Chanakya Niti: ಯುವಕರು ಈ ಕೆಟ್ಟ ಅಭ್ಯಾಸಗಳಿಂದ ದೂರ ಉಳಿಯಬೇಕು, ಗುರಿ ಸಾಧನೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆ
Chanakya Niti For Motivation - ಚಾಣಕ್ಯ ನೀತಿ ಯುವಕರಿಗೂ ಕೂಡ ಅವರ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಯುವಕರು ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು. ಇಲ್ಲದಿದ್ದರೆ, ಯಶಸ್ಸನ್ನು ಸಾಧಿಸುವಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.
Chanakya Niti For Success - ಯುವಕರು ತಮ್ಮ ಗುರಿಯ ಬಗ್ಗೆ ಗಂಭೀರವಾಗಿರಬೇಕು ಮತ್ತು ಗುರಿಯ ಪ್ರತಿ ಸಮರ್ಪಿತರಾಗಿರಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ದಾರಿ ತಪ್ಪುವ ಅಥವಾ ತಪ್ಪು ಅಭ್ಯಾಸಗಳಲ್ಲಿ ತೊಡಗಿರುವ ಯುವಕರು ತಮ್ಮ ಭವಿಷ್ಯದಲ್ಲಿ ಯಶಸ್ಸಿನ ಸಂತೋಷ ಅನುಭವಿಸಲು ಸಾಧ್ಯವಿಲ್ಲ. ಯುವಕರು ತಮ್ಮ ಭವಿಷ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು ಎಂದು ಚಾಣಕ್ಯರ ಚಾಣಕ್ಯ ನೀತಿ ಹೇಳುತ್ತದೆ. ಯುವಕರು ಭವಿಷ್ಯಕ್ಕೆ ಅಡಿಪಾಯ ಹಾಕುತ್ತಾರೆ. ಇದನ್ನು ಜೀವನದ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ. ಯುವಾವಸ್ಥೆಯ ಮಹತ್ವವನ್ನು ಅರ್ಥಮಾಡಿಕೊಳ್ಳದವರಿಗೆ ದೇವಿ ಲಕ್ಷ್ಮಿಯ (Goddess Lakshmi) ಆಶೀರ್ವಾದ ಲಭಿಸುವುದಿಲ್ಲ. ಯುವಜನರು ಶಿಕ್ಷಣ, ಆರೋಗ್ಯ ಮತ್ತು ಅವರ ಗುರಿಗಳ ಬಗ್ಗೆ ಮಾತ್ರ ತಿಳಿದಿರಬೇಕು. ಯುವಕರಲ್ಲಿ ಪಡೆದ ಜ್ಞಾನವು ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ, ಈ ಹಂತದಲ್ಲಿ ಒಬ್ಬರು ಈ ಕೆಳಗಿನ ಅಭ್ಯಾಸಗಳಿಂದ ದೂರವಿರಬೇಕು ಎಂದು ಚಾಣಕ್ಯ ನೀತಿ ಸಾರುತ್ತದೆ.
ಆಲಸ್ಯ - ಯುವಕರು ಸೋಮಾರಿತನದಿಂದ ದೂರವಿರಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ಯುವಜನರಿಗೆ ನಿದ್ರೆಯಿಂದ ಎಚ್ಚರಿಸುವುದರಿಂದ ಹಿಡಿದು ಮಲಗುವವರೆಗೆ ಒಂದು ನಿಯಮ ಇರಬೇಕು. ಒಬ್ಬ ವ್ಯಕ್ತಿಯು ಶಿಸ್ತಿನ ಮಹತ್ವವನ್ನು ಮರೆತಾಗ ಮಾತ್ರ ಸೋಮಾರಿತನದ ಅಭ್ಯಾಸ ಬೆಳೆಯುತ್ತದೆ. ಸೋಮಾರಿತನವನ್ನು ಒಂದು ರೋಗದಂತೆ ಪರಿಗಣಿಸಲಾಗುತ್ತದೆ. ಆದ್ದರಿಂದ ಯುವಕರು ಅದರಿಂದ ದೂರವಿರಬೇಕು (Chanakya Niti In Kannada).
ಇದನ್ನೂ ಓದಿ-Friendship Day 2021: ಗೆಳೆತನದ ಕುರಿತು Chanakya Niti ಏನ್ ಹೇಳುತ್ತೆ?
ನಷೆ - ಯುವಕರು ಎಲ್ಲಾ ರೀತಿಯ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ಕೆಟ್ಟ ಅಭ್ಯಾಸಗಳು ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಇದು ಯುವಕರ ಪ್ರಗತಿಗೆ ಅಡ್ಡಿಯಾಗುತ್ತದೆ. ಮಾದಕ ವ್ಯಸನವು ಆರೋಗ್ಯ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಸಮರ್ಥ ಮತ್ತು ದಕ್ಷತೆಯ ಹೊರತಾಗಿಯೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ವಂಚಿತನಾಗುತ್ತಾನೆ (Ethics Of Chanakya)
ಇದನ್ನೂ ಓದಿ- Money Making Tips In Chanakya Niti: ಉಳಿತಾಯ ಹಾಗೂ ಹೂಡಿಕೆಯ ಈ ಸಂಗತಿಗಳನ್ನುನೆನಪಿನಲ್ಲಿಡಿ, ಹಣದ ಮುಗ್ಗಟ್ಟು ಎದುರಾಗಲ್ಲ
ದುರ್ಜನರ ಸಂಗ - ಚಾಣಕ್ಯ ನೀತಿ ಯುವಕರು ತನ್ನ ಸಹಪಾಟಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳುತ್ತದೆ. ವ್ಯಕ್ತಿಯ ಅಭಿವೃದ್ಧಿ ಮತ್ತು ಯಶಸ್ಸಿನಲ್ಲಿ ಸಹಪಾಟಿಗಳ ವಿಶೇಷ ಪ್ರಾಮುಖ್ಯತೆ ಇದೆ. ತಪ್ಪು ಸಾಂಗತ್ಯದಿಂದ ದೂರವಿರುವ ಯುವಕರು ತಮ್ಮ ಗುರಿಗಳನ್ನು ಬಹುಬೇಗ ಸಾಧಿಸುತ್ತಾರೆ. ತಪ್ಪಾದ ಸಾಂಗತ್ಯ ಯಶಸ್ಸಿಗೆ ಅಡ್ಡಿಯಾಗಿದೆ. ಎಲ್ಲಾ ರೀತಿಯ ತಪ್ಪು ಸಾಂಗತ್ಯವನ್ನು ಯುವಕರು ತಿರಸ್ಕರಿಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.
ಇದನ್ನೂ ಓದಿ-ಪತ್ನಿಯಲ್ಲಿ ಈ ಮೂರು ಗುಣವಿದ್ದರೆ ಬದುಕು ಬಂಗಾರ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ