Lucky Wife for Husband: ಆಚಾರ್ಯ ಚಾಣಕ್ಯರು ಓರ್ವ ಮಹಾನ್ ತತ್ವಜ್ಞಾನಿ ಮತ್ತು ರಾಜತಾಂತ್ರಿಕರಾಗಿದ್ದರು. ಅವರು ತಮ್ಮ ನೀತಿ ಶಾಸ್ತ್ರವಾಗಿರುವ ಚಾಣಕ್ಯ ನೀತಿಯಲ್ಲಿ ಮಾನವ ಜೀವನ ಮತ್ತು ಅದರಲ್ಲಿ ಯಶಸ್ಸನ್ನು ಸಾಧಿಸುವ ಬಗ್ಗೆ ಹಲವು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಚಾಣಕ್ಯರ ಈ ನೀತಿಗಳು ಇಂದಿಗೂ ಕೂಡ ಪ್ರಾಸಂಗಿಕವಾಗಿವೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿವೆ. ಇಂದಿನ ಮನುಷ್ಯರ ಜೀವನಕ್ಕೂ ಕೂಡ ಅವು ಅನ್ವಯಿಸುವನ್ತಿವೆ. ಒಬ್ಬ ವ್ಯಕ್ತಿಯು ಈ ನೀತಿಗಳನ್ನು ಅನುಸರಿಸಿದರೆ ಅವನು ಜೀವನದಲ್ಲಿ ಎಂದಿಗೂ ವಿಫಲನಾಗುವುದಿಲ್ಲ. ಚಾಣಕ್ಯ ವೈವಾಹಿಕ ಜೀವನದ ಬಗ್ಗೆಯೂ ಕೂಡ ತಮ್ಮ ನೀತಿ ಶಾಸ್ತ್ರದಲ್ಲಿ ಮಾಹಿತಿ ನೀಡಿದ್ದಾರೆ. ಚಾಣಕ್ಯರ ಪ್ರಕಾರ, ಕೆಲ ಮಡದಿಯರು ತಮ್ಮ ಕೈಹಿಡಿದವನೆಗೆ ತುಂಬಾ ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸ್ವಚ್ಛ ಮನಸ್ಸು ಹೊಂದಿರುವ ಮಡದಿ
ಪದೇ ಪದೇ ಅಳುವ ಅಳುಮುಂಜಿ ಮತ್ತು ಕಿರುಚಾಡುವ, ಕೂಗಿಕೊಳ್ಳುವ ಪತ್ನಿಯರು ಯಾವಾಗಲು ತಮ್ಮ ಪತಿಯರಿಗೆ ಅದೃಷ್ಟವನ್ನೇ ತರುತ್ತಾರೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅಷ್ಟೇ ಅಲ್ಲ ಇಂತಹ ಮಹಿಳೆಯರನ್ನು ಗೌರವಿಸಬೇಕು. ಇಂತಹ ಮಹಿಳೆಯರ ಮನಸ್ಸು ತುಂಬಾ ಸ್ವಚ್ಛವಾಗಿರುತ್ತದೆ. ಕಿರುಚಾಡುವ ಮೂಲಕ ಇಂತಹ ಮಹಿಳೆಯರು ತಮ್ಮ ಮನಸ್ಸಿನಲ್ಲಿರುವ ಎಲ್ಲಾ ದ್ವೇಷ ಭಾವವನ್ನು ಹೊರಹಾಕುತ್ತಾರೆ ಮತ್ತು ಮನಸ್ಸಿನಲ್ಲೇನು ಇಟ್ಟುಕೊಳ್ಳುವುದಿಲ್ಲ ಎನ್ನುತ್ತಾರೆ.


ಸಹಿಷ್ಣುಗಳಾಗಿರುತ್ತಾರೆ
ಆಚಾರ್ಯ ಚಾಣಕ್ಯ ಹೇಳುವಂತೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಹಿಷ್ಣುಗಳಾಗಿರುತ್ತಾರೆ. ಅನೇಕ ಮಹಿಳೆಯರು ತಮ್ಮ ಮನೆಗಳಲ್ಲಿ ಸಾಕಷ್ಟು ಕಿರುಚಾಟ ನಡೆಸುತ್ತಾರೆ. ಪತ್ನಿ ಈ ರೀತಿ ವರ್ತಿಸಿದರೆ ಪತಿಗೆ  ಸಿಟ್ಟು ಬರುವುದು ಸಹಜ, ಆದರೆ ಇಂತಹ ಮಹಿಳೆಯರ ಬಗ್ಗೆ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಬೇರೆ ತರ್ಕವನ್ನೇ ಮಂಡಿಸಿದ್ದಾರೆ.


ಭಾಗ್ಯ
ಚಾಣಕ್ಯರ ಪ್ರಕಾರ, ಇಂತಹ ಮಹಿಳೆಯರು ತುಂಬಾ ಸೂಕ್ಷ್ಮರಾಗಿರುತ್ತಾರೆ ಮತ್ತು ಹೆಚ್ಚು ಸಂವೇದನಶೀಲ ಮಹಿಳೆಯರು ಕಿರುಚಲು ಮತ್ತು ಅಳಲು ಪ್ರಾರಂಭಿಸುತ್ತಾರೆ, ಆದರೆ ಇಂತಹ ಮಹಿಳೆಯನ್ನು ಯಾರು ಮದುವೆಯಾಗುತ್ತಾರೆ, ಅವರ ಅದೃಷ್ಟದ ಬಾಗಿಲೆ ತೆರೆಯುತ್ತದೆ.


ಇದನ್ನೂ ಓದಿ-ತುಂಬಾ Dominating ಆಗಿರುತ್ತಾರೆ ಈ ರಾಶಿಯ ಹುಡುಗಿಯರು!


ಮಂಗಳಕರ
ಈ ರೀತಿ ಇರುವ ಮಹಿಳೆಯರನ್ನು ಕುಟುಂಬದ ಪಾಲಿಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ಮನಸ್ಸಿನಲ್ಲಿ ಏನನ್ನೂ ಮರೆಮಾಚುವುದಿಲ್ಲ. ಮನಸ್ಸಿನ ಶುದ್ಧತೆಯಿಂದಾಗಿ, ಇಂತಹ ಮಹಿಳೆಯರಿಗೆ ಯಾರ ಮೇಲೂ ದುರುದ್ದೇಶವಿರುವುದಿಲ್ಲ. ಹೀಗಾಗಿ ಅವರು ಎಂದಿಗೂ ಯಾರ ಹೃದಯವನ್ನು ಕೂಡ ಘಾಸಿಗೊಳಿಸುವುದಿಲ್ಲ, ಈ ಮಹಿಳೆಯರು ಯಾವಾಗಲೂ ಇತರರ ಭಾವನೆಗಳಿಗೆ ಬೆಲೆ ಕೊಡುವವರಾಗಿರುತ್ತಾರೆ.


ಇದನ್ನೂ ಓದಿ-ಪ್ರತಿದಿನ ಈ ಒಂದು ವಸ್ತುವನ್ನು ಮನೆಯಲ್ಲಿ ಸುಡಿ, ಹಣದ ಮಳೆ ಸುರಿಯುತ್ತೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.