Chanakya Niti For Successful Life - ಆಚಾರ್ಯ ಚಾಣಕ್ಯರು ತನ್ನ ನೀತಿಗಳಲ್ಲಿ ಜೀವನವನ್ನು ಜೀವಿಸುವ ಹಲವು ವಿಧಾನಗಳ ಕುರಿತು ಉಲ್ಲೇಖಿಸಿದ್ದು, ಈ ವಿಧಾನಗಳನ್ನು ಅನುಸರಿಸುವ ಮೂಲಕ ಒಂದು ಉತ್ತಮ ಜೀವನವನ್ನು ವ್ಯಕ್ತಿ ಬದುಕಬಹುದು . ಆಚಾರ್ಯ ಚಾಣಕ್ಯರ ಒಂದು ನೀತಿಯ ಪ್ರಕಾರ ನಾವು ತಿಳಿದು ಅಥವಾ ತಿಳಿಯದೆಯೇ ಕೆಲ ಜನರ ಜೊತೆಗೆ ವಾಸಿಸುವುದರಿಂದ ನಮ್ಮ ಸುಖೀ ಜೀವನ ಕೂಡ ನರಕವಾಗುತ್ತದೆ ಮತ್ತು ನಾವು ನಮ್ಮ ಇಡೀ ಜೀವನ ದುಃಖದಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎನ್ನಲಾಗಿದೆ. ಹೀಗಿರುವಾಗ ಸಮಯ ಕೈತಪ್ಪಿ ಹೋಗುವ ಮುನ್ನವೇ ಇಂತಹ ಜನರಿಂದ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯವಾಗಿದೆ. 


COMMERCIAL BREAK
SCROLL TO CONTINUE READING

ಈ ಜನರು ಜೊತೆಗೆ ಇರುವುದು ಜೀವನವನ್ನೇ ಹಾಳು ಮಾಡುತ್ತದೆ
ಆಚಾರ್ಯ ಚಾಣಕ್ಯರ ಮಾತುಗಳು ಅರಗಿಸಿಕೊಳ್ಳಲು ಕಹಿಯಾಗಿದ್ದರೂ ಕೂಡ ತುಂಬಾ ಕೆಲಸಕ್ಕೆ ಬರುವಂತಹ ಮಾತುಗಳಾಗಿವೆ. ಅವರ ನೀತಿಗಳನ್ನು ಅನುಸರಿಸುವ ವ್ಯಕ್ತಿ ಜೀವನದಲ್ಲಿ ಎಂತಹ ಅಪಾಯ ಎದುರಾದರೂ ಕೂಡ ಸುಲಭವಾಗಿ ಪಾರಾಗುತ್ತಾನೆ. ಆಚಾರ್ಯ ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ ಜೀವನದಲ್ಲಿ ಕೆಲ ಜನರಿಂದ ಅಂತರ ಕಾಯ್ದುಕೊಳ್ಳಲು ಸಲಹೆ ನೀಡಿದ್ದಾರೆ. ಆ ವ್ಯಕ್ತಿಗಳು ಯಾರು ಎಂಬುದನ್ನು ನಾವು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. 

ಮೂರ್ಖ ಶಿಷ್ಯ- ಗುರು ಎಷ್ಟೇ ಯೋಗ್ಯನಾಗಿದ್ದರೂ ಮತ್ತು ಅವನು ಅಪಾರ ಕೀರ್ತಿವಂತನಾಗಿದ್ದರೂ ಕೂಡ ಆತನ ಓರ್ವ ಮೂರ್ಖ ಶಿಷ್ತ್ಯ ಗುರುವಿನ ಜೀವನವನ್ನೇ ದುಃಖಕ್ಕೀಡು ಮಾಡಬಹುದು. ಮೂರ್ಖ ಶಿಷ್ಯ ಕೇವಲ ತನ್ನ ಗುರುವಿಗೆ ತಲೆತಗ್ಗಿಸುವಂತೆ ಮಾಡುವುದಲ್ಲದೆ, ತನ್ನ ಮೂರ್ಖತ್ವದ ಕಾರಣ ಗುರುವಿನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಾನೆ. 


ಇದನ್ನೂ ಓದಿ-Money Dreams : ಈ ಕನಸುಗಳು ಕಂಡರೆ ನಿಮ್ಮಗೆ ನೀರಿನಂತೆ ಹಣ ಹರಿದು ಬರುತ್ತದೆ!

ರೋಗದಿಂದ ಬಳಲುವ ಮತ್ತು ಯಾವಾಗಲು ದುಃಖದಿಂದಲೇ ಕಾಲ ಕಳೆಯುವವರ ನಡುವೆ ಇರಬಾರದು - ಯಾವಾಗಲು ದುಃಖದಲ್ಲಿಯೇ ಬದುಕುವ ಹಾಗೂ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಇಂತಹ ಜನರ ಜೊತೆಗೆ ಇರುವ ವಿದ್ವಾಂಸ ಹಾಗೂ ಸುಖಿ ವ್ಯಕ್ತಿ ಕೂಡ ಕೆಲ ಸಮಯದ ನಂತರ ನಿರಾಶೆಗೆ ಒಳಗಾಗುತ್ತಾನೆ ಮತ್ತು ಆತನು ಕೂಡ ದುಃಖದಿಂದ ಕಾಲ ಕಳೆಯಲು ಆರಂಭಿಸುತ್ತಾನೆ. 


ಇದನ್ನೂ ಓದಿ-Mahamrityunjay Mantra: ಮಹಾಮೃತ್ಯುಂಜಯ ಮಂತ್ರ ಪಠಣದಿಂದ ಅದ್ಭುತ ಪ್ರಯೋಜನ

ಕೆಟ್ಟ ಮಹಿಳೆಯರ ಸಂಗ ಬೇಡ- ಯಾವ ರೀತಿ ಉತ್ತಮ, ಚರಿತ್ರೆಯಿಂದ ಕೂಡಿದ, ಕಲಿತ ಮಹಿಳೆಯ ಸಹವಾಸ ಪುರುಷರ ಜೀವನದಲ್ಲಿ ಯಶಸ್ಸು ಮತ್ತು ಅಪಾರ ಸುಖಕ್ಕೆ ಕಾರಣವಾಗುತ್ತದೆಯೋ, ಅದೇ ರೀತಿ ದುಷ್ಟ ಮಹಿಳೆಯ ಸಂಗ ಪುರಷನ ಜೀವನವನ್ನು ನರಕ ಮಾಡುತ್ತದೆ. ಪತ್ನಿ ಒಂದು ವೇಳೆ ದುಷ್ಟ ಸ್ವಭಾವದವಳಾಗಿದ್ದು, ಯಾವಾಗಲು ಜಗಳದಲ್ಲಿ ನಿರತಳಾಗಿದ್ದರೆ, ಪ್ರಪಂಚದ ಯಾವುದೇ ಸುಖ-ಸಂಪತ್ತು ವ್ಯಕ್ತಿಯ ದುಃಖಗಳನ್ನು ಕಡಿಮೆಮಾಡುವುದಿಲ್ಲ.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.