್ಯಾಸಗಳಿಂದ ಮನೆಯಲ್ಲಿ ದರಿದ್ರ ನೆಲೆಯಾಗುತ್ತದೆ. ಯಾವ ಅಭ್ಯಾಸಗಳಿಂದ ದೂರವಿದ್ದರೆ ಲಕ್ಷ್ಮೀ ದೇವಿಯ ಕೃಪೆ ಸಿಗುತ್ತದೆ ಎನ್ನುವುದನ್ನು ಕೂಡಾ ತನ್ನ ನೀತಿಯಲ್ಲಿ ಹೇಳಿದ್ದಾರೆ.  


ಇದನ್ನೂ ಓದಿ : Peepal Leaf Remedies: ಹಣಕಾಸಿನ ತೊಂದರೆಯಿಂದ ಹೊರಗಳು ಅರಳಿ ಎಲೆಗಳ ಈ ಕ್ರಮ ಅನುಸರಿಸಿ
 
 1. ಹಣದ  ಬಗ್ಗೆ ದುರಾಸೆ ಬೇಡ : 
ಯಾರೀ ಆಗಲಿ ಇತರರ ಸಂಪತ್ತಿಣ ಬಗ್ಗೆ ದುರಾಸೆಯನ್ನು ಹೊಂದಬಾರದು ಎಂದು ಚಾಣಾಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ.  ಜೀವನದಲ್ಲಿ ಹಣಕ್ಕಾಗಿ ಕಠಿಣ ಪರಿಶ್ರಮ ಅಗತ್ಯ. ಕಷ್ಟಪಡದೇ ಗಳಿಸಿದ ಹಣ ಹೆಚ್ಚು ಸಮಯ ಉಳಿಯುವುದಿಲ್ಲ. ಮಾತ್ರವಲ್ಲ, ದುರಾಸೆ ಪಡುವವರಿಗೆ ಯಾವತ್ತೂ ತೃಪ್ತಿ ಎನ್ನುವುದು ಇರುವುದೇ ಇಲ್ಲ. ದುರಾಸೆ ಪಡುವ ಮನುಷ್ಯರ ಬಗ್ಗೆ  ಲಕ್ಷ್ಮೀ ದೇವಿ ಕೂಡಾ ಕೋಪಗೊಳ್ಳುತ್ತಾಳೆ. 


2. ಅನಗತ್ಯವಾಗಿ ಹಣವನ್ನು ವ್ಯರ್ಥ ಮಾಡುವುದು : 
ಚಾಣಕ್ಯ ನೀತಿಯ ಪ್ರಕಾರ, ಅನಗತ್ಯ ಹಣವನ್ನು ಖರ್ಚು ಮಾಡಬಾರದು, ಸಾಧ್ಯವಾದಷ್ಟು ಹಣವನ್ನು ಉಳಿಸಬೇಕು. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡದಂತೆ ಎಚ್ಚರ ವಹಿಸಬೇಕು.  ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ಎಂದರೆ ಅದು ಸಂಪತ್ತಿಗೆ ಮಾಡುವ ಅವಮಾನ.  ಇದರಿಂದ ಸಂಪತ್ತಿನ ದೇವತೆಯಾದ  ಲಕ್ಷ್ಮೀ ಕೋಪಗೊಳ್ಳುತ್ತಾಳೆ. 


3.  ಅಹಂಕಾರ : 
ಆಚಾರ್ಯ ಚಾಣಕ್ಯರ ಪ್ರಕಾರ ಅಹಂಕಾರವೇ ಮನುಷ್ಯನ ದೊಡ್ಡ ಶತ್ರು. ಅಹಂಕಾರಿಯಾದ ವ್ಯಕ್ತಿಗೆ ಮಹಾಲಕ್ಷ್ಮೀ  ಎಂದಿಗೂ ದಯೆ ತೋರುವುದಿಲ್ಲ. ಸಂಪತ್ತಿನ ದೇವತೆಯು ಅಹಂಕಾರದಿಂದ ಇರುವ ಜನರನ್ನು ಬಹುಬೇಗ ಬಿಟ್ಟು ಹೋಗುತ್ತಾಳೆ. 


ಇದನ್ನೂ ಓದಿ : Weekly Horoscope: ಈ ರಾಶಿಯವರು ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ


4. ಜೀವನದಲ್ಲಿ ಯಾರ ಸ್ನೇಹ ಹಿತಕಾರಿ ? 
ಚಾಣಕ್ಯ ನೀತಿಯ ಪ್ರಕಾರ, ಒಬ್ಬರು ವಿದ್ವಾಂಸರು, ವೇದಗಳನ್ನು ತಿಳಿದವರು ಮತ್ತು ಧರ್ಮವನ್ನು ಅನುಸರಿಸುವವರ ಸಹವಾಸ ಮಾಡಬೇಕು. ಅಂತಹ ಜನರ ಸಹವಾಸವು ವ್ಯಕ್ತಿಯನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.