ನವದೆಹಲಿ: Ethics Of Chanakya - ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷವಾಗಿರಲಿ ಅಥವಾ ಅತೃಪ್ತನಾಗಿರಲಿ, ಅದು ಅವನ ಕಾರ್ಯಗಳು, ನಡವಳಿಕೆ ಮತ್ತು ಅವನ ಸುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಇದೇ ಕಾರಣದಿಂದ ಧಾರ್ಮಿಕ ಗ್ರಂಥಗಳಿಂದ ಹಿಡಿದು ವಿದ್ವಾಂಸರವರೆಗೆ ಎಲ್ಲರೂ ವ್ಯಕ್ತಿಯ ಸಹವಾಸ ಚೆನ್ನಾಗಿರಬೇಕೆಂದು ಹೇಳುತ್ತಾರೆ. ಆಚಾರ್ಯ ಚಾಣಕ್ಯ  ತಮ್ಮ ಚಾಣಕ್ಯ ನೀತಿಯಲ್ಲಿಯೂ ಕೂಡ ಈ ಬಗ್ಗೆ ಬರೆದಿದ್ದಾರೆ. ಕಲಿತ ಮತ್ತು ಯಶಸ್ವಿ ವ್ಯಕ್ತಿ ಕೂಡ ಅಂತಹ ವ್ಯಕ್ತಿಯ ಸಹವಾಸದಲ್ಲಿ ಇರುವುದರ ಮೂಲಕ ಅತೃಪ್ತಿಕರ ಜೀವನವನ್ನು ನಡೆಸಬೇಕಾಗುವ ಪ್ರಸಂಗ ಎದುರಾಗುತ್ತದೆ. ಅವರು ತಮ್ಮ ನೀತಿಯಲ್ಲಿ (Chanakya Niti In Kannada) ಒಟ್ಟು ಮೂವರು ವ್ಯಕ್ತಿಗಳ ಸಹವಾಸ ಬೇಡ ಎಂದು ಹೇಳಿದ್ದಾರೆ. ಹಾಗಾದರೆ ಯಾರು ಆ 3 ವ್ಯಕ್ತಿಗಳು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

1. ದುಷ್ಟ ಪತ್ನಿ: ಪತ್ನಿ ಸುಸಂಸ್ಕೃತ, ಚಾರಿತ್ರ್ಯವಂತ ಮತ್ತು ಬುದ್ಧಿವಂತಳಾಗಿದ್ದರೆ, ಅವಳು ಜೀವನದಲ್ಲಿ ಉತ್ತಮವಾಗಿ ಮುನ್ನಡೆಯುತ್ತಾಳೆ ಮತ್ತು ಪ್ರತಿ ಹಂತದಲ್ಲೂ ತನ್ನ ಪತಿಗೆ ಉತ್ತಮ ಬೆಂಬಲವಾಗುತ್ತಾಳೆ ಎಂದು ಚಾಣಕ್ಯ ತಮ್ಮ ನೀತಿ ಹೇಳುತ್ತಾರೆ. ಇದೇ ವೇಳೆ  ದುಷ್ಟ ಹೆಂಡತಿಯ ಸಹವಾಸವು ಯಶಸ್ವಿ ಮತ್ತು ಬುದ್ಧಿವಂತ ವ್ಯಕ್ತಿಯ ಜೀವನವನ್ನು ಸುಲಭವಾಗಿ ನರಕವಾಗಿಸುತ್ತದೆ. ಆದ್ದರಿಂದಲೇ ಬಾಳಸಂಗಾತಿ ಚೆನ್ನಾಗಿರುವುದು ತುಂಬಾ ಮುಖ್ಯ.

2. ಮೂರ್ಖ ಶಿಷ್ಯ: ಆಚಾರ್ಯ ಚಾಣಕ್ಯರು ಹೇಳುವಂತೆ ಗುರುವು ಮಹಾನ್ ವಿದ್ವಾಂಸನಾಗಿದ್ದರೆ ಮತ್ತು ಅವರಿಗೆ ಮೂರ್ಖ ಶಿಷ್ಯ ದೊರೆತರೆ, ಅವನ ಜೀವನವು ಅತೃಪ್ತಿ ಹೊಂದಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದಿದ್ದಾರೆ. ಗುರುವು ತನ್ನ ಶಿಷ್ಯನಿಗೆ ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟಗಳನ್ನೂ ಜಯಿಸಲು ಹೇಳಿಕೊಡುತ್ತಾನೆ, ಆದರೆ ಶಿಷ್ಯನು ಮೂರ್ಖನಾಗಿದ್ದರೆ, ಕಲಿತ ಗುರು ಕೂಡ ಅವನಿಗೆ ಏನನ್ನೂ ಕಲಿಸಲು ಸಾಧ್ಯವಿಲ್ಲ. ಇಂತಹ ಶಿಷ್ಯನು ಗುರುವಿನ ಇಮೇಜ್ ಹಾಳುಮಾಡುತ್ತಾನೆ.


ಇದನ್ನೂ ಓದಿ-Weekly Horoscope : ಈ ರಾಶಿಯವರು ಅದೃಷ್ಟವಂತರು, ಅಧಿಕ ಹಣ ಗಳಿಸುತ್ತಾರೆ : ಈ ವಾರದ ರಾಶಿ ಭವಿಷ್ಯ ಹೇಗಿದೆ ನೋಡಿ

3.ದುಃಖದಿಂದ ಇರುವ ವ್ಯಕ್ತಿ: ಒಬ್ಬ ಯಶಸ್ವಿ ಮತ್ತು ಅತ್ಯಂತ ಬುದ್ಧಿವಂತ ವ್ಯಕ್ತಿಯು ಯಾವಾಗಲು ಅತೃಪ್ತರಿಂದ ಸುತ್ತುವರೆದಿದ್ದರೆ, ಕೆಲವೇ ಸಮಯದಲ್ಲಿ ಅವನೂ ಕೂಡ ಅತೃಪ್ತಿ ಹೊಂದಲು ಪ್ರಾರಂಭಿಸುತ್ತಾನೆ. ಜನರ ನಕಾರಾತ್ಮಕತೆಯು ಅವನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಕೆಟ್ಟದ್ದನ್ನು ಯೋಚಿಸುವಂತೆ ಒತ್ತಾಯಿಸುತ್ತದೆ. ಆದ್ದರಿಂದ ಅಂತಹವರಿಂದ ದೂರವಿರಬೇಕು.


ಇದನ್ನೂ ಓದಿ-Know Your Personality: ಕುರ್ಚಿಯ ಮೇಲೆ ನೀವು ಕುಳಿತುಕೊಳ್ಳುವ ಶೈಲಿ ನಿಮ್ಮ ಸ್ವಭಾವ ಹೇಳುತ್ತದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.