ನವದೆಹಲಿ: ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯ(Chanakya Niti)ಅವರು ತಮ್ಮ ನೀತಿಗಳ ಮೂಲಕ ಹೇಗೆ ಉತ್ತಮ ಜೀವನ ನಡೆಸಬೇಕೆಂದು ಹೇಳಿದ್ದಲ್ಲದೇ, ಜೀವನದ ಮೌಲ್ಯವನ್ನೂ ವಿವರಿಸಿದ್ದಾರೆ. ಅವರ ನೀತಿಗಳನ್ನು ಅನುಸರಿಸುವ ಮೂಲಕ ಒಬ್ಬ ವ್ಯಕ್ತಿಯು ಸಾರ್ಥಕ, ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸಬಹುದು. ಜೀವನದಲ್ಲಿ ಯಾವುದೇ ಉದ್ದೇಶವಿಲ್ಲದಿದ್ದರೆ ಮತ್ತು ವಿಶೇಷವೆಂದು ಪರಿಗಣಿಸಲಾದ 4 ವಿಷಯಗಳಲ್ಲಿ ಯಾವುದನ್ನೂ ಸಾಧಿಸಲು ಸಾಧ್ಯವಾಗದಿದ್ದರೆ ನಿಮ್ಮ ಜೀವನವು ನಿಷ್ಪ್ರಯೋಜಕವೆಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಇಂತಹ ವ್ಯಕ್ತಿಯ ಜೀವನ(Chanakya Niti For Life)ವು ಅರ್ಥಹೀನವಾಗಿರುತ್ತದೆ ಅಂತಾ ಅವರು ಹೇಳಿದ್ದಾರೆ.  


COMMERCIAL BREAK
SCROLL TO CONTINUE READING

ಯಾವುದೇ ವ್ಯಕ್ತಿ ಇದನ್ನು ಸಾಧಿಸುವುದು ಮುಖ್ಯ


ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಯ ಜೀವನಕ್ಕೆ ಬೆಲೆಯಿಲ್ಲ, ಆದರೆ ಆತನ ಜೀವನ(Chanakya Niti Life Lessons)ದಲ್ಲಿನ ಉದ್ದೇಶದ ಕೊರತೆಯು ಅವನನ್ನು ನಿಷ್ಪ್ರಯೋಜಕನನ್ನಾಗಿ ಮಾಡುತ್ತದೆ. ಇದಲ್ಲದೆ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ 4 ವಿಶೇಷ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಇವುಗಳಲ್ಲಿ ಒಂದನ್ನಾದರೂ ಪಡೆಯಲು ಸಾಧ್ಯವಾಗದಿದ್ದರೆ ಆತನ ಜೀವನವು ನಿಷ್ಪ್ರಯೋಜಕವಾಗುತ್ತದೆ. ಯಾವವು ಈ 4 ವಿಷಯಗಳು ಅಂತೀರಾ..?


ಇದನ್ನೂ ಓದಿ: Sun Transit 2022: ಶೀಘ್ರದಲ್ಲಿಯೇ ಈ 4 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ


ಕರ್ಮ: ಮನುಷ್ಯನು ಕರ್ಮ ಮಾಡಲು ಭೂಮಿಯ ಮೇಲೆ ಹುಟ್ಟಿದ್ದಾನೆ. ನಟಿಸದೇ ಅಂದರೆ ಜೀವನದಲ್ಲಿ ಏನನ್ನಾದರೂ ಮಾಡದೆ ಕೈಕಟ್ಟಿ ಕುಳಿತರೆ ಅವರ ಬದುಕು ನಿಷ್ಪ್ರಯೋಜಕವಾಗುತ್ತದೆ. ಇಂತಹ ವ್ಯಕ್ತಿಯು ತನಗೆ(Chanakya Niti Money) ಮತ್ತು ತನ್ನ ಇಡೀ ಕುಟುಂಬಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತಾನೆ.


ಧರ್ಮ: ಒಬ್ಬ ವ್ಯಕ್ತಿ ತನ್ನ ಜೀವನವನ್ನು ಧರ್ಮಕ್ಕಾಗಿ ಬಳಸಬೇಕು. ಇದರಿಂದ ಆತನ ಜೀವನ ಮತ್ತು ಮುಂದಿನ ಜನ್ಮಗಳು ಕೂಡ ಚೆನ್ನಾಗಿರುತ್ತದೆ. ಇವರು ಸಾಕಷ್ಟು ಪುಣ್ಯ ಸಂಪಾದಿಸಿ ಉತ್ತಮ ಜೀವನ ನಡೆಸುತ್ತಾರೆ.  


ಸಂಪತ್ತು: ಆಚಾರ್ಯ ಚಾಣಕ್ಯ ಅವರು ಸಂತೋಷದ ಜೀವನ(Chanakya Niti Jeevan Mantra) ನಡೆಸಲು ಹಣವು ಬಹಳ ಮುಖ್ಯ ಎಂದು ಹೇಳುತ್ತಾರೆ. ಇದರೊಂದಿಗೆ ಹಣವನ್ನು ಸರಿಯಾದ ರೀತಿಯಲ್ಲಿ ಗಳಿಸುವುದು ಮುಖ್ಯವಾಗಿದೆ. ಪ್ರಾಮಾಣಿಕತೆ, ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದ ಹಣ ಸಂಪಾದಿಸಲು ಸಾಧ್ಯವಾಗದ ವ್ಯಕ್ತಿ ಜೀವನದಲ್ಲಿ ಸುಖವಾಗಿರುವುದು ಕಷ್ಟ.


ಇದನ್ನೂ ಓದಿ: Magh Purnima 2022: ಮಾಘ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ


ಮೋಕ್ಷ: ಒಬ್ಬ ವ್ಯಕ್ತಿಯು ಮಾನವನಾಗಿ ಹುಟ್ಟುವ ಅವಕಾಶವನ್ನು ಪಡೆಯುತ್ತಾನೆ. ಇದರಿಂದ ಅವನು ತನ್ನ ಧಾರ್ಮಿಕ ಕಾರ್ಯಗಳ ಮೂಲಕ ಮೋಕ್ಷವನ್ನು ಪಡೆಯಬಹುದು. ಜನನ ಮರಣ ಚಕ್ರದಿಂದ ಮುಕ್ತಿ ಹೊಂದಲು ಮೋಕ್ಷ ತುಂಬಾ ಮುಖ್ಯ. ಆದರೆ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮತ್ತು ಧರ್ಮವನ್ನು ಮಾಡದಿದ್ದರೆ ಮೋಕ್ಷ ಪಡೆಯುವುದು ಅಸಾಧ್ಯ. ಇಂತಹವರ ಜೀವನವೂ ನಿಷ್ಪ್ರಯೋಜಕವಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.